Advertisement

ದಿನಸಿ ಕಿಟ್‌ಗಳ ವಿತರಣೆಗೆ ಚಾಲನೆ

03:38 PM Apr 24, 2020 | Naveen |

ತಾಳಿಕೋಟೆ: ಕೋವಿಡ್ ಮಟ್ಟಹಾಕಲು ಎಲ್ಲರೂ ಮನೆಯಲ್ಲಿಯೇ ಇರುವುದು ಅಗತ್ಯವಾಗಿದೆ ಎಂದು ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು. ಗುರುವಾರ ಪಟ್ಟಣದ ವಾರ್ಡ್‌ ನಂ. 1 ಮತ್ತು 2ರ ಆಶ್ರಯ ಬಡಾವಣೆಯಲ್ಲಿ ದಿನಸಿ ಕಿಟ್‌ ವಿತರಿಸಿ ಮಾತನಾಡಿದ ಅವರು, 20 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‌ ವಿತರಿಸಲಾಗುತ್ತದೆ. ಎಲ್ಲ ಬಡವರಿಗೆ ಕಿಟ್‌ ಮುಟ್ಟಿಸುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದರು.

Advertisement

ಕೋವಿಡ್ ತಡೆಗಟ್ಟುವ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸ್‌ ಸಿಬ್ಬಂದಿ, ಪೌರಕಾಮಿರಕರ ಕಾರ್ಯ ಶ್ಲಾಘನೀಯ. ಲಾಕ್‌ಡೌನ್‌ ಮುಗಿಯುವವರೆಗೂ ಬಡವರ ಹೊಟ್ಟೆ ತುಂಬಿಸುವ ಜವಾಬ್ದಾರಿ ನನ್ನದು ಎಂದರು.

ಮಹಾದೇವಿ ಪಾಟೀಲ (ನಡಹಳ್ಳಿ), ಶಾಂತಗೌಡ ಪಾಟೀಲ, ವಾಸುದೇವ ಹೆಬಸೂರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸಂಗಮೇಶ ಇಂಗಳಗಿ, ಜಯಸಿಂಗ್‌ ಮೂಲಿಮನಿ, ಮುದಕಣ್ಣ ಬಡಿಗೇರ, ಬಸನಗೌಡ ವಣಕ್ಯಾಳ, ಎಚ್‌.ಎಸ್‌. ಪಾಟೀಲ, ಪ್ರಕಾಶ ಹಜೇರಿ, ಕಾಶೀನಾಥ ಮುರಾಳ, ಮುತ್ತಪ್ಪ ಚಮಲಾಪುರ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next