Advertisement

“ಪರಾಖ್‌’ಗೆ ಮೌಲ್ಯಮಾಪನ ಹೊಣೆ

12:50 AM Feb 27, 2023 | Team Udayavani |

ಹೊಸದಿಲ್ಲಿ: ಇದೇ ಮೊದಲ ಬಾರಿಗೆ ದೇಶದಲ್ಲಿ ಇರುವ 60 ಸಂಸ್ಥೆಗಳಿಗೆ ಏಕೀಕೃತವಾಗಿ ಮೌಲ್ಯಮಾಪನ ಮಾಡುವ ವ್ಯವಸ್ಥೆಯನ್ನು ದ ಪರ್ಫಾಮೆನ್ಸ್‌ ಅಸೆಸ್‌ಮೆಂಟ್‌, ರಿವ್ಯೂ ಆ್ಯಂಡ್‌ ಅನಾಲಿಸಿಸ್‌ ಆಫ್ ನಾಲೆಡ್ಜ್ ಫಾರ್‌ ಹೋಲಿಸ್ಟಿಕ್‌ ಡೆವಲಪ್‌ಮೆಂಟ್‌ (ಪರಾಖ್‌) ನಡೆಸಿಕೊಡಲಿದೆ.

Advertisement

ಈ ಬಗ್ಗೆ ಶೈಕ್ಷಣಿಕ ಪರೀಕ್ಷಾ ಸೇವೆ (ಇಟಿಎಸ್‌) ಯ ಸಿಇಒ ಅಮಿತ್‌ ಸೇವಕ್‌ ಹೇಳಿದ್ದಾರೆ. ಅದು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಸಂಯೋಜಿತಗೊಂಡ ಸಂಸ್ಥೆಯಾಗಿದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಸಾಧನೆಗಳ ಸಮೀಕ್ಷೆ, ಶಾಲೆಗಳ ಆಧಾರಿತ ಸಮೀಕ್ಷೆ ಮತ್ತು ಮೂರನೆಯದಾಗಿ ಸಾಮರ್ಥ್ಯ ವೃದ್ಧಿ ಕ್ಷೇತ್ರದಲ್ಲಿ ಸಂಸ್ಥೆ ಕೆಲಸ ಮಾಡಲಿದೆ ಎಂದು “ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸೇವಕ್‌ ತಿಳಿಸಿದ್ದಾರೆ. ಮೌಲ್ಯಮಾಪನ ಕೈಗೊಳ್ಳುವ ನಿಟ್ಟಿನಲ್ಲಿ ಮೊದಲ ಹಂತವಾಗಿ ಕೆಲವು ನಿಯಮ ಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next