Advertisement

The Accidental Prime Minister: ಡಾ.ಸಿಂಗ್‌ ಪ್ರತಿಕ್ರಿಯೆ ಏನು ?

11:50 AM Dec 28, 2018 | udayavani editorial |

ಹೊಸದಿಲ್ಲಿ : ನಿನ್ನೆ ಗುರುವಾರವಷ್ಟೇ ಅನಾವರಣಗೊಂಡು ಇಂಟರ್‌ನೆಟ್‌ಗೆ ಕಿಚ್ಚು ಹಚ್ಚಿದ್ದ “ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌” ಚಿತ್ರದ ಟ್ರೇಲರ್‌ ಬಗ್ಗೆ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ಪ್ರತಿಕ್ರಿಯೆ ಏನು ? ಎಂಬುದನ್ನು ತಿಳಿಯುವ ಕಾತರ, ಕುತೂಹಲ ಈಗ ಎಲ್ಲರಲ್ಲಿ ತೀವ್ರಗೊಂಡಿದೆ. 

Advertisement

ಇದೇ ಕಾತರ, ಕುತೂಹಲದೊಂದಿಗೆ ಡಾ. ಸಿಂಗ್‌ ಅವರನ್ನು ಪ್ರಶ್ನಿಸಲು ಮುಂದಾದ ಪತ್ರಕರ್ತರಿಗೆ ಯಾವುದೇ ಪ್ರತಿಕ್ರಿಯೆ ನೀಡದ ಡಾ. ಸಿಂಗ್‌ ತಾವು ಬಂದ ಕಾರಿನಿಂದ ತಣ್ಣಗೆ ಕೆಳಗಿಳಿದು  ಹಾಗೆಯೇ ಒಳ ನಡೆದು ಹೋದರೆಂದು ವರದಿಯಾಗಿದೆ. 

ಸಂಜಯ್‌ ಬರು ಅವರ ಕೃತಿಯನ್ನು ಆಧರಿಸಿ ಸಿನೇಮಾ ಮಾಡಲಾಗಿರುವ ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌, 2019ರ ಜನವರಿ 11ರಂದು ದೇಶಾದ್ಯಂತ ತೆರೆ ಕಾಣಲಿದೆ. ಈ ಚಿತ್ರದ ಕಥಾ ವಸ್ತು ಯುಪಿಎ ಆಡಳಿತೆಯಲ್ಲಿ 2004ರಿಂದ 2014ರ ವರೆಗಿನ ಅವಧಿಯಲ್ಲಿ ಪ್ರಧಾನಿಯಾಗಿದ್ದ ಡಾ. ಮನಮೋಹನ್‌ ಸಿಂಗ್‌ ಅವರನ್ನು ಕುರಿತದ್ದಾಗಿದೆ. 

ಡಾ. ಸಿಂಗ್‌ ಅವರ ಪಾತ್ರವನ್ನು ಶೇ.100ರ ಪ್ರತಿಕೃತಿಯಾಗಿ ನಿರ್ವಹಿಸಿದವರು ಬಾಲಿವುಡ್‌ನ‌ ಹಿರಿಯ ಪ್ರತಿಭಾವಂತ ನಟ ಅನುಪಮ್‌ ಖೇರ್‌. ಡಾ. ಸಿಂಗ್‌ ಅವರು ಸೂತ್ರದ ಗೊಂಬೆಯಾಗಿ ಪ್ರಧಾನಿ ಹುದ್ದೆ ನಿರ್ವಹಿಸಿದವರೆಂಬ ಆರೋಪ ಹೊಂದಿರುವುದರಿಂದ ಚಿತ್ರವು ವಿವಾದಾತ್ಮಕವಾಗುವ ಸಾಧ್ಯತೆಯೇ ಹೆಚ್ಚಿದೆ.

‘ಚಿತ್ರ ಬಿಡುಗಡೆಗೆ ಮುನ್ನ ಅದನ್ನು ತನಗೆ ತೋರಿಸಬೇಕು; ಅಸತ್ಯದ ದೃಶ್ಯಗಳು ಕಂಡು ಬಂದರೆ ಅವುಗಳನ್ನು ಕಿತ್ತು ಹಾಕಬೇಕು; ಇಲ್ಲದಿದ್ದರೆ ದೇಶದಲ್ಲಿ ಎಲ್ಲಿಯೂ ಈ ಚಿತ್ರ ಪ್ರದರ್ಶನಕ್ಕೆ ನಾವು ಅವಕಾಶ ನೀಡುವುದಿಲ್ಲ’  ಎಂದು ಮಹಾರಾಷ್ಟ್ರದ ಯೂತ್‌ ಕಾಂಗ್ರೆಸ್‌ ಈಗಾಗಲೇ ಎಚ್ಚರಿಕೆ ನೀಡಿದೆ. 

Advertisement

ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಚಿತ್ರದಲ್ಲಿ  ಯುಪಿಎ ಮುಖ್ಯಸ್ಥೆ  ಸೋನಿಯಾ ಗಾಂಧಿ ಪಾತ್ರವನ್ನು  ಜರ್ಮನ್‌ ನಟಿ ಸುಜಾನ್‌ ಬರ್ನರ್ಟ್‌ ನಿರ್ವಹಿಸಿದ್ದಾರೆ. “ಲಿಪ್‌ ಸ್ಟಿಕ್‌ ಅಂಡರ್‌ ಮೈ ಬುರ್ಖಾ’ ಖ್ಯಾತಿಯ ನಟಿ ಆಹನಾ ಕುಮಾರಾ ಅವರು ಪ್ರಿಯಾಂಕಾ ಗಾಂಧಿಯಾಗಿ ನಟಿಸಿದ್ದಾರೆ; ಅರ್ಜುನ್‌ ಮಾಥುರ್‌ ರಾಹುಲ್‌ ಗಾಂಧಿಯಾಗಿ ನಟಿಸಿದ್ದಾರೆ. ಚಿತ್ರವನ್ನು ವಿಜಯ್‌ ರತ್ನಾಕರ್‌ ಗುತ್ತೆ ನಿರ್ದೇಶಿಸಿದ್ದಾರೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next