Advertisement

ನಿಮ್ಮ ಸಹಾಯವನ್ನೂ ಎಂದಿಗೂ ಮರೆಯುವುದಿಲ್ಲ, ಧನ್ಯವಾದ ಭಾರತ: ಡೊನಾಲ್ಡ್ ಟ್ರಂಪ್

09:15 AM Apr 10, 2020 | Mithun PG |

ವಾಷಿಂಗ್ಟನ್: ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ ನಿರ್ಬಂಧಗಳನ್ನು ಸಡಿಲಿಸಿರುವ ಭಾರತ ಸರ್ಕಾರಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧನ್ಯವಾದ ತಿಳಿಸಿದ್ದಾರೆ.  ಈ ಔಷಧ ಸಾಂಕ್ರಮಿಕ ರೋಗ ತಡೆಗಟ್ಟವಲ್ಲಿನ ಯುದ್ಧದ ನೀತಿ ಬದಲಾವಣೆಗೆ ಪ್ರಮುಖ ಕಾರಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನರ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

ಗಮನಿಸಬೇಕಾದ ಅಂಶವೆಂದರೇ ಔಷಧ ರಪ್ತು ಮೇಲಿನ ನಿರ್ಬಂಧ ಸಡಿಲಿಸಿದಕ್ಕಾಗಿ 24 ಗಂಟೆಗಳ ಅವಧಿಯಲ್ಲಿ ಪಿಎಂ ಮೋದಿಯವರ ನಿರ್ಧಾರಕ್ಕೆ ಟ್ರಂಪ್ ಎರಡನೇ ಬಾರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೆ   ‘ನಿರ್ಬಂಧಗಳನ್ನು ತೆಗೆದುಹಾಕದಿದ್ದರೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದಿದ್ದ ಟ್ರಂಪ್ ಮಾತನ್ನೂ ಕೂಡ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಅಗತ್ಯ ಸಂದರ್ಭಗಳಲ್ಲಿ  ಸ್ನೇಹಿತರ ನಡುವೆ ಇನ್ನೂ ಹೆಚ್ಚಿನ ಸಹಕಾರದ ಅಗತ್ಯವಿದೆ.  ಭಾರತದ ನಿರ್ಧಾರವನ್ನು ಎಂದಿಗೂ ಮರೆಯಲಾಗುವುದಿಲ್ಲ! ಈ ಹೋರಾಟದಲ್ಲಿ ಭಾರತದ ಜನರಿಗೆ ಮಾತ್ರವಲ್ಲ, ಮಾನವೀಯತೆಗೂ ಸಹಾಯ ಮಾಡುವ ಮೂಲಕ  ಪ್ರಬಲ ನಾಯಕತ್ವ ವಹಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರಿಗೆ ಧನ್ಯವಾದಗಳು! ”ಎಂದು ಅಧ್ಯಕ್ಷ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ಬಳಸುವ ಮಲೇರಿಯಾ ವಿರೋಧಿ ಔಷಧವಾದ ಹೈಡ್ರಾಕ್ಸಿಕ್ಲೋರೋಕ್ವಿನ್  ರಫ್ತು ಮೇಲಿನ ನಿಷೇಧವನ್ನು ಹಿಂಪಡೆಯದಿದ್ದರೆ  ಪ್ರತೀಕಾರದ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲ ದಿನಗಳ ಹಿಂದೆ ತಿಳಿಸಿದ್ದರು.

Advertisement

ಇದೀಗ ಗುಜರಾತ್ ನ ಮೂರು ಕಾರ್ಖಾನೆಗಳಿಂದ ಒಟ್ಟು 29 ಮಿಲಿಯನ್ ಡೋಸ್ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧ ತುಂಬಿದ ಹಡಗು ಅಮೆರಿಕದತ್ತ ತೆರಳುತ್ತಿದೆ ಎಂಬ ಮಾಹಿತಿ ಪಡೆದ ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ತನ್ನ ವರಸೆಯನ್ನು ಬದಲಿಸಿ ಮೋದಿ ಗ್ರೇಟ್ ಬುಧವಾರ  ಹೊಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next