Advertisement
ಥಾಣೆ ಪಶ್ಚಿಮದ ಮುಲುಂಡ್ ಚೆಕ್‌ನಾಕಾದ ಹೊಟೇಲ್ ರಿಟ್ರೀಟ್ ಸಭಾಗೃಹದಲ್ಲಿ ಥಾಣೆ ಬಂಟ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಸೀತಾರಾಮ್ ಜೆ. ಶೆಟ್ಟಿ ಮತ್ತು ಸುನಿಲ್ ಆಳ್ವ ಅವರ ಮುಂದಾಳತ್ವದಲ್ಲಿ ಜರಗಿದ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ, ಧನ ಸಹಾಯ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಎಲ್ಲ ಕಾರ್ಯಗಳಿಗೆ, ಉತ್ತಮ ಕೆಲಸಗಳಿಗೆ ಎಲ್ಲರ ಸಹಕಾರ, ಒಮ್ಮತದ ನಿಲುವು ನನಗೆ ಮತ್ತಷ್ಟು ಶಕ್ತಿ ತುಂಬಿದೆ. ಕಾರ್ಯಕ್ರಮಕ್ಕೆ ಶ್ರಮಿಸುವ ಕೇಶವ ಎಂ. ಆಳ್ವ ಹಾಗೂ ಇತರ ದಾನಿಗಳ ಸಹಕಾರವನ್ನು ಮರೆಯು ವಂತಿಲ್ಲ ಎಂದರು.
Related Articles
ಅಸೋಸಿಯೇಶನ್‌ನ ಶಿಕ್ಷಣ ಸಮಿತಿಯ ಕಾರ್ಯಾ ಧ್ಯಕ್ಷ ಸೀತಾರಾಮ ಜೆ. ಶೆಟ್ಟಿ ಇವರು ಮಾತನಾಡಿ, ಕಳೆದ 13 ವರ್ಷಗಳಿಂದ ಅಧ್ಯಕ್ಷರು, ಪದಾಧಿಕಾರಿ ಗಳು, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದವರ, ದಾನಿಗಳ ಸಂಪೂರ್ಣ ಸಹಕಾರ ದೊಂದಿಗೆ ಈ ಶೈಕ್ಷಣಿಕ ಧನ ಸಹಾಯ ವಿತರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಮಿತಿಯ ಮುಖಾಂತರ ಉಪಯುಕ್ತ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಆಯೋಜಿಸಲಾಗುವುದು ಎಂದರು.
Advertisement
ಅಸೋಸಿಯೇಶನ್‌ನ ಉಪಾಧ್ಯಕ್ಷ ವೇಣು ಗೋಪಾಲ್ ಎಲ್. ಶೆಟ್ಟಿ ಅವರು ಸಂಸ್ಥೆಯು ನಡೆದು ಬಂದ ದಾರಿಯನ್ನು ವಿವರಿಸಿ, ಈ ಸಂಸ್ಥೆ ಈ ಬಾರಿ 2000 ರೂ. ಗಳಂತೆ 159 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 7 ಮಂದಿ ಬುದ್ಧಿಮಾಂದ್ಯ ಮಕ್ಕಳಿಗೆ ತಲಾ 7000 ರೂ. ಗಳಂತೆ ಧನ ಸಹಾಯ ನೀಡಲಾಗಿದೆ. ಅಲ್ಲದೆ ಆರ್ಥಿಕವಾಗಿ ಹಿಂದುಳಿದ ಪರಿಸರದ 26 ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಿದ್ದೇವೆ ಎಂದು ಸಮಿತಿಯ ಮಾಹಿತಿಯನ್ನು ನೀಡಿದರು.
ಕೋಶಾಧಿಕಾರಿ ಭಾಸ್ಕರ ಎನ್. ಶೆಟ್ಟಿ, ಜತೆ ಕೋಶಾಧಿಕಾರಿ ಚಂದ್ರಶೇಖರ್ ಎಸ್. ಶೆಟ್ಟಿ, ಸ್ನೇಹ ಸೌರಭದ ಸಂಪಾದಕ ನಿತ್ಯಾನಂದ ಶೆಟ್ಟಿ ಬೆಳುವಾಯಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಕುಶಲಾ ಎನ್. ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು.
ಅತಿಥಿ-ಗಣ್ಯರುಗಳನ್ನು ಅಧ್ಯಕ್ಷ ಕುಶಲ್ ಸಿ. ಭಂಡಾರಿ ಅವರು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಅತ್ತೂರು ಬಾಬು ಎನ್. ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಸುನಿಲ್ ಜೆ. ಶೆಟ್ಟಿ, ಜತೆ ಕಾರ್ಯದರ್ಶಿ ಅಶೋಕ್ ಎಂ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕರುಣಾಕರ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಂಜನ್ ಆರ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಪದಾಧಿಕಾರಿಗಳಾದ ಶರ್ಮಿಳಾ ಎಸ್. ಶೆಟ್ಟಿ, ತಾರಾ ಪಿ. ಶೆಟ್ಟಿ ಇವರು ವಿದ್ಯಾರ್ಥಿಗಳ ಯಾದಿಯನ್ನು ಓದಿದರು. ಶೈಕ್ಷಣಿಕ ಧನ ಸಹಾಯಕ್ಕಾಗಿ ಸಹಕರಿಸಿದ ಎಲ್ಲಾ ಗಣ್ಯರನ್ನು ಅಧ್ಯಕ್ಷ ಕುಶಲ್ ಸಿ. ಭಂಡಾರಿ ಮತ್ತು ಪದಾಧಿಕಾರಿಗಳು ಗೌರವಿಸಿದರು. ಮಹಿಳಾ ವಿಭಾಗದ ಪದಾಧಿಕಾರಿಗಳಾದ ಸುಲೋಚನಾ ಶೆಟ್ಟಿ, ಶಕುಂತಳಾ ಶೆಟ್ಟಿ, ಮೋಹಿನಿ ಶೆಟ್ಟಿ, ಆರತಿ ವೈ. ಶೆಟ್ಟಿ, ರೇವತಿ ಎಸ್. ಶೆಟ್ಟಿ, ಜ್ಯೋತಿ ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷ ರಂಜನ್ ಆರ್. ಶೆಟ್ಟಿ ಇವರು ಸಹಕರಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಜತೆ ಕಾರ್ಯದರ್ಶಿ ಅಶೋಕ್ ಎಂ. ಶೆಟ್ಟಿ ಇವರು ಗಣ್ಯರ ಹೆಸರನ್ನು ವಾಚಿಸಿದರು. ಥಾಣೆ ಮಾಜಿವಾಡಾದ ಶ್ರೀ ಆದಿಶಕ್ತಿ ಕನ್ನಡ ಸಂಘಕ್ಕೆ ಅಸೋಸಿಯೇಶನ್ ವತಿಯಿಂದ ಧನಸಹಾಯ ನೀಡಲಾಯಿತು. ಅಧ್ಯಕ್ಷ ಕುಶಲ್ ಸಿ. ಭಂಡಾರಿ ಇವರು ಶ್ರೀ ಆದಿಶಕ್ತಿ ಕನ್ನಡ ಸಂಘದ ಅಧ್ಯಕ್ಷ ಭಾಸ್ಕರ ಎಂ. ಶೆಟ್ಟಿ ಅವರಿಗೆ ಧನಸಹಾಯವನ್ನು ಹಸ್ತಾಂತರಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ಕಾರ್ಯದರ್ಶಿ ಸುನಿಲ್ ಜೆ. ಶೆಟ್ಟಿ ನಿರ್ವಹಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕರುಣಾಕರ ಶೆಟ್ಟಿ ವಂದಿಸಿದರು. ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯಲು ಬಹಳಷ್ಟು ಕಷ್ಟವಿತ್ತು. ಆದರೆ ಇಂದು ಶಿಕ್ಷಣಕ್ಕಾಗಿ ಸಮಾಜದ ಸಂಘಟನೆಗಳು ಸಹಕರಿಸುತ್ತಿವೆ. ಶಿಕ್ಷಣಕ್ಕಾಗಿ ನೀಡುವ ಧನ ಸಹಾಯ ನಿಜವಾಗಿಯೂ ಅರ್ಥಪೂರ್ಣ. ನಾನು ಹತ್ತನೇ ತರಗತಿಯವರೆಗೆ ಶಿಕ್ಷಣ ಪಡೆದರು ಕೂಡಾ ಸತತ ಪರಿಶ್ರಮ, ಶ್ರದ್ಧೆಯಿಂದ ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದು, ನನ್ನ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಿದ್ದೇನೆ. ನನ್ನ ಮುಖಾಂತರ ಇಂದು ಹಲವಾರು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಶಿಕ್ಷಣವನ್ನು ಪಡೆದಿದ್ದಾರೆ ಎನ್ನಲು ಹೆಮ್ಮೆಯಾಗುತ್ತಿದೆ. ನನ್ನ ಈ ರೀತಿಯ ಸಮಾಜಪರ ಸೇವೆಗೆ ನನ್ನ ಪತ್ನಿ ಪ್ರೇರಣೆ ಎನ್ನಲು ಹೆಮ್ಮೆಯಾಗುತ್ತಿದೆ. ಸಮಾಜದಿಂದ ಸಹಾಯವನ್ನು ಪಡೆದ ಮಕ್ಕಳು ಮುಂದೆ ಸಮಾಜದ ಋಣವನ್ನು ತೀರಿಸುವ ಕಾರ್ಯದಲ್ಲಿ ತೊಡಗಬೇಕು
– ಪ್ರಭಾಕರ ಜೆ. ಶೆಟ್ಟಿ (ಸಿಎಂಡಿ : ಈಸ್ಟ್‌ವೆಲ್ ಇಂಡಸ್ಟಿÅàಸ್ ಪ್ರೈವೇಟ್ ಲಿಮಿಟೆಡ್). ಥಾಣೆ ಬಂಟ್ಸ್ ಅಧ್ಯಕ್ಷ ಕುಶಲ್ ಸಿ. ಭಂಡಾರಿ ಇವರ ನೇತೃತ್ವದ ತಂಡವು ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಧನ ಸಹಾಯವನ್ನು ಪಡೆದು ಮಕ್ಕಳು ಖುಷಿ ಪಡುವುದರೊಂದಿಗೆ ಈ ಹಣವು ಎಲ್ಲಿಂದ, ಹೇಗೆ ಬಂದಿದೆ ಎಂಬುವುದನ್ನು ಅರಿಯಬೇಕು. ಅದರ ಹಿಂದೆ ಸಂಸ್ಥೆಯು ಪಟ್ಟಿರುವ ಶ್ರಮದ ಬಗ್ಗೆ ತಿಳಿಯಬೇಕು. ಮಕ್ಕಳು ಇಂದು ಪಡೆದ ಸಹಾಯವನ್ನು ಮುಂದಿನ ದಿನಗಳಲ್ಲಿ ಸಂಸ್ಥೆಯ ಮುಖಾಂತರ ಇತರ ಮಕ್ಕಳಿಗೆ ನೀಡಿ, ಋಣ ತೀರಿಸುವ ಕಾರ್ಯದಲ್ಲಿ ತೊಡಗಬೇಕು
– ಕೆ. ಎಂ. ಶೆಟ್ಟಿ
(ಆಡಳಿತ ನಿರ್ದೇಶಕರು : ವಿ. ಕೆ. ಗ್ರೂಪ್ ಆಫ್ ಕಂಪೆನೀಸ್). ವಿದ್ಯಾದಾನವು ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದ ದಾನವಾಗಿದೆ. ಅಂತಹ ಪುಣ್ಯದ ಕಾರ್ಯವನ್ನು ಥಾಣೆ ಬಂಟ್ಸ್ ಮಾಡುತ್ತಿದೆ. ಕೇವಲ ಶಿಕ್ಷಣ ಪಡೆದಾಕ್ಷಣ ಮಾತ್ರಕ್ಕೆ ಬದುಕು ಪೂರ್ಣಗೊಳ್ಳುವುದಿಲ್ಲ. ಶಿಕ್ಷಣದೊಂದಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿದಾಗ ಮಾತ್ರ ಬದುಕು ಪರಿಪೂರ್ಣವಾಗುತ್ತದೆ. ಮಕ್ಕಳು ಆಶಾದಾಯಕ ವ್ಯಕ್ತಿತ್ವವನ್ನು ಹೊಂದಿರಬೇಕು. ಈ ಮನೋಭಾವನೆಯಿಂದ ಎಂತಹ ಸಾಧನೆಯನ್ನು ಮಾಡಲು ಸಾಧ್ಯವಿದೆ. ಮಕ್ಕಳ ಅಭಿರುಚಿಯನ್ನು ಅರಿತುಕೊಂಡು ಪಾಲಕರು ಅವರನ್ನು ಬೆಳೆಸಬೇಕು
– ವಿಜೇತಾ ಎಸ್. ಶೆಟ್ಟಿ – ಪ್ರಾಂಶುಪಾಲೆ: ವಿವೇಕ್ ಕಾಲೇಜ್ ಆಫ್ ಕಾಮರ್ಸ್ ಮುಂಬಯಿ ಚಿತ್ರ ವರದಿ: ಸುಭಾಷ್ ಶಿರಿಯಾ