Advertisement

ಅಮೆರಿಕದಲ್ಲಿ ಜನಿಸಿದ ಮಾತ್ರಕ್ಕೆ ಪೌರತ್ವ ಸಿಗಲ್ಲ? 150ವರ್ಷಗಳ ಪದ್ಧತಿಗೆ ಟ್ರಂಪ್‌ ಬ್ರೇಕ್‌!

11:04 PM Dec 11, 2024 | Team Udayavani |

ವಾಷಿಂಗ್ಟನ್‌: ಇನ್ನು ಮುಂದೆ ಅಮೆರಿಕ ದಲ್ಲಿ ಜನಿಸಿದ ಮಾತ್ರಕ್ಕೆ ಅಲ್ಲಿನ ಪ್ರಜೆಯಾ ಗಲು ಸಾಧ್ಯವಿಲ್ಲ ಮತ್ತು ಎಲ್ಲರಿಗೂ ನಾಗರಿಕತ್ವ ಸಿಗುವುದು ಕಷ್ಟವಾಗಲಿದೆ ಎನ್ನಲಾಗಿದೆ. 150 ವರ್ಷಗಳ ಇಂತಹ ಪದ್ಧತಿಗೆ ಬ್ರೇಕ್‌ ಹಾಕಲು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಈ ಬಗ್ಗೆ ಸಂದರ್ಶ­ನವೊಂದರಲ್ಲಿ ಮಾತನಾಡಿದ ಅವರು “ಜ.20ರಂದು ಅಧಿಕಾರ ವಹಿಸಿಕೊಂಡ ಬಳಿಕ ಇಂಥ ತೀರ್ಮಾನ ರದ್ದು ಮಾಡಲು ಚಿಂತನೆ ನಡೆಸಿದ್ದೇನೆ. ನಮ್ಮಲ್ಲಿ ಜನಿಸಿದ ಮಾತ್ರಕ್ಕೆ ಪೌರತ್ವ ನೀಡಬೇಕು ಎನ್ನುವುದು ಹಾಸ್ಯಾಸ್ಪದ’ ಎಂದಿದ್ದಾರೆ.

Advertisement

ಅಮೆರಿಕ ಸಂವಿಧಾನದ 14ನೇ ತಿದ್ದು ಪಡಿ ಪ್ರಕಾರ, 150 ವರ್ಷಗಳಿಂದ ಅಲ್ಲಿ ಯಾರೇ ಜನಿಸಿದರೂ ಅವರಿಗೆ ಸಂವಿ ಧಾನದತ್ತವಾಗಿ ನಾಗರಿಕತ್ವ ಕೊಡಲಾಗು ತ್ತಿತ್ತು. ಈ ವ್ಯವಸ್ಥೆ ದುರುಪಯೋಗ ಮಾಡಿಕೊಳ್ಳುವ ಕೆಲವರು ಹೆರಿ­ಗೆಗಾ­ಗಿ ಅಮೆರಿಕಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

ಸುಲಭ ಅಲ್ಲ: ಇದೇ ವಿಚಾರ 2017 ರಲ್ಲಿ ಮೊದಲ ಬಾರಿಗೆ ಟ್ರಂಪ್‌ ಅಧ್ಯಕ್ಷರಾಗಿ­ದ್ದಾಗ ಪ್ರಸ್ತಾ ಪ ವಾಗಿತ್ತು. ಈ ಅವಕಾಶ ತೆಗೆದು ಹಾಕುವುದು ಸುಲಭವಲ್ಲ ಎನ್ನ­ಲಾ­ಗಿದೆ. ಟ್ರಂಪ್‌ ನೂತನ ನೀತಿ ಅಮೆರಿ­ಕದ ಹಾಲಿ ನಾಗರಿಕರಿಗೆ ಮಾತ್ರವಲ್ಲದೆ ಭಾರತೀಯರಿಗೂ ತೊಂದರೆಯಾ ಗಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next