ತಿ.ನರಸೀಪುರ: ಉತ್ತಮ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಗುರುತಿಸಿ ಗೌರವಿಸುತ್ತಾರೆ ಎಂದು ವಿದ್ಯೋದಯ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಪಿ ಉದಯ್ ಕುಮಾರ್ ಹೇಳಿದರು. ಪಟ್ಟಣದ ವಿದ್ಯೋದಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಪೋ›ತ್ಸಾಹ ಧನ ವಿತರಿಸಿ ಮಾತನಾಡಿದರು.
ಪರಿಶ್ರಮದ ಸಾಧನೆಗೆ ಸಮಾಜದಲ್ಲಿ ಎಂದಿಗೂ ಗೌರವ ಸಿಗುತ್ತೆ. ತಾವು ಕಲಿಯುವಾಗ ವಿದ್ಯಾರ್ಥಿಗಳನ್ನು ಪೋ›ತ್ಸಾಹಿಸುವವರ ಸಂಖ್ಯೆ ಬಹಳ ವಿರಳ, ಡಾ. ದಿನೇಶ್ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ರೈಸ್‌ಮಿಲ್ ಉದ್ಯಮಿ ಎನ್. ರೇಣುಕಾಪ್ರಸಾದ್ ಮಾತನಾಡಿ, ಹಳ್ಳಿಯಿಂದ ಬಂದು ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ವೈದ್ಯಕೀಯ ಪದವಿ ಪಡೆದು ಇಂದು ಮೈಸೂರಿನಲ್ಲಿ ಹೃದಯ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಬಿ.ದಿನೇಶ್ ತಾವು ವ್ಯಾಸಂಗ ಮಾಡಿದ ಶಾಲಾ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪೋ›ತ್ಸಾಹಿಸುತ್ತಿದ್ದಾರೆ ಇದು ಅವರ ದೊಡ್ಡ ಗುಣ ಎಂದು ಶ್ಲಾ ಸಿದರು.
ವಿಜಾnನದ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್. ಅಂಬಿಕಾ, ಅಜುರ್‌ಮಿದ್ ತಹುರಾ, ಸೌಂದರ್ಯ, ಶಿವಾನಿ ಹಾಗೂ ವಿದ್ಯೋದಯ ಬಾಲಕರ ಪಿಯು ಕಾಲೇಜಿನ ಅರ್ಜುನ್‌ನಾಯಕ್, ಮಹಾದೇವಪ್ರಶಾಂತ್ ಹಾಗೂ ಸಂತೋಷ್‌ಗೆ ಪೋ›ತ್ಸಾಹ ಧನ ವಿತರಿಸಲಾಯಿತು. ಪ್ರಾಂಶುಪಾಲ ಕೆ. ಚಂದ್ರಶೇಖ ರರಾವ್,
-ಉಪಪ್ರಾಂಶುಪಾಲ ಟಿ.ಪಿ. ವಿಶ್ವನಾಥ್, ಸಿ.ಮಹದೇವಪ್ಪ, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮಹಾದೇವಸ್ವಾಮಿ, ಟಿಎಪಿಸಿಎಂಎಸ್‌ನ ಉಪಾಧ್ಯಕ್ಷ ಹೆಳವರಹುಂಡಿ ನಟರಾಜು, ಸುಜನ ಸುರೇಶ್, ಎಲ್‌ಐಸಿ ಮಹಾದೇವಸ್ವಾಮಿ, ಎಂ. ಮಹಾದೇವ್, ಉಪನ್ಯಾಸಕರಾದ ಸೋಮಣ್ಣ, ಕಲ್ಪನಾ, ಚಂದ್ರಪ್ಪ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.