Advertisement

ಕಚೇರಿಗೆ ಜನರ ಅಲೆದಾಟ ತಪ್ಪಿಸುವುದೇ ಎಸಿಬಿ ಉದ್ದೇಶ

04:56 PM Aug 27, 2021 | Team Udayavani |

ದೊಡ್ಡಬಳ್ಳಾಪುರ: ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ನಡೆಯುತ್ತಿದ್ದ ಕುಂದುಕೊರತೆ ಸಭೆಗಳು ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆ ಸ್ಥಗಿತವಾಗಿತ್ತು. ಇನ್ನುಮುಂದೆಪ್ರತಿ ತಿಂಗಳು ತಾಲೂಕುಕೇಂದ್ರಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ ನಡೆಸಲಾಗುವುದು ಎಂದು ಎಸಿಬಿ ಡಿವೈಎಸ್‌ಪಿ. ಎಚ್‌.ಎಸ್‌.ಜಗದೀಶ್‌ ತಿಳಿಸಿದರು.

Advertisement

ತಬರನ ಕಥೆ ಆಗಬಾರದು: ಬೆಂಗ್ರಾಂ.ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ
ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿ, ಪೂರ್ಣಚಂದ್ರ ತೇಜಸ್ವಿ ಅವರು 70ರ ದಶಕದಲ್ಲಿನ ಬರೆದಿದ್ದ ತಬರನ ಕತೆಯಲ್ಲಿನ ತಬರನಂತೆ ಸರ್ಕಾರಿ ಕಚೇರಿಗಳಿಗೆ ಜನರ ಅಲೆದಾಟವನ್ನು ತಪ್ಪಿಸುವುದೇ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪ್ರಥಮ ಆದ್ಯತೆಯಾಗಿದೆ. ಈ ಕೆಲಸಕ್ಕೆ ಸಾರ್ವಜನಿಕರ ಸಹಕಾರವು ಮುಖ್ಯವಾಗಿದೆ.

ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಕಂದಾಯ, ಪೊಲೀಸ್‌, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ
ಕಾನೂನು ಬದ್ಧವಾದ ಜನರ ಕೆಲಸಗಳನ್ನು ಮಾಡಿಕೊಡಲು ವಿನಾಕಾರಣ ವಿಳಂಬ ಮಾಡುವುದು ಸಹ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ
ಎಡೆ ಮಾಡಿಕೊಟ್ಟಂತೆ. ಸರ್ಕಾರಿ ಇಲಾಖೆಗಳಲ್ಲಿ ಕಾಲಮಿತಿಯ ಒಳಗೆ ತಮ್ಮ ಕೆಲಸಗಳು ಆಗದೇ ಇದ್ದಾಗ ಸಾರ್ವಜನಿಕರು ಸೂಕ್ತ ದಾಖಲೆಗಳೊಂದಿಗೆ ಎಸಿಬಿಗೆ ದೂರು ಸಲ್ಲಿಬೇಕು ಎಂದರು.

ಇದನ್ನೂ ಓದಿ:ಸುತ್ತಾಟಕ್ಕೆ ಸೀಮಿತವಾದ ಗೃಹ ಸಚಿವರ ಮೈಸೂರು ಭೇಟಿ: ಕನಿಷ್ಠ ಸಭೆಯನ್ನೂ ನಡೆಸದ ಸಚಿವರು!

ಲಂಚ ಕೇಳಿದ್ರೆ ದೂರು ನೀಡಿ: ಎಸಿಬಿ ಹೊಸ ಕಾನೂನುಗಳ ಪ್ರಕಾರ ಸರ್ಕಾರಿ ಅಧಿಕಾರಿಗಳಷ್ಟೇ ಅಲ್ಲದೆ, ಖಾಸಗಿ ವ್ಯಕ್ತಿಗಳ ಮೂಲಕವು ಲಂಚಕ್ಕೆ ಬೇಡಿಕೆ ಇಟ್ಟರೆ ಅವರ ವಿರುದ್ಧವು ಸಹ ಕ್ರಮ ಕೈಗೊಳ್ಳಲು ಅವಕಾಶವಿದೆ. ಕಾನೂನಿನಲ್ಲಿ ಅವಕಾಶ ಇಲ್ಲದ ಕೆಲಸವನ್ನು ತಮ್ಮ ಪರವಾಗಿ ಮಾಡಿಕೊಡುವಂತೆ ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕುವುದು ಸಹ ಅಪರಾಧವಾಗಿದೆ. ಸರ್ಕಾರಿ ಅಧಿಕಾರಿಗಳು ಸಹ ಸೂಕ್ತ ದಾಖಲೆಗಳ ಮೂಲಕ ದೂರು ನೀಡಲು ಅವಕಾಶವಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಸಕಾಲ’ ಆಡಳಿತದ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದರು.ಸಭೆಯಲ್ಲಿ ಹೆಚ್ಚಿನ ದೂರು ಸಲ್ಲಿಕೆಯಾಗುವ ನಿರೀಕ್ಷೆಯಿತ್ತು. ಆದರೆ ಬಹಳಷ್ಟು ಜನರಿಗೆ ಈ ಬಗ್ಗೆ ಅರಿವಿಲ್ಲ. ಈ ಬಗ್ಗೆ ಜಾಗೃತರಾಗಬೇಕಿದೆ ಎಂದರು.

Advertisement

ವಿವಿಧ ಬಗೆಯ ದೂರು ದಾಖಲು: ಕುಂದುಕೊರತೆ ಸಭೆಯಲ್ಲಿ ಖಾತೆ ಬದಲಾವಣೆ, ಕೆರೆ ಅಂಗಳದಲ್ಲಿ ಅಕ್ರಮವಾಗಿ ಮಣ್ಣುತೆಗೆಯುತ್ತಿರುವುದು, ಹುಲುಕುಂಟೆ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಕಬಳಿಕೆ, ಒಂದೇ ಕುಟುಂಬಕ್ಕೆ 16ಎಕರೆ ಭೂಮಿ ಮಂಜೂರು ಮಾಡಿರುವುದು, ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ಎಸಿಬಿ ಅಧಿಕಾರಿಗಳಿಗೆ ಲಿಖಿತವಾಗಿ ದೂರು ಸಲ್ಲಿಸಿದರು. ಸಭೆಯಲ್ಲಿ ತಹಶೀಲ್ದಾರ್‌ ಟಿ.ಎಸ್‌.ಶಿವರಾಜ ಗ್ರೇಡ್‌-2 ತಹಶೀಲ್ದಾರ್‌ ರಮೇಶ್‌, ಎಸಿಬಿ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ, ರಾಘವೇಂದ್ರ, ದೊಡ್ಡಬಳ್ಳಾಪುರ ವೃತ್ತ ನಿರೀಕ್ಷಕ ಎಂ.ಬಿ.ನವೀನ್‌ ಕುಮಾರ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next