Advertisement

300 ಎಕರೆ ಪ್ರದೇಶದಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌

03:37 PM Nov 29, 2020 | Suhan S |

ಮುಳಬಾಗಿಲು: ದೇವರಾಯಸಮುದ್ರ ಬಳಿ 300 ಎಕರೆ ಪ್ರದೇಶದಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ನಿರ್ಮಿಸಿ 5 ಸಾವಿರ ಜನಕ್ಕೆ ಉದ್ಯೋಗ ನೀಡಲುಉದ್ದೇಶಿಸಲಾಗಿದೆ ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

Advertisement

ಜಿಲ್ಲಾಡಳಿತ ಹಾಗೂ ಜಿಪಂ ಸಂಯುಕ್ತಾಶ್ರಯದಲ್ಲಿ ಕೈಮಗ್ಗ ಮತ್ತು ಜವಳಿಇಲಾಖೆ ವತಿಯಿಂದ 2020-21ನೇ ಸಾಲಿನ ನೂತನ ಜವಳಿ ನೀತಿ ಯೋಜನೆಯಡಿ ಶನಿವಾರ ನಗರದ ಡಿವಿಜಿ ರಂಗಮಂದಿರದಲ್ಲಿ ಏರ್ಪಡಿಸ ಲಾಗಿದ್ದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಇತರೆ ಫ‌ಲಾನುಭವಿಗಳಿಗೆ ಇಲಾಖೆ ಯೋಜನೆಗಳ ಕುರಿತು ಅರಿವು ಮೂಡಿ ಸುವ ಹಾಗೂ 02 ದಿನಗಳ ಉಧ್ಯಮಶೀಲತಾಭಿವೃದ್ದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಧಾರಿತ ಯೋಜನೆ: ಕೈಮಗ್ಗ ಮತ್ತು ಜವಳಿ ಇಲಾಖೆಯು ನೇಕಾರರ ವಿಶೇಷ ಪ್ಯಾಕೇಜ್‌ ಯೋಜನೆಯಡಿ ನೇಕಾರ ಫ‌ಲಾನುಭವಿಗಳು ಸ್ವಯಂ ಉದ್ಯೋಗ ಕೈಗೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ಅನುಕೂಲವಾಗುವಂತೆ ಫ‌ಲಾನುಭವಿ/ಸಮುದಾಯ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಅಲ್ಲದೇ ಇದೊಂದು ಸಾರ್ವಜನಿಕ ಉದ್ಯಮ ಶೀಲತಾ ಅಭಿವೃದ್ಧಿ ಕಾರ್ಯಕ್ರಮವಾಗಿದ್ದು, ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಜನರು ತಮ್ಮ ಅರ್ಹತೆಗೆ ಅನುಗುಣವಾಗಿ ತರಬೇತಿ ಪಡೆದು ತಮ್ಮ ಜೀವನ ಅಭಿವೃದ್ಧಿಪಡಿಸಿಕೊಳ್ಳಲು ಇಲಾಖೆಯು ಸಹಕಾರಿಯಾಗಿದೆ ಎಂದರು.

ಜನರುಕಚೇರಿಗಳಿಗೆ ಬಂದಾಗ ಅಧಿಕಾರಿಗಳು ಸೌಜನ್ಯದಿಂದ ವರ್ತಿಸುತ್ತಾ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ನೀಡಿ ನೇಕಾರರಿಗೆ ವಿದ್ಯುತ್‌ ಮಗ್ಗಗಳನ್ನು ಮತ್ತು ವೈಷ್ಣವಿ ಗಾರ್ಮೆಂಟ್ಸ್‌ನಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿದರು. ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಎ.ಸುರೇಶ್‌ಕುಮಾರ್‌, ಉಪ ನಿರ್ದೇಶಕಿ ಎಂ.ಸೌಮ್ಯ, ನಗರಸಭೆ ಅಧ್ಯಕ್ಷ ರಿಯಾಜ್‌ ಅಹಮದ್‌, ಆರ್‌.ಎಂ.ಸಿ ಅಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್‌, ದರಕಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ, ಅರುಣಕುಮಾರಿ, ತಾಯಲೂರು ಸುರೇಶ್‌ಕುಮಾರ್‌ ಸೇರಿದಂತೆ ಹಲವಾರು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

ಕೈಮಗ್ಗ, ವಿದ್ಯುತ್‌ ಮಗ್ಗಗಳಖರೀದಿಗೆ ಸಹಾಯಧನ ನೀಡಲಾಗುವುದು. ನೇಕಾರರ ವಿಶೇಷ ಪ್ಯಾಕೇಜ್‌ಯೋಜನೆ, ನೇಕಾರರಕಾಲೋನಿಗಳಿಗೆ ಮೂಲ ಸೌಲಭ್ಯ ಅಭಿವೃದ್ಧಿಯೋಜನೆ, ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಕೆಘಟಕ, ಸಹಕಾರಿ ನೂಲಿನ ಗಿರಣಿಗಳ ಸ್ಥಾಪನೆಗೆ ಅಗತ್ಯ ಸಬ್ಸಿಡಿ ನೀಡಲಾಗುವುದು. ಎ.ವಿ.ಶ್ರೀನಿವಾಸ್‌, ತಾಪಂ ಅಧ್ಯಕ್ಷ

ನೂತನ ಜವಳಿ ನೀತಿಯಿಂದ ಪರಿಶಿಷ್ಟ ಜಾತಿ, ಪಂಗಡ ಜನರು 5 ಕೋಟಿ ವೆಚ್ಚದಲ್ಲಿ ಕೈಗಾರಿಕೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿದ್ದು, 3.50 ಕೋಟಿ ಸಬ್ಸಿಡಿ ದೊರೆಯುವುದರಿಂದ ಆಸಕ್ತರು ಧೈರ್ಯವಾಗಿ ಮುಂದೆ ಬರಬೇಕು.  –ಎಚ್‌.ನಾಗೇಶ್‌, ಅಬಕಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next