Advertisement
ಕೂಳೂರಿನ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಸೋಮವಾರ ಐದನೇ ವರ್ಷದ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಪ್ರದಾನ ಸಮಾರಂಭ “ನೆರವು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇನ್ನೊಬ್ಬರನ್ನು ಮೇಲಕ್ಕೆತ್ತಲೆಂದೇ ಭಗವಂತ ನಮಗೆ ಹಸ್ತ ನೀಡಿದ್ದಾನೆ. ಬಲಶಾಲಿಗಳೊಂದಿಗಿನ ಗೆಲುವು ಗೆಲುವಲ್ಲ. ಅಸಹಾಯಕರಿಗೆ ಮಾಡುವಸಹಾಯವೇ ನಮ್ಮ ಗೆಲುವು. ಇರುವುದು ಒಂದು ಜೀವನ. ಅದರಲ್ಲಿ ರುವುದು ಒಂದು ಪುಟ್ಟ “ಹೃದಯ’, ಮತ್ತೊಂದು “ಪ್ರಪಂಚ’. “ಹೃದಯ’ ಪ್ರಪಂಚದ ಎಷ್ಟು ಮಂದಿಗೆ ಸ್ಪಂದಿಸಿದೆ ಎನ್ನುವುದೇ ಮುಖ್ಯ ಎಂದರು.
Related Articles
Advertisement
ನೆರವು ವಿತರಣೆಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ, ಶಿಕ್ಷಣ, ಕ್ರೀಡೆ,ಸಹಿತ ವಿವಿಧ ಕ್ಷೇತ್ರಗಳ ಸಾಧಕರಿಗೆ, ಭಿನ್ನಸಾಮರ್ಥ್ಯದ ಮಕ್ಕಳ ಶಾಲೆಗಳಿಗೆ ಅರ್ಥಿಕ ಬೆಂಬಲ, ಶೌಚಾಲಯ ನಿರ್ಮಾಣಕ್ಕೆ ನೆರವು, ಶಿಕ್ಷಕರ ನೇಮಕಕ್ಕೆ ನೆರವು, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಹಿತ ವಿವಿಧ ಸಂಸ್ಥೆಗಳಿಗೆ ನೆರವು ವಿತರಿಸಲಾಯಿತು. ಒಟ್ಟು ಸುಮಾರು 2 ಸಾವಿರ ಕುಟುಂಬ ಗಳಿಗೆ 4 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ವಿತರಿಸಲಾಯಿತು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆಸ್ವಾಗತಿಸಿ, ಅನುಷ್ಕಾ ಗೌರವ್ ಶೆಟ್ಟಿ ವಂದಿಸಿದರು. ಅಡ್ಯಾರು ಪುರುಷೋತ್ತಮ
ಭಂಡಾರಿ ಸಾಧಕರ ಪಟ್ಟಿ ವಾಚಿಸಿ ದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿ ದರು. ಜಗದೀಶ್ ಆಚಾರ್ಯ ಪುತ್ತೂರು ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ಗೋಲ್ಡ್‌ಫಿಂಚ್ ಸಿಟಿಯಲ್ಲಿ ಟೌನ್‌ಶಿಪ್
ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯ 100 ಎಕರೆ ಜಾಗದಲ್ಲಿ ಮಂಗಳೂರು ನಗರಕ್ಕೆ ಕಿರೀಟಪ್ರಾಯವಾಗುವ ರೀತಿಯಲ್ಲಿ ಟೌನ್‌ಶಿಪ್ ಮಾಡಲು ಉದ್ದೇಶಿಸಲಾಗಿದೆ. ಇದು ಮನೆಗಳು, ಶಾಲೆ, ಆಸ್ಪತ್ರೆ, ಅಪಾರ್ಟ್‌ಮೆಂಟ್, ಹೊಟೇಲ್, ಮಾಲ್ ಎಲ್ಲವನ್ನೂ ಒಳಗೊಳ್ಳಲಿದೆ. 60 ಸಾವಿರ ಮಂದಿಗೆ ಉದ್ಯೋಗ ನೀಡುವ “ಐಟಿ ಪಾರ್ಕ್’ ನಿರ್ಮಾಣ ಈ ಯೋಜನೆಯ ಮುಖ್ಯ ಭಾಗವಾಗಿದೆ ಎಂದು ಪ್ರಕಾಶ್ ಶೆಟ್ಟಿ ತಿಳಿಸಿದರು.