Advertisement

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

11:18 AM Nov 08, 2024 | Team Udayavani |

ಹೊಸದಿಲ್ಲಿ: ಅಫ್ಘಾನಿಸ್ತಾನ ಕ್ರಿಕೆಟ್‌ (Afghanistan Cricket) ತಂಡದ ಹಿರಿಯ ಆಲ್‌ ರೌಂಡರ್‌, ಮಾಜಿ ನಾಯಕ ಮೊಹಮ್ಮದ್‌ ನಬಿ (Mohammad Nabi) ಅವರು ಮುಂಬರುವ ಚಾಂಪಿಯನ್ಸ್‌ ಟ್ರೋಫಿ (Champions Trophy) ಕೂಟದ ಬಳಿಕ ಏಕದಿನ ಮಾದರಿಯಿಂದ ನಿವೃತ್ತಿಯಾಗಲಿದ್ದಾರೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕೂಟವು 2025ರ ಫೆಬ್ರವರಿಯಲ್ಲಿ ಪಾಕಿಸ್ತಾನದಲ್ಲಿ ನಡೆಯಲಿದೆ.

Advertisement

ಅಫ್ಘಾನಿಸ್ತಾನ ಕ್ರಿಕೆಟ್‌ ಬೋರ್ಡ್‌ (ACB) ಮುಖ್ಯ ಕಾರ್ಯನಿರ್ವಾಹಕ ನಸೀಬ್‌ ಖಾನ್‌ ಅವರು ಇದರ ಬಗ್ಗೆ ಖಚಿತಪಡಿಸಿದ್ದಾರೆ.

ಕ್ರಿಕ್‌ ಬಜ್‌ ಜತೆ ಮಾತನಾಡಿದ ನಸೀಬ್‌ ಖಾನ್‌, “ಹೌದು, ಚಾಂಪಿಯನ್ಸ್‌ ಟ್ರೋಫಿ ಬಳಿಕ ನಬಿ ವಿದಾಯ ಹೇಳಲಿದ್ದಾರೆ. ಅವರು ಇದರ ಬೋರ್ಡ್‌ ಗೆ ಮಾಹಿತಿ ನೀಡಿದ್ದಾರೆ” ಎಂದಿದ್ದಾರೆ.

“ಚಾಂಪಿಯನ್ಸ್ ಟ್ರೋಫಿಯ ನಂತರ ಅವರು ತಮ್ಮ ಏಕದಿನ ವೃತ್ತಿಜೀವನವನ್ನು ಕೊನೆಗೊಳಿಸಲು ಬಯಸುತ್ತಾರೆ ಎಂದು ಅವರು ಕೆಲವು ತಿಂಗಳ ಹಿಂದೆ ನನಗೆ ಹೇಳಿದರು. ಅವರ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ನಾನು ಅರ್ಥಮಾಡಿಕೊಂಡ ವಿಷಯವೆಂದರೆ, ಚಾಂಪಿಯನ್ಸ್ ಟ್ರೋಫಿಯ ನಂತರ, ಅವರು ತಮ್ಮ ಟಿ20 ವೃತ್ತಿಜೀವನವನ್ನು ಮುಂದುವರೆಸುವ ನಿರೀಕ್ಷೆಯಿದೆ” ಎಂದು ನಸೀಬ್‌ ಹೇಳಿದರು.

Advertisement

ಸೀನಿಯರ್‌ ಆಲ್‌ ರೌಂಡರ್‌ ಆಗಿರುವ ಮೊಹಮ್ಮದ್‌ ನಬಿ ಅವರು ಅಫ್ಘಾನಿಸ್ತಾನ ತಂಡವನ್ನು 165 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಈ ಮಾದರಿಯಲ್ಲಿ 3549 ರನ್‌ ಗಳಿಸಿರುವ ನಬಿ, 171 ವಿಕೆಟ್‌ ಗಳನ್ನೂ ಪಡೆದಿದ್ದಾರೆ.

ಅಫ್ಘಾನಿಸ್ತಾನ ಕ್ರಿಕೆಟ್‌ ನ ಚೊಚ್ಚಲ ಏಕದಿನ ಪಂದ್ಯದಲ್ಲಿಯೇ ನಬಿ ಆಡಿದ್ದರು. ಇದು 2009 ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಡೆದಿತ್ತು. ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಅರ್ಧಶತಕ ಗಳಿಸುವ ಮೂಲಕ ಜಗತ್ತಿಗೆ ತಮ್ಮನ್ನು ತಾವು ಘೋಷಿಸಿಕೊಂಡರು.

ಶಾರ್ಜಾದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನಬಿ ಅವರು 82 ರನ್ ಗಳಿಸಿದರು.

ಮೊಹಮ್ಮದ್ ನಬಿ ಈಗಾಗಲೇ 2019 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೊಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next