Advertisement
ತಾಲೂಕಿನ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತಮಠ ಮತ್ತು ಕನ್ನಡ ಮಠದಲ್ಲಿ ಹಮ್ಮಿಕೊಂಡಿದ್ದ ಲಿಂಗೈಕೈ ಶ್ರೀ ಹಾನಗಲ್ಲ ಕುಮಾರಸ್ವಾಮಿರ 150ನೇ ಜಯಂತಿ ಗಣಾರಾಧನ ಮಹೋತ್ಸವ ಮತ್ತು ಪೂಜ್ಯದ್ವಯರಿಗೆ ನುಡಿ ನೈವೆದ್ಯ ಸಮಾಜ ಯುವ ಚೇತ ಶ್ರೀಗಳಿಂದ ಹಿರಿಯ-ಕಿರಿಯ ಸಾಧಕರ ಸಾಧನೆಗೆ ಅಭಿನಂದನಾ ಕಾರ್ಯಕ್ರಮ, ಎಸ್‌ಸಿವಿಡಿಎಸ್ ವಿದ್ಯಾಸಂಸ್ಥೆಗಳ 26ನೇ ವರ್ಷಾಚರಣೆ, ಕನ್ನಡ ಮಟ್ಟದ ಸ್ಥಾಪನೆ 208ನೇ ವರ್ಷಾಚರಣೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಕುಂಭಕೋಣಂನ ಮಠಾಧೀಶರಾದ ಶ್ರೀ ಜಗದ್ಗುರು ನೀಲಕಂಠ ಸಾರಂಗ ದೇಸಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಲಿಂಗಕಲ್ಲಲ್ಲ ಕಲ್ಲು ಲಿಂಗವಲ್ಲ ಮೂರು ದಿನದ ಸಂತೆ ಎಲ್ಲರೂ ಕೂಡ ಇಲ್ಲಿಂದ ಹೋಗುವವರೆ ಆದ್ದರಿಂದ ಸಮಾಜದಲ್ಲಿ ಏನಾದರೂ ಗುರುತು ಉಳಿಸಿ ಹೋಗುವಂತಹ ಕೆಲಸ ಮಾಡಬೇಕು. ಎಲ್ಲರೂ ಒಂದಾಗಿ ಬಾಳುವುದನ್ನು ಕಲಿಯಬೇಕು. ಪ್ರಸಾದ ಮತ್ತು ನೀರನ್ನು ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ವ್ಯಯ ಮಾಡಬಾರದು ಎಂದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಖೀಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಹಾಗೂ ವಕೀಲ ಸಿ.ಎಸ್.ಮಂಜುನಾಥ್‌ಸ್ವಾಮಿ, ಕಲೆ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಎಲ್.ಮಹದೇವಪ್ಪ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕಿರಣ್ ಸರ್ಕಾರಿ ಸೇವೆಯಲ್ಲಿ ಪಿಡಿಒ ಆಗಿ ಸೇವೆಸಲ್ಲಿಸಿದ ಶಿವಯೋಗಿ ವಾಣಿಜ್ಯ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ವಿವಿಧ ಗ್ರಾಮಗಳಿಂದ ಬಂದಿದ್ದ ಸ್ವಾಮೀಜಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ನಿರಂಜನಾ ಜಡೇಜ ಸ್ವಾಮೀಜಿಗಳು, ಶ್ರೀಮಹಾಂತ ಸ್ವಾಮೀಜಿಗಳು, ಶ್ರೀಸರ್ಪಭೂಷಣ ಮಹಾಸ್ವಾಮಿಗಳು, ಶ್ರೀಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಶ್ರೀಶರಣೆಜಯದೇವ ತಾಯಿ, ಹೊಸಮಠದ ಚಿದಾನಂದಸ್ವಾಮಿ, ಮಾಜಿ ಶಾಸಕ ಹೆಚ್.ಸಿ.ಬಸವರಾಜ್, ಪರಿಸರ ಹೋರಾಟಗಾರ ಕೆ.ಎನ್.ಸೋಮಶೇಖರ್ ಕೌಲನಹಳ್ಳಿ, ಪುರಸಭಾ ಸದಸ್ಯ ನಂಜುಂಡಸ್ವಾಮಿ, ಅಕ್ಷರ ಮಹಾಲಕ್ಷ್ಮೀ ಚಿಟ್‌ಫಂಡ್‌ನ ಅಧ್ಯಕ್ಷ ಕುಮಾರಸ್ವಾಮಿ, ಮುಖಂಡರಾದ ಪಿ.ಎಂ.ಶಾಂತಪ್ಪ, ಪಾಲಾಕ್ಷ ಸೇರಿದಂತೆ ಇತರರು ಇದ್ದರು.