Advertisement
ರಥೋತ್ಸವ ನಿಮಿತ್ತ ಏರ್ಪಡಿಸಿದ್ದ 156ನೇ ಮಹಾದೇವಿಯ ಮಹಾ ಪುರಾಣ ಮಂಗಲಗೊಂಡಿತು. ವಿಶೇಷವೆಂದರೆ ತಾಳಿಕೋಟೆ ಸಮೀಪದ ಗೋಟಖಂಡ್ಕಿಗ್ರಾಮದಲ್ಲಿ ನಿರ್ಮಾಣಗೊಂಡಿದ್ದ ಮಾತೆ ಮಹಾದೇವಿ ತಾಯಿ ಮಂದಿರಕ್ಕೆ ಅಲ್ಲಿ ವಿವಾಹವಾಗದ ಹೆಣ್ಣು ಮಕ್ಕಳು ಭೇಟಿ ನೀಡಿ ತಮಗೆ ಪತಿ ಭಾಗ್ಯವನ್ನು ಅಪೇಕ್ಷಿಸಿದಲ್ಲಿ ಮದುವೆಯಾಗುತ್ತದೆ ಎಂಬುದು ಈ ಭಾಗದಲ್ಲಿರುವ ಹಿರಿಯರ ಮಾತು.
Related Articles
Advertisement
ಮಹಾದೇವಿ ತಾಯಿಯ ನೂತನ ಮಹಾ ಮೂರ್ತಿಯನ್ನು ಗ್ರಾಮದ ಮಹಾದಾನಿ ಮಡಿವಾಳಮ್ಮ ಹನುಮಂತ್ರಾಯ ಅಗಸರ ಎಂಬರು 70 ಸಾವಿರ ರೂ. ತಮ್ಮ ಖರ್ಚು ಹಾಗೂ ಸ್ವ ಇಚ್ಚೆಯಿಂದ ನಿರ್ಮಿಸಿ ಭಕ್ತಾದಿಗಳಿಗೆ ಭಕ್ತಿ ಸಮರ್ಪಿಸಲು ಅನುವು ಮಾಡಿಕೊಟ್ಟಿದ್ದಾರೆ. ಅದರಂತೆ ನೂತನ ರಥವನ್ನು ಕಳೆದ 13 ವರ್ಷಗಳ ಹಿಂದೆಯೇ ಈ ಗ್ರಾಮದಿಂದ ಮುತ್ತೈದೆ ತನದ ಭಾಗ್ಯವನ್ನು ಪಡೆದುಕೊಂಡ ಹೋದ ಸುಮಂಗಲಿಯರೆಲ್ಲರೂ ತಮ್ಮ ತಮ್ಮ ಪತಿಯ ಮನೆಯಿಂದಲೇ ದೇಣಿಗೆಯ ಹಣವನ್ನು ಸಂಗ್ರಹಿಸಿ ಎಲ್ಲರೂ ಒಗ್ಗೂಡಿ 2.75 ಲಕ್ಷ ರೂ. ವೆಚ್ಚ ಭರಿಸಿ ಮಹಾದೇವಿ ತಾಯಿಯ ನೂತನ ರಥವನ್ನು ನಿರ್ಮಿಸಿದ್ದಾರೆ.
ಈ ರಥವನ್ನು ಪ್ರತಿ ವರ್ಷ ಈ ಸುಮಂಗಲೆಯರೆ ಎಳೆದು ಭಕ್ತಿ ಸಮರ್ಪಿಸಿ ಸುಖಃ ಶಾಂತಿ ನೆಮ್ಮದಿಯನ್ನು ಅಪೇಕ್ಷಿಸಿ ವರ ಪಡೆದು ಸಾಗುತ್ತಿದಂತೆ ಈ ಸಲವೂ ಸಹ ಭಕ್ತಿ ಭಾವದಿಂದ ರಥವನ್ನು ಎಳೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಈ ರಥವು ಮಹಾದೇವಿ ತಾಯಿಯ ಮಂದಿರದಿಂದ ಸುಮಾರು 1 ಕಿ.ಮೀ. ಅಂತರದಲ್ಲಿರುವ ಬಸವೇಶ್ವರ ಪಾದಗಟ್ಟಿವರೆಗೆ ತಲುಪಿ ಮರಳಿ ಅದೇ ಮಾರ್ಗದಿಂದ ದೇವಿ ಮಂದಿರಕ್ಕೆ ತಲುಪಿ ನಂತರ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಜಾತ್ರಾ ಮಹೋತ್ಸವದಲ್ಲಿ ಮುಂಬೈ, ಪುಣೆ, ಸೊಲ್ಲಾಪುರ, ಕೊಲ್ಲಾಪುರ, ಹೈದ್ರಾಬಾದ್, ಕಲಬುರಗಿ, ಹುಬ್ಬಳ್ಳಿ-ದಾರವಾಡ, ವಿಜಯಪುರದಿಂದ ಭಕ್ತರು ಆಗಮಿಸಿದ್ದರು