Advertisement

“ಸಣ್ಣ ಕ್ರಮ ಅನುಸರಿಸಿದರೆ ಕೃಷಿಯಲ್ಲಿ ನಷ್ಟವಿಲ್ಲ’

03:44 PM Apr 13, 2017 | |

ಉಡುಪಿ: ಬಿತ್ತನೆ ಬೀಜವನ್ನು ಆಯ್ಕೆ ಮಾಡಲು ಉಪ್ಪು ನೀರಲ್ಲಿ ಹಾಕುವ, ತೇಲುವ ಜೊಳ್ಳು ಬೀಜ ಬೇರ್ಪಡಿಸುವ- ಬಿತ್ತುವ, ನಾಟಿ ಮಾಡುವ ಹೊಲದಲ್ಲಿ ಸುಡುಮಣ್ಣು ಮಾಡದಿರುವ ಮುಂತಾದ ಕ್ರಮಗಳು ಸಣ್ಣದೆಂದು ಕಂಡರೂ ಈ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದರೆ ಭತ್ತ ಕೃಷಿಯಲ್ಲಿ ನಷ್ಟದ ಮಾತೇ ಇಲ್ಲ ಎಂದು ಸಾಧನಶೀಲ ಕೃಷಿಕ ಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ ಭಟ್‌ ಪೆರಂಪಳ್ಳಿಯಲ್ಲಿ ನಡೆದ ಕೃಷಿ ಮಾಹಿತಿ  ಕಾರ್ಯಕ್ರಮದಲ್ಲಿ  ಹೇಳಿದ್ದಾರೆ.

Advertisement

ಪೆರಂಪಳ್ಳಿ, ಶೀಂಬ್ರ, ಕಕ್ಕುಂಜೆ  ಪ್ರದೇಶಗಳ ಎಲ್ಲಾ ಕೃಷಿಕರನ್ನು ಒಗ್ಗೂಡಿಸಲು ಈ ಪ್ರದೇಶಗಳ‌ ಯುವಕ-ಯುವತಿ ಮಂಡಲಗಳು, ಕೃಷಿ ಆಸಕ್ತರು ಆಯೋಜಿಸಿದ್ದ ಕಾರ್ಯಕ್ರಮವನ್ನು ಸ್ಥಳೀಯ ಹಿರಿಯ ಕೃಷಿಕ ಅಂತಪ್ಪ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ವಹಿಸಿದ್ದರು.  ನಗರಸಭಾ ಸದಸ್ಯ ಪ್ರಶಾಂತ್‌ ಭಟ್‌, ಎಪಿಎಂಸಿ ಉಪಾಧ್ಯಕ್ಷ ರಾಘವೇಂದ್ರ ನಾಯ್ಕ ಕರಂಬಳ್ಳಿ, ಹಿರಿಯ ಕೃಷಿಕರಾದ ಸೋಮಪ್ಪಪೂಜಾರಿ, ಲೂವಿಸ್‌ ಡಿಸೋಜಾ, ದುಗ್ಗಪ್ಪಪೂಜಾರಿ, ಬಾಬು ನಾಯ್ಕ ಉಪಸ್ಥಿತರಿದ್ದರು.

ಕೃಷಿಕ ಸಂಘದ ಪೆರಂಪಳ್ಳಿ ವಲಯ ಸಮಿತಿಯನ್ನು ರಚಿಸಲಾಯಿತು. ಸುಬ್ರಹ್ಮಣ್ಯ ಶ್ರೀಯಾನ್‌ ಅಧ್ಯಕ್ಷ, ಗೌರವ ಅಧ್ಯಕ್ಷ ಅಂತಪ್ಪ ಪೂಜಾರಿ, ಉಪಾಧ್ಯಕ್ಷರಾಗಿ ಬೆನೆಡಿಕ್ಟ್ ಡಿಸೋಜ, ಶಂಕರ್‌ ಸುವರ್ಣ, ಜೋಸೆಫ್ ಮಸ್ಕರೇನಸ್‌, ವಿಲಿಯಂ ಡಿಸೋಜಾ, ಕಾಯದರ್ಶಿ ರವೀಂದ್ರ ಪೂಜಾರಿ ಶೀಂಬ್ರ, ಉಪಕಾರ್ಯದರ್ಶಿ ರಫಾಯಿಲ್‌ ಡಿ’ಸೋಜ, ಮಹಿಳಾ ಘಟಕದ ಮುಂದಾಳುಗಳಾಗಿ  ಶಾಂತಿ ಡಿಸೋಜ, ಪುಷ್ಪಾವತಿ ಮತ್ತು ಪ್ರೇಮ ಶೀಂಬ್ರರನ್ನು ಆಯ್ಕೆ ಮಾಡಲಾಯಿತು.

ಕೃಷಿ ಕಾರ್ಯಕ್ರಮವೆಂದರೆ ಅಲ್ಲಿ ವಯಸ್ಸಾದವರೇ ಕಂಡು ಬರುವುದು ಹೆಚ್ಚು. ಇದಕ್ಕೆ ಅಪವಾದವೆಂಬಂತೆ ಈ ಕಾರ್ಯಕ್ರಮದಲ್ಲಿ  ಯುವ ಜನರೇ  ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸುಬ್ರಹ್ಮಣ್ಯ  ಶ್ರೀಯಾನ್‌ ಸ್ವಾಗತಿಸಿ,  ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. ಮಲ್ಲಂಪಳ್ಳಿ ಶ್ರೀನಿವಾಸ ಬಲ್ಲಾಳ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.
 

Advertisement

Udayavani is now on Telegram. Click here to join our channel and stay updated with the latest news.

Next