Advertisement

ದೌರ್ಜನ್ಯ ತಡೆಗೆ ಪಠ್ಯ”ಕ್ರಮ’

08:35 AM Sep 18, 2017 | Team Udayavani |

ಹೊಸದಿಲ್ಲಿ:ಗುರುಗ್ರಾಮದ ರ್ಯಾನ್‌ ಇಂಟರ್‌ನ್ಯಾಶನಲ್‌ ಶಾಲೆಯ ವಿದ್ಯಾರ್ಥಿ ಪ್ರದ್ಯುಮ್ನ ಸಾವಿನ ಅನಂತರ ದೇಶಾದ್ಯಂತ ಮಕ್ಕಳ ಸುರಕ್ಷತೆ ವಿಚಾರ ಹೆಚ್ಚು ಚರ್ಚೆಯಾಗಿದೆ. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ಕೇಂದ್ರ, ರಾಜ್ಯ ಸರಕಾರಗಳಿಗೆ ಸೂಚನೆ ಕೂಡ ನೀಡಿದೆ. ಈ ನಡುವೆ ಮಕ್ಕಳ ಸುರಕ್ಷತೆ ಮತ್ತು ಜಾಗೃತಿಗಾಗಿ ಎನ್‌ಸಿಇಆರ್‌ಟಿ ಹೊಸ ಆಲೋಚನೆ ಮಾಡಿದೆ.

Advertisement

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದು “ಒಳ್ಳೆಯ ಸ್ಪರ್ಶ’ ಮತ್ತು ಯಾವುದು “ಕೆಟ್ಟ ಸ್ಪರ್ಶ’? ಸ್ಪರ್ಶದ ಹಿಂದಿನ ಉದ್ದೇಶ ತಿಳಿಯುವುದು ಹೇಗೆ? ಲೈಂಗಿಕ ಮತ್ತಿತರ ದೌರ್ಜನ್ಯ ನಡೆದಾಗ ಏನು ಮಾಡಬೇಕು ಎಂಬ ಕುರಿತು ಪಠ್ಯಪುಸ್ತಕಗಳ ಹಿಂಬದಿ ಪುಟದಲ್ಲಿ ಮಾಹಿತಿ ಮುದ್ರಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಮಿತಿ (ಎನ್‌ಸಿಇಆರ್‌ಟಿ) ನಿರ್ಧರಿಸಿದೆ. 

ಏನೆಲ್ಲ  ಮಾಹಿತಿ?: ಶೈಕ್ಷಣಿಕ ವಿಷಯಗಳ ಕುರಿತು ಕೇಂದ್ರ, ರಾಜ್ಯ ಸರಕಾರಗಳಿಗೆ ಸಲಹೆ ನೀಡುವ ಎನ್‌ಸಿಇಆರ್‌ಟಿ, ಮುಂಬರುವ ಶೈಕ್ಷಣಿಕ ವರ್ಷದಿಂದ ತಾನು ಹೊರತರುವ ಎಲ್ಲ ಪಠ್ಯಪುಸ್ತಕಗಳ ಹಿಂದಿನ ಪುಟದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಅಗತ್ಯವಿರುವ ಮಾಹಿತಿ ಇರಲಿದೆ ಎಂದು ಹೇಳಿದೆ. ಸಹಾಯವಾಣಿ ಸಂಖ್ಯೆಗಳು, ಪೋಕೊÕà ಕಾಯ್ದೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ರಾಷ್ಟ್ರೀಯ ಸಮಿತಿ (ಎನ್‌ಸಿಪಿಸಿಆರ್‌) ಬಗೆಗಿನ ಸಂಕ್ಷಿಪ್ತ ವಿವರ ಸಹಿತ ಹಲವು ಉಪಯುಕ್ತ ಮಾಹಿತಿಗಳು ಪುಸ್ತಕದ ಹಿಂದಿನ ಪುಟದಲ್ಲಿರಲಿವೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲಾಣ ಇಲಾಖೆ ಕೋರಿಕೆ ಮೇರೆಗೆ ಈ ಕ್ರಮ ಕೈಗೊಂಡಿರುವುದಾಗಿ ಎನ್‌ಸಿಇಆರ್‌ಟಿ ನಿರ್ದೇಶಕ ಹೃಷಿಕೇಶ್‌ ಸೇನಾಪತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next