Advertisement

South India; ಜಲಾಶಯಗಳಲ್ಲಿ ನೀರಿನ ಪ್ರಮಾಣ ಶೇ.15ಕ್ಕೆ ಇಳಿಕೆ

12:57 AM May 11, 2024 | Team Udayavani |

ಹೊಸದಿಲ್ಲಿ: ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಪ್ರಮಾಣ ತೀವ್ರವಾಗಿ ಕುಸಿದಿದೆ. ಪ್ರಸ್ತುತ ದಕ್ಷಿಣ ಭಾರತದಲ್ಲಿ 42 ಜಲಾಶಯಗಳಿದ್ದು, ಅವುಗಳಲ್ಲಿ ಶೇ.15ರಷ್ಟು ಮಾತ್ರ ನೀರಿದೆ. ಇದು ಕಳೆದ ವರ್ಷ ಮತ್ತು ಹಿಂದಿನ 10 ವರ್ಷಗಳ ಸರಾಸರಿಗಿಂತ ಬಹಳ ಕಡಿಮೆ ಎಂದು ಕೇಂದ್ರ ಜಲ ಆಯೋಗ (CWC) ಹೇಳಿದೆ.

Advertisement

ಇದು ಕೇವಲ ದಕ್ಷಿಣ ಭಾರತಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೇ ಅಪಾಯಕಾರಿ ಸಂಗತಿ ಎಂಬ ಕಳವಳವನ್ನೂ ಅದು ವ್ಯಕ್ತಪಡಿಸಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳಗಳ ಜಲಾಶಯಗಳಲ್ಲಿ 53.334 ಬಿಲಿಯನ್‌ ಕ್ಯೂಬಿಕ್‌ ಮೀಟರ್‌ನಷ್ಟು (ಬಿಸಿಎಂ) ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಸದ್ಯ 7.921 ಬಿಸಿಎಂ ಮಾತ್ರ ನೀರಿದೆ. ಇದು ಒಟ್ಟು ಸಾಮರ್ಥ್ಯದ ಶೇ.15 ಮಾತ್ರ. ಕಳೆದ ವರ್ಷ ಶೇ.27ರಷ್ಟು ನೀರಿತ್ತು. ಕಳೆದ 10 ವರ್ಷಗಳಲ್ಲಿ ಸರಾಸರಿ ಶೇ.21ರಷ್ಟು ನೀರಿತ್ತು ಎಂದು ಸಿಡಬ್ಲೂéಸಿ ಹೇಳಿದೆ.

ರಾಷ್ಟ್ರಮಟ್ಟದಲ್ಲೂ ಕುಸಿತ: ಜಲಾಶಯಗಳಲ್ಲಿ ನೀರಿನ ಪ್ರಮಾಣ ದಕ್ಷಿಣ ಭಾರತದಲ್ಲಿ ಮಾತ್ರ
ವಲ್ಲ, ರಾಷ್ಟ್ರಮಟ್ಟದಲ್ಲೂ ಇಳಿದಿದೆ. ದೇಶದಲ್ಲಿ ರುವ ಒಟ್ಟು 150 ಜಲಾಶಯಗಳಲ್ಲಿ ಶೇ.27 ರಷ್ಟು ಮಾತ್ರ ನೀರಿದೆ. ಇವುಗಳಲ್ಲಿ ಕಳೆದ ವರ್ಷ ಇದೇ ಸಮಯದಲ್ಲಿ ಶೇ.32ರಷ್ಟು ನೀರಿತ್ತು ಎಂದು ಜಲ ಆಯೋಗ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next