Advertisement

ನಕಲಿ ಮೊಟ್ಟೆ ಹಾವಳಿಗೆ ಬೆಚ್ಚಿದ ಕಲಬುರಗಿ

05:07 PM May 10, 2017 | |

ಕಲಬುರಗಿ: ನೀವೂ ಪ್ಲಾಸ್ಟಿಕ್‌ ಅಕ್ಕಿ , ಸಕ್ಕರೆ ಹಾಗೂ ನಕಲಿ ಗ್ಲುಕೋಸ್‌ ಬಗ್ಗೆ ಕೇಳಿದ್ದಿರಿ. ಆದರೆ, ಇದೀಗ ಪ್ಲಾಸ್ಟಿಕ್‌ ಮೊಟ್ಟೆ ಹಾವಳಿ ಶುರುವಾಗಿದೆ. ಇದೇನಪ್ಪಾ ಫಜೀತಿ ಅಂತಿರಾ? ಕಲಬುರಗಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ಮೊಟ್ಟೆ ಹಾವಳಿ ಶುರುವಾಗಿರುವುದು ಬಯಲಾಗಿದೆ. 

Advertisement

ಗುಲಬರ್ಗಾ ವಿವಿಗೆ ದಿನಾಲು ಮೊಟ್ಟೆಗಳು ಸರಬರಾಜಾಗುತ್ತವೆ. ಹಾಗೆ ಬರುವ ನೂರಾರು ಮೊಟ್ಟೆಗಳಲ್ಲಿ ಕೆಲವು ಮೊಟ್ಟೆಗಳು ರಬ್ಬರ್‌ನಂತೆ ಇರುತ್ತಿದ್ದವು. ಜಿಗಿದು ತಿನ್ನುವಾಗ ಯಾವುದೇ ರುಚಿ ಇರಲಿಲ್ಲ. ಅನುಮಾನಗೊಂಡ ವಿದ್ಯಾರ್ಥಿಗಳು ಬ್ರೆಕ್‌ ಥ್ರೂ ಸೈನ್ಸ್‌ ಸೊಸೈಟಿ ಜಿಲ್ಲಾ ಸಮಿತಿ ಸಂಪರ್ಕಿಸಿ ವಿಷಯ ತಿಳಿಸಿದಾಗ ಈ ಭಯಾನಕ ಅಂಶ ಹೊರಬಿದ್ದಿದೆ. 

ಕೃತಕ ಮೊಟ್ಟೆಗಳನ್ನು ಪರಿಶೀಲಿಸಲು ಕೆಲವು ಪ್ರಯೋಗ ನಡೆಸಿದ ನಂತರ ಮೊಟ್ಟೆಗಳು ಕೃತಕವಾಗಿರುವುದು ಬೆಳಕಿಗೆ ಬಂದಿದೆ. ಪ್ರಯೋಗಕ್ಕಾಗಿ ಬಳಸಿರುವ ಮೊಟ್ಟೆಗಳನ್ನು ನಗರದ ಮಾರುಕಟ್ಟೆಯಿಂದ ಖರೀದಿಸಲಾಗಿದೆ. ಪ್ರಯೋಗ ಎಲ್ಲಿ ಸ್ಥಳೀಯ ಗುವಿವಿ ಪ್ರಯೋಗಾಲಯದಲ್ಲಿ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಬ್ರೆಕ್‌ ಥ್ರೂ ಸೈನ್ಸ್‌ ಸೊಸೈಟಿ ಸದಸ್ಯರು ಸೇರಿಕೊಂಡು ಪರೀಕ್ಷೆ ಮಾಡಿದ್ದಾರೆ.

ಆಗ ಮೊಟ್ಟೆ ಅಸಲಿಯತ್ತು ಹೊರಬಿದ್ದಿದೆ. ಸಾಧಾರಣವಾಗಿ ನೈಸರ್ಗಿಕವಾಗಿ ಕೋಳಿ ಮೊಟ್ಟೆಗಳು ನೀರಿನಲ್ಲಿ ಮುಳುಗುವುದಿಲ್ಲ. ಆದರೆ, ಈ ಮೊಟ್ಟೆಗಳು ಮುಳುತ್ತಿರುವುದರಿಂದ ಅನುಮಾನ ದೃಢವಾಯಿತು ಎನ್ನುತ್ತಾರೆ ಸೊಸೈಟಿ ಜಿಲ್ಲಾಧ್ಯಕ್ಷೆ ಅಭಯಾ ದಿವಾಕರ್‌. 

ಪ್ರಯೋಗದ ವೇಳೆ ಮೊಟ್ಟೆಯಲ್ಲಿ ಸೋಡಿಯಂ ಆಲ್ಜಿನೆಟ್‌ ಹಾಗೂ ಜಿಲೆಟಿನ್‌ ಇರುವುದು ಪತ್ತೆಯಾಗಿದೆ. ಮೊಟ್ಟೆಯಲ್ಲಿ ಇರಬೇಕಾದ ಆಲುºಮಿನ್‌(ಬಿಳಿ ಪದಾರ್ಥ) ಕೃತಕ ಮೊಟ್ಟೆಯಲ್ಲಿ ಇಲ್ಲ. ಅದರ ಬದಲು ಕೃತಕವಾಗಿ ತಯಾರಿಸಲಾಗುವ ಜಿಲಾಟಿನ್‌(ಕೃತಕ ಪ್ರೋಟಿನ್‌) ಇರುವುದು ಕಂಡುಬಂದಿದೆ ಎಂದು ಅಭಯಾ ತಿಳಿಸಿದ್ದಾರೆ. 

Advertisement

ಜಿಲ್ಲಾಡಳಿತಕ್ಕೆ ದೂರು: ಈ ಕುರಿತು ಬ್ರೆಕ್‌ ಥ್ರೂ ಸೈನ್ಸ್‌ ಸೊಸೈಟಿ ಜಿಲ್ಲಾಧಿಧಿಕಾರಿ ಉಜ್ವಲಕುಮಾರ ಘೋಷ್‌ ಅವರನ್ನು ಭೇಟಿ ಮಾಡಿ, ಜಿಲ್ಲೆಯಲ್ಲಿ ಹಾಗೂ ವಿವಿಧೆಡೆಗಳಲ್ಲಿ ನಕಲಿ (ಕೃತಕ) ಮೊಟ್ಟೆಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೂಡಲೇ ಇದನ್ನು ತಡೆಯಿರಿ ಎಂದು ಮನವಿ ಸಲ್ಲಿಸಲಾಗಿದೆ. 

ಹಾನಿ ಹೇಗೆ?
ಕೃತಕವಾಗಿ ತಯಾರಿಸಲ್ಪಡುವ ಸೋಡಿಯಂ ಆಲ್ಜಿನೆಟ್‌ ಹಾಗೂ ಜಿಲೆಟಿನ್‌ ರಾಸಾಯನಿಕಗಳಿಂದ ಬಳಸಿ ತಯಾರಿಸಿದ ಮೊಟ್ಟೆ ದೇಹಕ್ಕೆ ಹಾನಿಕಾರಕ. ಇದು ಹೆಚ್ಚಿನ ಪ್ರಮಾಣದಲ್ಲಿ ದೇಹದಲ್ಲಿ ಶೇಖರಣೆ ಆಗುವುದರಿಂದ ನರ ವ್ಯವಸ್ಥೆ ಹಾಗೂ ಲೀವರ್‌ ಮೇಲೆ ಒತ್ತಡ ಉಂಟಾಗಿ ಜೀವಕ್ಕೆ ಕುತ್ತು ಸಂಭವಿಸುತ್ತದೆ ಎಂದು ಹೆಸರು ಬಹಿರಂಗ ಪಡಿಸಲಿಚ್ಚಿಸದ ವೈದ್ಯರೊಬ್ಬರು ತಿಳಿಸಿದ್ದಾರೆ. 

ಹೇಗೆ ತಿಳಿಯುವುದು?
ಸಾರ್ವಜನಿಕರು ಈ ಬಗ್ಗೆ ಜಾಗರೂಕರಾಗಿರಬೇಕು. ಸುಲಭವಾಗಿ ಮಾಡಬಹುದಾದ ಪ್ರಯೋಗಗಳಿಂದ ಕೃತಕ ಮೊಟ್ಟೆಗಳನ್ನು ಕಂಡುಹಿಡಿಯಬಹುದು. ನೀರಿನಲ್ಲಿ ನಿಜವಾದ ಮೊಟ್ಟೆ ಮುಳುಗುತ್ತದೆ. ಕೃತಕ ಮತ್ತು ಕೊಳೆತಿರುವ ಮೊಟ್ಟೆ ತೇಲುತ್ತದೆ. ತೇಲುತ್ತಿರುವ ಮೊಟ್ಟೆ ಒಡೆದು ನೋಡಿದಲ್ಲಿ ಮೊಟ್ಟೆಯು ಕೊಳೆತಿಲ್ಲದಿದ್ದರೆ ಅದು ಕೃತಕ ಮೊಟ್ಟೆ. ಕೃತಕ ಮೊಟ್ಟೆ ಎಷ್ಟೇ ದಿನ ಕಳೆದರೂ ಕೆಡುವುದಿಲ್ಲ.

ಮೊಟ್ಟೆ ಒಡೆದಾಗ ಮೊಟ್ಟೆಯ ಹಳದಿಯ ಪದರ ಒಡೆದಿಲ್ಲದಿದ್ದರೆ, ಹಳದಿ ಭಾಗ ಬಿಳಿಯ ಭಾಗದೊಂದಿಗೆ ಬೆರೆಯದೇ ಹಾಗೆಯೇ ಇರುತ್ತದೆ. ಆದರೆ ಕೃತಕ ಮೊಟ್ಟೆ ಒಡೆಯುತ್ತಿದ್ದಂತೆ ಬಿಳಿಯ ಭಾಗದೊಂದಿಗೆ ಹಳದಿ ಭಾಗ ಬೆರೆತು ಹೋಗುತ್ತದೆ. ಮೊಟ್ಟೆಯ ಬಿಳಿಯ ಭಾಗ ರಕ್ಷಿಸುವ ಪದರ ಕೃತಕ ಮೊಟ್ಟೆಗೆ ಹೋಲಿಸಿದರೆ ದಪ್ಪವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next