Advertisement
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ವಕೀಲರ ಸಭಾಂಗಣದಲ್ಲಿ ನಡೆದ ರಾಜ್ಯ ಮತ್ತು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ ರಚನೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಧಿಕಾರಕ್ಕೆ ಬರುವ ಗಂಭೀರ ದುರ್ನಡತೆ ದೂರುಗಳ ಬಗ್ಗೆ ತನಿಖೆಗಾಗಿಯೇ ಪ್ರತ್ಯೇಕ ವ್ಯವಸ್ಥೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಆದರೂ, ನಾವು ಒಂದೊಮ್ಮೆ ಗಂಭೀರ ದುರ್ನಡತೆ ತೋರಿದರೆ ವಿಚಾರಣೆ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿಯಾದರೂ ಶಿಸ್ತಿನಿಂದ ಕೆಲಸ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.
Related Articles
ಅಧಿಕಾರವೂ ಪ್ರಾಧಿಕಾರಕ್ಕೆ ಇದೆ.ಪ್ರಾಧಿಕಾರಕ್ಕೆ ಬರುವ ದೂರುಗಳ ಬಗ್ಗೆ ಪೊಲೀಸ್ ಅಧಿಕಾರಿಗಳಿಂದಲೇ ತನಿಖೆ ಕೈಗೊಳ್ಳುವ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತ್ಯೇಕ ತನಿಖಾ ತಂಡದ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
Advertisement
ದಾವಣಗೆರೆ ಜಿಲ್ಲೆಯಲ್ಲಿ ಈವರೆಗೆ 11 ದೂರುಗಳು ಬಂದಿವೆ. ಮಂಗಳೂರಿನಲ್ಲಿ ಅತಿ ಹೆಚ್ಚಿನ ದೂರು ಬಂದಿವೆ. ಪ್ರಾಧಿಕಾರದ ಬಗ್ಗೆ ಪೊಲೀಸರು ಗಾಬರಿಯೇನೂ ಪಡಬೇಕಿಲ್ಲ. ಪೊಲೀಸ್ ಇಲಾಖೆಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸದೃಢಗೊಳಿಸುವ ಉದ್ದೇಶದಿಂದಲೇ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಪೊಲೀಸ್ ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡುವಂತಾದರೆ ಸದೃಢ ಸಮಾಜ ನಿರ್ಮಾಣ ಮಾಡಬಹುದು. ಸ್ವತಂತ್ರವಾಗಿ ಕೆಲಸ ಮಾಡುವುದು ನಿರಕುಂಶಕ್ಕೆ ಎಡೆಮಾಡಿಕೊಡಬಾರದು ಎಂದು ಸಲಹೆ ನೀಡಿದರು.
ಪ್ರಾಧಿಕಾರದ ಸದಸ್ಯ ಎಂ.ಆರ್. ಕಾಂಬಳೆ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹೆಚ್ಚಿನ ದೂರು ಬಂದಿವೆ. ದಾವಣಗೆರೆ ಒಳಗೊಂಡಂತೆ ಉತ್ತರ ಕರ್ನಾಟಕದಲ್ಲಿ ಕಡಿಮೆ ದೂರು ಇವೆ. ಹಾವೇರಿಯಲ್ಲಿ ಒಂದೂ ಒಂದು ದೂರು ಬಂದಿಲ್ಲ. ನಾವೆಲ್ಲರೂ ಸೇರಿಕೊಂಡುಭಯಮುಕ್ತ ಸಮಾಜ ನಿರ್ಮಾಣ ಆಂದೋಲನದ ಯಶಸ್ಸು ಮಾಡೋಣ ಎಂದು ತಿಳಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಂ. ಶ್ರೀದೇವಿ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಮಾತನಾಡಿದರು. 1ನೇ ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಎಸ್. ಸದಲಗಿ, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಚ್. ಸಿದ್ದಪ್ಪ ಲೋಕಿಕೆರೆ, ಈಶ್ವರೀಯ ವಿಶ್ವ ವಿದ್ಯಾಲಯದ ಪದ್ಮಕ್ಕ ಇತರರು ಇದ್ದರು. ಹೇಮಂತ್‌ಕುಮಾರ್ ಪ್ರಾರ್ಥಿಸಿದರು. ಎಲ್. ಶ್ಯಾಂ ನಿರೂಪಿಸಿದರು. ಬದಲಾಗಲಿ ಪೊಲೀಸರ ನಡವಳಿಕೆ….
ಪೊಲೀಸರ ನಡವಳಿಕೆ ಬಗ್ಗೆ ಜನಸಾಮಾನ್ಯರ ದೂರು, ಆಕ್ಷೇಪ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಠಾಣೆಗೆ ಹೋಗಿದ್ದ ಜಿಲ್ಲಾ ನ್ಯಾಯಾಧೀಶರನ್ನೇ ಸೌಜನ್ಯ ಮರೆತು ಮಾತನಾಡಿಸುವುದೆಂದರೆ. ಇಂತಹ ಘಟನೆ ಕುರಿತು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಂ. ಶ್ರೀದೇವಿ ಅವರೇ ತಮಗಾದ ಅನುಭವವನ್ನು ಸಭಿಕರ ಮುಂದೆ ಬಿಟ್ಟಿಟ್ಟರು. ಜಿಲ್ಲಾ ನ್ಯಾಯಾಧೀಶರು ಒಮ್ಮೆ ಪೊಲೀಸ್ ಠಾಣೆಗೆ ಯಾವುದೇ ಸುಳಿವು ನೀಡದೆ, ಸಮವಸ್ತ್ರ(ಕೋಟ್) ಧರಿಸದೇ, ತಮ್ಮ ಸಿಬ್ಬಂದಿ ಇಲ್ಲದೆ ಹೋಗಿದ್ದರಂತೆ. ಹಾಗೆಯೇ ಠಾಣೆಯಲ್ಲಿ ಅದು-ಇದು ಪರಿಶೀಲಿಸುತ್ತಿದ್ದನ್ನು ಕಂಡ ಅಲ್ಲಿನ ಸಿಬ್ಬಂದಿ, ಯಾರಮ್ಮ ನೀನು, ಏನೇನೋ ನೋಡುತ್ತಿದೀªಯ. ಅಲ್ಲಿ ಕುಳಿತಿಕೋ… ಎಂದು ಸ್ವಲ್ಪ ಏರು ದ್ವನಿಯಲ್ಲಿ ಹೇಳಿದರಂತೆ. ಕೋರ್ಟ್ ಡ್ನೂಟಿ ಮಾಡುವ ಪಿಸಿ ಅವರನ್ನು ಗುರುತಿಸಿ, ಅವರ ಪರಿಚಯ ಹೇಳಿದ ತಕ್ಷಣ ಅಲ್ಲಿದ್ದ ಇಡೀ ಸಿಬ್ಬಂದಿಯ ವರ್ತನೆಯೇ ಬದಲಾಯಿತಂತೆ.ಪೊಲೀಸರು ನಮ್ಮಂತವರನ್ನೇ ಈ ರೀತಿ ಮಾತನಾಡಿಸುತ್ತಾರೆ ಎಂದರೆ ಹೇಗೆ. ಯಾರೇ ಆಗಲಿ ಠಾಣೆಗೆ ಬಂದಾಗ, ಗೌರವಯುತವಾಗಿ ಮಾತನಾಡಿಸುವಂತಾಗಬೇಕು ಎಂದು ವೇದಿಕೆಯಲ್ಲೇ ಇದ್ದ ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್‌ಗೆ ತಾಕೀತು ಮಾಡಿದರು.