Advertisement

ಪುಟಾಣಿಗಳ ಕುಂಚದಲ್ಲಿ ಅರಳಿದ ಪ್ರಕೃತಿ ಸೊಬಗು

10:00 PM Dec 08, 2019 | Lakshmi GovindaRaj |

ಮೈಸೂರು: ನಗರದ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪ್ರಕೃತಿ ಸೊಬಗಿನ ಅಚ್ಚರಿಗಳು, ಸಾಮಾಜಿಕ ಕಳಕಳಿಯನ್ನು ಬಿಳೆಯ ಹಾಳೆಗಳ ಮೇಲೆ ಅರಳಿಸಿ ಎಲ್ಲರ ಗಮನ ಸೆಳೆದರು.

Advertisement

ನಗರದ ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ದಸರಾ ವಸ್ತುಪ್ರದರ್ಶನ, ಲಲಿತಕಲಾ ಮತ್ತು ಕರಕುಶಲ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಚಿತ್ರ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪ್ರಕೃತಿ, ಸುತ್ತಲಿನ ಪರಿಸರದ ಸೊಬಗಿನ ಅಚ್ಚರಿಗಳು, ಸಾಮಾಜಿಕ ಕಳಕಳಿ ತಮ್ಮದೇ ರೀತಿಯಲ್ಲಿ ಬಿಡಿಸಿ ಅರಳಿಸಿ ಮನ ಗೆದ್ದರು.

12 ವಿದ್ಯಾರ್ಥಿಗಳು ಭಾಗಿ: ಸ್ಪರ್ಧೆಯಲ್ಲಿ ನಗರದ ವಿವಿಧ ಶಾಲಾ-ಕಾಲೇಜುಗಳು 120 ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕೈಚಳಕ ತೋರಿದರು. ಎಲ್‌ಕೆಜಿ-ಯುಕೆಜಿ, 1ರಿಂದ 4ನೇ ತರಗತಿ, 4ರಿಂದ 7ನೇ ತರಗತಿ, 8ರಿಂದ 10ನೇ ತರಗತಿ ಹಾಗೂ ಕಾಲೇಜು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಮದ್ಯಪಾನದ ಬಗ್ಗೆ ಜಾಗೃತಿ: ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಕೃತಿ ಸೊಬಗು, ಚಿಣ್ಣರ ಆಟಗಳು, ಬೆಟ್ಟ, ಗುಡ್ಡಗಳನ್ನು ಚಿತ್ರಿಸಿ ಗಮನ ಸೆಳೆದರು. ಪ್ರೌಢಶಾಲಾ ವಿದ್ಯಾರ್ಥಿಗಳು ಮದ್ಯಪಾನದ ಬಗ್ಗೆ ಜಾಗೃತಿ ಮೂಡಿಸಿದರೆ, ಕಾಲೇಜು ವಿದ್ಯಾರ್ಥಿಗಳು ಮಹಿಳೆಯರ ಬಗ್ಗೆ ಸಮಾಜ ಕಳಕಳಿ ಹಾಗೂ ಅವರನ್ನು ರಕ್ಷಣೆ ಮಾಡಬೇಕು ಎಂಬುದನ್ನು ತಮ್ಮ ಅರಿವಿಗೆ ಬಂದಂತೆ ಚಿತ್ರಿಸಿದ್ದು, ವಿಶೇಷವಾಗಿತ್ತು.

ಚಿತ್ರಕಲೆ ಸ್ಪರ್ಧೆ ವಿಜೇತರ ವಿವರ: ಎಲ್‌ಕೆಜಿಯಿಂದ ಯುಕೆಜಿ ವಿಭಾಗ: ತೀರ್ಥಸೋನಿ(ಪ್ರ), ಅರ್ಜಿತ್‌ ವಿಜಯ್‌(ದ್ವಿ), ಚಂದನಜ್ಞಾನವಿ(ತೃ), ಪುನರ್ವಿ, ಧ್ರುತಿ, ತಿಜಿಲ್‌ ಎ.ಸಿದ್ಧಾರ್ಥ್, ಕೆ.ಎಸ್‌.ಧಾರ್ಮಿಕ್‌(ಸಮಾಧಾನಕರ) ಬಹುಮಾನ ಪಡೆದುಕೊಂಡರು.

Advertisement

1ರಿಂದ 4ನೇ ತರಗತಿ ವಿಭಾಗ: ವಿನಿತ್‌ ಕುಮಾರ್‌(ಪ್ರ), ಕೃಶ್ವಿ‌ನಿ ವಿಜಯ್‌(ದ್ವಿ), ಎಸ್‌.ಕ್ಷಿತಿ(ತೃ), ಆರ್‌.ಧ್ರುಶನ್‌, ಸಾತ್ವಿಕ್‌, ವೇದಶ್ರೀ, ದತ್ತದೀಪ್‌, ನಿಕ್ಷೇಪ್‌ ಎಸ್‌.ಕುಮಾರ್‌(ಸಮಾಧಾನಕರ) ಬಹುಮಾನ ಪಡೆದುಕೊಂಡರು.

5ರಿಂದ 8ನೇ ತರಗತಿ ವಿಭಾಗ: ವೈ.ಸೋಹನ್‌ ಕುಮಾರ್‌ (ಪ್ರ), ಎ.ಎಸ್‌.ಸೋನಿಕಾ(ದ್ವಿ), ಎಂ.ಎನ್‌.ಕುಶಾಲ್‌(ತೃ), ವಂಶಿಕ ಅಗರ್‌ವಾಲ್‌, ಶರಣ್ಯ ಎಸ್‌.ಕುಮಾರ್‌, ಸಂಕೇತ್‌, ಎಸ್‌.ವಿನುತ, ವಿ.ಯಶಸ್ವಿನಿ, ನೇಹ ಎಸ್‌.ಕುಮಾರ್‌(ಸಮಾಧಾನಕರ) ಬಹುಮಾನ ಪಡೆದುಕೊಂಡರು.

8ರಿಂದ 10ನೇ ತರಗತಿ: ಸಾಕ್ಷಿ ಸಿ.ಶೆಟ್ಟಿ(ಪ್ರ), ಗ್ರೀಷ್ಮ ವಿ.ಗೌಡ(ದ್ವಿ), ಅರ್ನವ್‌ ಎಸ್‌.ನಿಶಾಂತ್‌(ತೃ), ಸಂಜುಲ, ಆರ್‌.ಧ್ರುತಿ, ಸಿ.ಗೌರಿಶ್ರೀ, ಸಿ.ಡಿ.ಪರಿಚಿತ, ಎಂ.ಸಿ.ಭಾರ್ಗವಿ(ಸಮಾಧಾನಕರ) ಬಹುಮಾನ ಪಡೆದುಕೊಂಡರು.

ಪಿಯುಸಿ ವಿಭಾಗ: ಎಂ.ತೇಜಸ್ವಿನಿ(ಪ್ರ), ಎಚ್‌.ಎಸ್‌.ಶಂಕರ್‌(ದ್ವಿ), ಸಿ.ಅಂಕಿತಾ(ತೃ). ಬಹುಮಾನ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next