Advertisement

ಇಂದು ಟಿ.ಜಿ.ಹಳ್ಳಿ ಜಲಾಶಯ ಪುನಃಶ್ಚೇತನ ಕಾಮಗಾರಿ ಶಂಕು

06:20 AM Mar 06, 2019 | Team Udayavani |

ಬೆಂಗಳೂರು: ಜಲಮಂಡಳಿ ವತಿಯಿಂದ ನಡೆಯುತ್ತಿರುವ ತಿಪ್ಪಗೊಂಡನಹಳ್ಳಿ ಜಲಾಶಯದ ಮೊದಲನೇ ಹಂತದಲ್ಲಿ ಪುನಃಶ್ಚೇತನ ಕಾಮಗಾರಿಯ ಶಂಕುಸ್ಥಾಪನೆಯನ್ನು ಬುಧವಾರ (ಮಾ.6) ಸಂಜೆ 4 ಗಂಟೆಗೆ ಜಲಾಶಯದ ಆವರಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ನೆರವೇರಿಸಲಿದ್ದಾರೆ.

Advertisement

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಸಚಿವ ಕೆ.ಜೆ.ಜಾರ್ಜ್‌, ಮೇಯರ್‌ ಗಂಗಾಂಬಿಕೆ ಭಾಗವಹಿಸುತ್ತಿದ್ದಾರೆ. ಇದರ ಜತೆಗೆ ಉತ್ತರಹಳ್ಳಿ ನಿರ್ಮಾಣವಾಗಿರುವ 24 ದಶ ಲಕ್ಷ ಲೀಟರ್‌ ಸಾಮರ್ಥ್ಯದ ನೆಲಮಟ್ಟದ ಜಲಾಗಾರ ಲೋಕಾರ್ಪಣೆ ಹಾಗೂ ಗೊಟ್ಟಿಗೆರೆಯಲ್ಲಿ 50 ದಶ ಲಕ್ಷ ಲೀಟರ್‌ ಸಾಮರ್ಥ್ಯದ ನೆಲಮಟ್ಟದ ಜಲಾಗಾರಕ್ಕೆ ಶಂಕುಸ್ಥಾಪನೆ ಹಾಗೂ 110 ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆಗೆ ಬೆಳಗ್ಗೆ 11.30ಕ್ಕೆ ಗೊಟ್ಟಿಗೆರೆ ಗುಡ್ಡದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ ಚಾಲನೆ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next