Advertisement
ಇದು ಪುತ್ತೂರು ಪೇಟೆಯ ಸ್ಥಿತಿ. ಕಾನೂನು ಸಮರ್ಪಕ ಜಾರಿ ಆಗುತ್ತಿಲ್ಲ ಎನ್ನುವುದಕ್ಕೆ ಉದಾಹರಣೆ. ಬ್ಯಾನರ್ ಹಾಕುವವರು ಆದೇಶಕ್ಕೆ ಕಿಮ್ಮತ್ತು ಕೊಡುತ್ತಿಲ್ಲ. ಇದನ್ನು ಅರ್ಥ ಮಾಡಿಸುವ ದಾರಿ ಬಗ್ಗೆಯೂ ನಗರಸಭೆ ತಲೆ ಕೆಡಿಸಿಕೊಳ್ಳದ ಪರಿಣಾಮ ತೆರವು ಮಾಡಿದ ಮರುದಿನ ಮತ್ತೆ ಬ್ಯಾನರ್ ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
Related Articles
ಡಿವೈಡರ್ ನಡುವಿರುವ ವಿದ್ಯುತ್ ಲೈಟ್‌ಗಳು ಸಾಕಷ್ಟು ಬಾರಿ ಕೈಕೊಡುತ್ತವೆ. ನಗರಸಭೆ ತುರ್ತು ಕಾಮಗಾರಿಗೆ ಮುಂದಾಗುತ್ತವೆ. ಇಂತಹ ಸಂದರ್ಭ ಬ್ಯಾನರ್, ಧ್ವಜಗಳು ವಿದ್ಯುತ್ ಕಂಬ ಏರಲು ಅಡ್ಡಿಯಾಗುತ್ತವೆ. ರಾತ್ರಿ ವೇಳೆಯಂತೂ ಇಂತಹ ಅಡಚಣೆ ಎದುರಾದರೆ, ಕಾರ್ಮಿಕರು ಅರ್ಧದಲ್ಲೇ ಕೆಲಸ ಬಿಟ್ಟು ಹೋಗುವಂತಾಗುತ್ತದೆ.
Advertisement
ಪುನರಾವರ್ತನೆ ಏಕೆ?ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಹಾಕಿದರೆ, ಕಾರ್ಯಕ್ರಮ ಮುಗಿದ ತಕ್ಷಣ ತೆರವು ಮಾಡುವ ಜವಾಬ್ದಾರಿ ಸಂಘಟಕರದ್ದು. ಅನುಮತಿ ಪಡೆದುಕೊಂಡೇ ಬ್ಯಾನರ್ ಹಾಕಬೇಕೆಂಬ ಕರಾರಿದೆ. ಇದೇ ರೀತಿ ಡಿವೈಡರ್‌ನ ವಿದ್ಯುತ್ ಕಂಬಗಳಿಗೂ ನಿಯಮವಿದೆ. ಆದರೆ ಕಾರ್ಯಕ್ರಮ ಮುಗಿದ ಬಳಿಕ ನಗರಸಭೆಯೇ ತೆರವು ಮಾಡುತ್ತದೆ ಎಂಬ ಉದಾಸೀನವೂ ಇದರ ಹಿಂದಿರಬಹುದು. ಪದೇ ಪದೇ ಬ್ಯಾನರ್ ಹಾಕುತ್ತಿದ್ದರೂ, ನಗರಸಭೆ ಮೌನವಾಗಿರುವುದು ಪುನರಾವರ್ತನೆಗೆ ಕಾರಣ ಎನ್ನಲಾಗಿದೆ. ಬೇಕಿದೆ ಶಾಶ್ವತ ಪರಿಹಾರ
ಡಿವೈಡರ್ ನಡುವಿರುವ ಖಾಲಿ ಜಾಗದಲ್ಲಿ ಜಾಹೀರಾತು ಫಲಕ ಅಳವಡಿಸಲು ಅವಕಾಶ ಇದೆ. ಆದರೆ ಅದಕ್ಕೆ ಕೆಲ ಮಾನದಂಡಗಳಿವೆ. ನಗರಸಭೆ ಅನುಮತಿ ಪಡೆದುಕೊಂಡು, ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ರಸ್ತೆಗೆ ಅಡ್ಡವಾಗಿ ಫಲಕ ಹಾಕುವಂತಿಲ್ಲ. ಈಗ ಇರುವ ಎಲ್ಲ ಬ್ಯಾನರ್‌ಗಳು ರಸ್ತೆಗೆ ಅಡ್ಡವಾಗೇ ಇವೆ. ಇದಕ್ಕೆ ನಗರಸಭೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂಬ ಆಗ್ರಹ ಸಾರ್ವಜನಿಕರದ್ದು. ಏಕೆ ಅಪಾಯ?
ಡಿವೈಡರ್‌ನಲ್ಲಿ ಫ್ಲೆಕ್ಸ್, ಬ್ಯಾನರ್, ಧ್ವಜ ಅಳವಡಿಸಿದರೆ ಎದುರಾಗುವ ಅಪಾಯದ ಬಗ್ಗೆ ‘ಸುದಿನ’ ಸಾಕಷ್ಟು ಬಾರಿ ವರದಿ ಪ್ರಕಟಿಸಿದೆ. ಬ್ಯಾನರ್‌ನ ಮೇಲ್ಭಾಗ ಮಾತ್ರ ಕಟ್ಟಲಾಗುತ್ತದೆ. ಇದು ಗಾಳಿಗೆ ವಾಲಾಡುತ್ತಾ, ದ್ವಿಚಕ್ರ ವಾಹನ ಸವಾರರ ಮುಖಕ್ಕೆ ಬಡಿಯುತ್ತದೆ. ಒಂದು ವೇಳೆ ಕೆಳಭಾಗದಿಂದಲೂ ಕಟ್ಟಿದ್ದರೆ, ಸ್ವಲ್ಪ ದಿನದಲ್ಲೇ ಗಾಳಿಯ ಒತ್ತಡಕ್ಕೆ ಮುರಿದು ಬೀಳುತ್ತದೆ. ಇದಕ್ಕೆ ಉದಾಹರಣೆ, ಕಂಬದ ಬದಿಯಲ್ಲೇ ರಾಶಿ ಬಿದ್ದಿರುವ ಬ್ಯಾನರ್‌ಗಳು. ದ್ವಿಚಕ್ರ ವಾಹನ ಸವಾರರ ಹಿತ ಕಾಯಬೇಕಾದ ಜವಾಬ್ದಾರಿ ನಗರಸಭೆ ಮೇಲಿದೆ. ಶಾಶ್ವತ ಪರಿಹಾರಕ್ಕೆ ಚಿಂತನೆ
ಡಿವೈಡರ್ ವಿದ್ಯುತ್ ಕಂಬದಲ್ಲಿರುವ ಬ್ಯಾನರ್‌ಗಳು ಪುತ್ತೂರು ಪೇಟೆಯ ಅಂದಗೆಡಿಸುತ್ತಿವೆ. ಮಾತ್ರವಲ್ಲ ಇದು ದ್ವಿಚಕ್ರ ಸವಾರರಿಗೆ ತುಂಬಾ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಈಗಾಗಲೇ ಬ್ಯಾನರ್ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಮತ್ತೆ ಪುನಃ ಬ್ಯಾನರ್ ಹಾಕಲಾಗಿದೆ. ಈ ಬಗ್ಗೆ ಶಾಶ್ವತ ಪರಿಹಾರ ಕೈಗೊಳ್ಳಲು ಚಿಂತನೆ ನಡೆಸುತ್ತಿದ್ದೇವೆ.
– ಜಯಂತಿ ಬಲ್ನಾಡ್,
ಅಧ್ಯಕ್ಷೆ, ಪುತ್ತೂರು ನಗರಸಭೆ ಗಣೇಶ್ ಎನ್. ಕಲ್ಲರ್ಪೆ