Advertisement
ಈ ಸಂಬಂಧ ಮೇಯರ್ ಕವಿತಾ ಸನಿಲ್ ಅವರ ನೇತೃತ್ವದಲ್ಲಿ ಶಾಸಕ ಜೆ.ಆರ್.ಲೋಬೋ, ಉಪಮೇಯರ್ ರಜನೀಶ್, ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಮುಖ್ಯಸಚೇತಕ ಎಂ.ಶಶಿಧರ ಹೆಗ್ಡೆ, ಆಯುಕ್ತ ಮೊಹಮ್ಮದ್ ನಝೀರ್ ಅವರು ಇತ್ತೀಚೆಗೆ ಸ್ಥಳ ಸಮೀಕ್ಷೆ ನಡೆಸಿದ್ದಾರೆ. ಪ್ರಮುಖ 11 ಸ್ಥಳಗಳಲ್ಲಿ ಬಸ್ ಬೇ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೊದಲಿಗೆ ಬಸ್ ಬೇ ಆಗಿ, ಬಳಿಕ ಬಸ್ ಶೆಲ್ಟರ್ ನಿರ್ಮಿಸಲಾಗುತ್ತದೆ. ಈ ಸಂದರ್ಭ ಅಲ್ಲಿ ಕುಡಿಯುವ ನೀರು, ಶೌಚಾಲಯ ಸಹಿಧಿತ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಹಂತದಲ್ಲಿ ಅವೈಜ್ಞಾನಿಕವಾಗಿರುವ ಈಗಿನ ಬಸ್ ನಿಲ್ದಾಣಗಳನ್ನು ತೆರವುಗೊಳಿಸಲಾ ಗುವುದು. ನಗರದಲ್ಲಿರುವ ಬಸ್ ನಿಲ್ದಾಣಗಳು ಅವೈಜ್ಞಾನಿಕವಾಗಿದ್ದು, ಜನ ಕೈ ತೋರಿಸುವಲ್ಲಿ ಬಸ್ ನಿಲುಗಡೆ ಎಂಬಂತಾಗಿದೆ. ಕೆಲವೆಡೆ ನಿಲ್ದಾಣಗಳೇ ಇಲ್ಲ. ಇದೆಲ್ಲದರ ಪರಿಣಾ ಮವಾಗಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಾಡು ತ್ತಿದೆ. ಹೀಗಾಗಿ ಎಲ್ಲ ಕಡೆಗಳಲ್ಲೂ ಬಸ್ ಬೇ ನಿರ್ಮಿಸುವ ಕನಸನ್ನು ಪಾಲಿಕೆ ಕಂಡಿತ್ತು.
Related Articles
ಬಾವುಟ ಗುಡ್ಡದಲ್ಲಿ ಪ್ರಸ್ತುತ ಸುಸಜ್ಜಿತ ಬಸ್‌ಬೇ ನಿರ್ಮಾಣವಾಗಿದೆ. ಮುಖ್ಯ ರಸ್ತೆಯ ಪಕ್ಕ ಅರ್ಧವೃತ್ತಾಕಾರದಲ್ಲಿ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಆಕರ್ಷಕ ಶೈಲಿಯಲ್ಲಿದೆ. ಬಸ್‌ಗಳು ಬಸ್ ಬೇ ಒಳಗೆ ಬಂದು ಹೋಗಬೇಕೆಂಬುದು ಪಾಲಿಕೆ ನಿಯಮ. ಆದರೆ ವಿಪರ್ಯಾಸವೆಂದರೆ ಬಹುತೇಕ ಬಸ್‌ಗಳು ಇದನ್ನು ಪಾಲಿಸುತ್ತಿಲ್ಲ.
Advertisement
ಬಸ್ ಬೇ ಅಂದರೇನು?ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸಲೆಂದೇ ಪ್ರತ್ಯೇಕವಾಗಿ ನಿಗದಿಪಡಿಸಿಟ್ಟ ಸ್ಥಳ. ರಸ್ತೆಯನ್ನು ಅರ್ಧವೃತ್ತಾಕಾರದಲ್ಲಿ ವಿಸ್ತರಿಸಲಾಗುತ್ತದೆ. ಇದರಲ್ಲಿ ಬಸ್ ನಿಲ್ಲಿಸಿದರೆ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದು. ಬಸ್ ಬೇ ಆಗುವ ಸ್ಥಳಕ್ಕೆ ಕಾಂಕ್ರೀಟು ಹಾಸುವುದು ಸಹಿತ ಅಲ್ಲಿಯೇ ಸುಸಜ್ಜಿತ ಬಸ್ ಶೆಲ್ಟರ್ ಅನ್ನೂ ನಿರ್ಮಿಸಲಾಗುವುದು. ಇದಕ್ಕೆ ಖಾಸಗಿ ಸಹಭಾಗಿತ್ವವನ್ನೂ ನಿರೀಕ್ಷಿಸಲಾಗುತ್ತಿದೆ. ಎಲ್ಲ ಕಡೆಗೂ ಯೋಜನೆ
ನಗರದ ಸಂಚಾರ ದಟ್ಟಣೆಗೆ ಇತಿಶ್ರೀ ಹಾಡಲೆಂದೇ ಎಲ್ಲ ಕಡೆಗಳಲ್ಲಿ ಬಸ್ ಬೇ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ. ಇದರಂತೆ 11 ಸ್ಥಳ ಸಮೀಕ್ಷೆಯನ್ನು ಸೋಮವಾರ ಶಾಸಕ ಜೆ.ಆರ್.ಲೋಬೋ ಉಪಸ್ಥಿತಿಯಲ್ಲಿ ನಡೆಸಲಾಗಿದೆ. ಶೀಘ್ರದಲ್ಲಿ ಬಸ್ ಬೇ ಕಾಮಗಾರಿ ಆರಂಭಿಸಿ ಬಸ್ ಶೆಲ್ಟರ್ ನಿರ್ಮಿಸಲಾಗುವುದು.
ಕವಿತಾ ಸನಿಲ್, ಮೇಯರ್ ಸಮೀಕ್ಷೆ ನಡೆಸಿದ ಸ್ಥಳ
ಬಲ್ಲಾಳ್‌ಬಾಗ್
ಕೆನರಾ ಕಾಲೇಜು ಹತ್ತಿರ
ಪಿವಿಎಸ್
ಬಂಟ್ಸ್‌ಹಾಸ್ಟೆಲ್
ಜ್ಯೋತಿ, ಬಲ್ಮಠ
ಬೆಂದೂರ್‌ವೆಲ್
ಕಂಕನಾಡಿ
ಆ್ಯಗ್ನೆಸ್
ಶಿವಬಾಗ್
ನಂತೂರು