ದೇವನಹಳ್ಳಿ:ಕೊರೊನಾ ನಡುವೆಯೂ ಮುಸ್ಲಿಂಮರಬಕ್ರೀದ್ ಹಬ್ಬವನ್ನು ಸರಳವಾಗಿ ಮಸೀದಿಗಳಲ್ಲಿಯೇಪ್ರಾರ್ಥನೆ ಸಲ್ಲಿಸಿ, ಆಚರಿಸಿದರು.ಕೊರೋನಾ ನಿಯಮದಡಿಯಲ್ಲಿ ಮಸೀದಿಗಳಲ್ಲಿಇಂತಿಷ್ಟು ಪ್ರಮಾಣದಲ್ಲಿ ಪ್ರಾರ್ಥನೆ ಸಲ್ಲಿಸಬೇಕುಎಂಬ ಆದೇಶದ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ,ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡುವರ್ಷದಿಂದಲೂ ನಿಯಮಾನುಸಾರವಾಗಿಯೇನಮಾಜ್ ಮಾಡಿದರು. ಹಿರಿಯರು, ಮಕ್ಕಳು ಹೊಸ ಉಡುಗೆಗಳನ್ನುತೊಟ್ಟು ಕೋವಿಡ್‌ನಿಯಮಾನುಸಾರ ಪ್ರಾರ್ಥನೆ ಮಾಡಿದ ದೃಶ್ಯಕಂಡುಬಂತು.
ಸುಖ, ಶಾಂತಿಗಾಗಿ ಪ್ರಾರ್ಥನೆ: ಜಾಮೀಯಮಸೀದಿ (ಅಹಲೇ ಅಹದೀಸ್)ನ ಅಧ್ಯಕ್ಷ ಅಬ್ದುಲ್‌ಖುದ್ದೂಸ್ ಪಾಷ ಮಾತನಾಡಿ, ಕೊರೊನಾ ಮುಕ್ತ,ಸುಖ, ಶಾಂತಿ, ನೆಮ್ಮದಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ.ಮುಖ್ಯವಾಗಿ ಇಡೀ ವಿಶ್ವದಲ್ಲಿ ಒಂದೇ ಸಾರಿ ಹಜ್‌ಆಗುತ್ತದೆ. ಹಜ್ ಆಗಿದ ಮಾರನೇಯ ದಿನನ ಮಾಝ್ (ಪ್ರಾರ್ಥನೆ) ಸಲ್ಲಿಸಿ, ಕುರ್‌ಬಾನಿಮಾಡುವ ಸಾಂಪ್ರದಾಯವಿದೆ.
ಸರ್ಕಾರದ ಕೋವಿಡ್ ಮಾರ್ಗಸೂಚಿಗಳ ಪಾಲನೆ ಮಾಡಲಾಗಿದೆ. ಮಸೀದಿಯಲ್ಲಿಯೇ ಬಕ್ರೀದ್ ಹಬ್ಬದ ನಮಾಜ್‌ನೆರವೇರಿಸಲಾಗಿದೆ ಎಂದರು.ಜಾಮೀಯ ಮಸೀದಿಯ ಕಾರ್ಯದರ್ಶಿಎ.ಎಸ್.ಇಬ್ರಾಹಿಂ, ಮಸೀದಿ ಪಂಡಿತ ಅಬ್ದುಲ್‌ಜಬ್ಟಾರ್, ಯುವ ಪಂಡಿತ ಮೊಹಮ್ಮದ್ ಅರ್ಶದ್,ಡಾ.ಶಫಿಕ್ ಅಹಮದ್, ಮುಖಂಡರಾದ ವಾಜೀದ್,ಬಿದರಹಳ್ಳಿ ಮೊಹಮ್ಮದ್ ಅಲಿ, ಜಾವೀದ್‌ಖಾನ್,ಗೌಸ್, ಗೌಸ್‌ಪೀರ್, ಹೈದರ್‌ಸಾಬ್, ಶಂಷೀರ್‌ಅಹಮದ್, ಪಾಚಲ್‌ಸಾಬ್, ಶಬ್ಬೀರ್, ಅಕºರ್, ರಫಿ,ಜಬೀವುಲ್ಲಾ, ಸೈಫುಲ್ಲಾ, ಶಫೀ ಹಾಜರಿದ್ದರು.