Advertisement

Udupi: ಎರಡು ತಿಂಗಳು ಕಳೆದರೂ ಪೂರೈಕೆಯಾಗದ ಪಠ್ಯಪುಸ್ತಕ

12:32 AM Aug 11, 2024 | Team Udayavani |

ಉಡುಪಿ: ಪ್ರಸಕ್ತ ಸಾಲಿನ ಶೈಕ್ಷಣಿಕ ತರಗತಿ ಆರಂಭವಾಗಿ 2 ತಿಂಗಳು ಕಳೆದರೂ ಪ್ರಥಮ ಪಿಯುಸಿಯ ವಿಜ್ಞಾನ, ವಾಣಿಜ್ಯ ವಿಷಯದ ಕೆಲವು ಪಠ್ಯ ಪುಸ್ತಕಗಳು ಇನ್ನೂ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ.

Advertisement

ವಿಜ್ಞಾನದ ಬಹುಪಾಲು ಎಲ್ಲ ವಿಷಯಗಳಿಗೂ ಎನ್‌ಸಿಇಆರ್‌ಟಿ ಪಠ್ಯಪುಸ್ತಕವನ್ನು ಪರಿಚಯಿಸಲಾಗಿದೆ. ಆದರೆ ಪಠ್ಯಪುಸ್ತಕ ಸರಿಯಾದ ಸಮಯಕ್ಕೆ ಪೂರೈಕೆ ಆಗದೇ ಇರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನನುಕೂಲವಾಗುತ್ತಿದೆ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ.

ಮನಃಶಾಸ್ತ್ರ, ಕಂಪ್ಯೂಟರ್‌ಸೈನ್ಸ್‌ ಹಾಗೂ ಸ್ಟಾಟಸ್ಟಿಕ್ಸ್‌ ಸಂಬಂಧಿಸಿದ ಪಠ್ಯಪುಸ್ತಕಗಳು ಸಿಕ್ಕಿಲ್ಲ. ಆದಷ್ಟು ಬೇಗ ಪಠ್ಯ ಪುಸ್ತಕ ಪೂರೈಸುವ ವ್ಯವಸ್ಥೆ ಆಗಬೇಕು ಎಂದು ಪ್ರಾಧ್ಯಾಪಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next