Advertisement

ಥಾಣೆ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿಯ ಆರನೇ ವಾರ್ಷಿಕ ಮಹಾಪೂಜೆ

09:59 AM Apr 25, 2018 | |

ಥಾಣೆ: ಥಾಣೆ ಪಶ್ಚಿಮದ ವೀರ ಸಾವರ್ಕರ್‌ ನಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಇದರ ಆರನೇ ವಾರ್ಷಿಕ ಮಹಾಪೂಜೆಯು  ಎ. 14ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಶ್ರೀ ಚಾಮುಂಡೇಶ್ವರಿ ಸನ್ನಿಧಿಯ ಮುಖ್ಯಸ್ಥ, ಜೋತಿಷಿ ಶಿವಪ್ರಸಾದ್‌ ಪೂಜಾರಿ ಪುತ್ತೂರು ಇವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಪೂಜಾ-ವಿಧಿಗಳು ಜರಗಿದವು. ಧಾರ್ಮಿಕ ಕಾರ್ಯಕ್ರಮವಾಗಿ  7.30 ರಿಂದ ಕೆ. ಎಸ್‌. ತಂತ್ರಿ ಮತ್ತು ಬಳಗದವರಿಂದ ಗಣ ಹೋಮ,  ಪೂರ್ವಾಹ್ನ 10 ರಿಂದ ಶ್ರೀ ಸತ್ಯ ನಾರಾಯಣ ಮಹಾ ಪೂಜೆ, ಮಧ್ಯಾಹ್ನ  12.30 ರಿಂದ  ಮಹಾ ಮಂಗಳಾರತಿ ಹಾಗೂ ಮಧ್ಯಾಹ್ನ ಮಹಾಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು.

ಅಪರಾಹ್ನ 2.30ರಿಂದ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಭಾಂಡುಪ್‌ ಇವರಿಂದ ಭಜನಾ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ನಡೆಯಿತು.  ಸಂಜೆ  5.30ರಿಂದ ರಾತ್ರಿ 9ರ ವರೆಗೆ  ಪ್ರಸಾದ್‌ ಸಾಲ್ಯಾನ್‌ ಇವರಿಂದ ಶ್ರೀ ದೇವಿ ಚಾಮುಂಡೇಶ್ವರಿ ಅಮ್ಮನ  ದರ್ಶನ  ಆವೇಶ ಸೇವೆಯು ಜರುಗಿತು. ವಾರ್ಷಿಕೋತ್ಸವದ ಪೂಜೆಯ ಸಂದರ್ಭದಲ್ಲಿ ವಾಲಗದಲ್ಲಿ ದಿವಂಗತ  ರಾಮದಾಸ್‌ ಕೋಟ್ಯಾನ್‌ ಬಳಗದವರು ಸಹಕರಿಸಿದರು.

ಪೂಜಾ ವಿಧಿಯನ್ನು ಪುರೋಹಿತರಾದ  ಸುಬ್ಬರಾವ್‌ ಮತ್ತು ದೈವ ಪಾತ್ರಿ ಶುಭಕರ ಪೂಜಾರಿಯವರ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು. ಜಯಂತ್‌ ಮಟ್ಟು,  ಜಯ ಪೂಜಾರಿ ಕೆರ್ವಾಶೆ, ಲಕ್ಷ್ಮೀಶ ಶೆಟ್ಟಿ, ಸತೀಶ್‌ ಶೆಟ್ಟಿ,  ವಸಂತ್‌ ಕುಂದರ್‌, ರಾಧಾಕೃಷ್ಣ ಶೆಟ್ಟಿ, ಹರೀಶ್‌ ಪೂಜಾರಿ ಕಡ್ತಲ,  ಅಶ್ವಿ‌ನ್‌ ಅಮೀನ್‌, ಪುರುಷೋತ್ತಮ  ಪೂಜಾರಿ  ಇವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಮಧುಕರ್ತರಾಗಿ ಭಾಗವತರಾದ ಮುದ್ದಣ್ಣ ಪೂಜಾರಿ ಹಾಗೂ ಸಂಜೀವ ಮೂಲ್ಯ ಅವರು ಸಹಕರಿಸಿದರು. ಈ ಸಂದರ್ಭದಲ್ಲಿ ರುದ್ರ  ಎಂಟರ್‌ಟೈನ್‌ಮೆಂಟ್‌ ಇದರ ರೂವಾರಿಗಳಾದ ಸನಿಧ್‌ ಪೂಜಾರಿ, ಪ್ರಭಾಕರ ಬೆಳುವಾಯಿ, ರಂಗನಟ ನಿರ್ದೇಶಕರಾದ ಮನೋಹರ್‌ ನಂದಳಿಕೆ, ಥಾಣೆ ಬಿಲ್ಲವ ಸಂಘದ ಪ್ರಮುಖರಾದ  ಅನಂತ್‌ ಡಿ. ಸಾಲ್ಯಾನ್‌, ಎಸ್‌. ಎಸ್‌. ಪೂಜಾರಿ, ಅಶೋಕ್‌ ಎಂ. ಕೋಟ್ಯಾನ್‌, ಶ್ರೀ ದುರ್ಗಾ ಪರಮೇಶ್ವರಿ ಮಂದಿರ  ಮತ್ತು  ಬ್ರಹ್ಮಬೈದರ್ಕಳ  ಸೇವಾ ಟ್ರಸ್ಟ್‌ನ ಶೈಲೇಶ್‌ ಪೂಜಾರಿ, ಥಾಣೆ  ಅಯ್ಯಪ್ಪ ಮಂದಿರದ ರಾಧಾಕೃಷ್ಣ ಗುರುಸ್ವಾಮಿ, ಸಂಘಟಕರಾದ ನವೀನ್‌ ಪಡು ಇನ್ನಾ ದಂಪತಿ, ಸತೀಶ್‌ ದೇವಾಡಿಗ ಮುಂಡ್ಕೂರು, ಮಾಧವ್‌ ಪಡೀಲ್‌,  ಪ್ರದೀಪ್‌ ಸುವರ್ಣ ವಿರಾರ್‌, ಕೃಷ್ಣ  ಪೂಜಾರಿ,  ಸ್ಥಳೀಯ ರಾಜಕೀಯ ನೇತಾರರು ಉಪಸ್ಥಿತರಿದ್ದರು.

Advertisement

ಮಹಿಳಾ ಮಂಡಳಿಯ ಆಶಾ ಶಿವ ಪ್ರಸಾದ್‌ ಪೂಜಾರಿ, ಉಷಾ ಜಯ ಪೂಜಾರಿ, ಪ್ರೀತಿಕಾ ಶೆಟ್ಟಿ, ಗೀತಾ ಧಾಬೋಲ್ಕರ್‌, ಅಶ್ವಿ‌ತಾ ಶೆಟ್ಟಿ, ಸುನೀತಾ ಶೆಟ್ಟಿ, ಪೂರ್ಣಿಮಾ ಕೃಷ್ಣ ಪೂಜಾರಿ ಇವರುಗಳು ಸಹಕರಿಸಿದರು. 

ವಾರ್ಷಿಕ ಪೂಜೆಗೆ ಮಂಟಪದ ಹೂವಿನ ಅಲಂಕಾರ ಸೇವೆಯನ್ನು  ಅಶೋಕ್‌ ಪೂಜಾರಿ ಪುತ್ತೂರು ಹಾಗೂ ಜಯ ಪೂಜಾರಿ ಕೆರ್ವಾಶೆ ನೀಡಿದರು. ವಾರ್ಷಿಕ ಮಹಾಪೂಜೆಯ ಪ್ರಯುಕ್ತ ಜರಗಿದ  ಅನ್ನದಾನ ಸೇವೆಯನ್ನು ಪ್ರವೀಣ್‌ ಶೆಟ್ಟಿ ಪರಿವಾರ ಹಾಗೂ ಸಂಸಾರೆ ಪರಿವಾರ ಮಜಾYಂವ್‌ ಇವರು ನೀಡಿ ಸಹಕರಿಸಿದರು. ಎÇÉಾ ಧಾರ್ಮಿಕ ಕಾರ್ಯಕ್ರಮಗಳ ಶ್ರೇಯಸ್ಸಿಗೆ ಶ್ರಮಿಸಿದ ದಾನಿಗಳನ್ನು ಭಕ್ತರನ್ನು ಶಿವಪ್ರಸಾದ್‌ ಪೂಜಾರಿ ಪುತ್ತೂರು ಅವರು  ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next