Advertisement

ಕೋಮುವಾದಿ ಸಂಘಟನೆಗಳ ಚುರುಕುತನ ಕಡಿಮೆಯಾಗಬೇಕಿದೆ: ರೆಡ್ಡಿ

03:38 PM Jan 12, 2018 | |

ಉಡುಪಿ: ‘ಕೋಮುವಾದಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಸಂಘಟನೆಗಳನ್ನು ನಿಷೇಧ ಮಾಡುವ ಕುರಿತು ಚರ್ಚೆ ನಡೆದಿರುವುದು ನಿಜ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

‘ಸದ್ಯ ಸಂಘಟನೆಗಳನ್ನುನಿಷೇಧಿಸುವುದು ಸಾಧ್ಯವಿಲ್ಲ. ಅಂತಹ ಚರ್ಚೆ ಸರ್ಕಾರದ ಮುಂದಿದ್ದು, ಮುಖ್ಯಮಂತ್ರಿಗಳು ರಾಜ್ಯ ಪ್ರವಾಸ ಮುಗಿಸಿ ವಾಪಾಸ್‌ ಬಂದ ಬಳಿಕ ಆ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದರು.

‘ಕೋಮುವಾದಿ  ಸಂಘಟನೆಗಳ ಚುರುಕುತನ ಕಡಿಮೆಯಾಗಬೇಕಿದೆ. ಜನರೇ ಸಂಘಟನೆಗಳನ್ನು ದೂರ ಮಾಡುವ ಕಾಲ ಬರಲಿದೆ’ ಎಂದರು.

ಕರಾವಳಿಯ ಭಾಗದಲ್ಲಿ ಪೊಲೀಸ್‌ ವ್ಯವಸ್ಥೆ ಬಲವಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆಸದಂತೆ ಕಟ್ಟೆಚ್ಚರ ವಹಿಸಿರುವುದಾಗಿ ತಿಳಿಸಿದರು.

ಮಂಗಳೂರಿನಲ್ಲಿ ಶುಕ್ರವಾರ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ವಲಯ ಪೊಲೀಸ್‌ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next