Advertisement

NCERT ಪಠ್ಯದಲ್ಲಿ ಹರಪ್ಪ ನಾಗರಿಕತೆಗೆ ಕೊಕ್‌!

12:36 AM Jul 22, 2024 | Team Udayavani |

ಹೊಸದಿಲ್ಲಿ: ಎನ್‌ಸಿಇಆರ್‌ಟಿ 6ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಹಲವು ಅಚ್ಚರಿಯ ಹೊಸ ಸಂಗತಿಗಳನ್ನು ಪ್ರಸ್ತಾವ ಮಾಡಲಾಗಿದೆ. ವಿವಾದಗ್ರಸ್ತ ವಿಷಯಗಳನ್ನು ಕಿತ್ತು ಹಾಕಲಾಗಿದೆ ಇಲ್ಲವೇ ಬದಲಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಹರಪ್ಪ ನಾಗರಿಕತೆಯ ಹೆಸರನ್ನು ಸಿಂಧೂ-ಸರಸ್ವತಿ ನಾಗರಿಕತೆ ಎಂದು ಬದಲಾಯಿಸಲಾಗಿದೆ. ಗ್ರೀನ್‌ವಿಚ್‌ ರೇಖಾಂಶಕ್ಕೂ ಮೊದಲು ಭಾರತ ತನ್ನದೇ ಆದ ರೇಖೆಯನ್ನು ಹೊಂದಿದ್ದು ಇದು ಉಜ್ಜಯಿನಿ ಮೂಲಕ ಹಾದು ಹೋಗಿದ್ದು ಇದಕ್ಕೆ ಮಧ್ಯ ರೇಖಾ ಎಂದು ಕರೆಯಲಾಗುತ್ತಿತ್ತು ಎಂದು ಹೇಳಲಾ ಗಿದೆ. ಪಠ್ಯದಲ್ಲಿ ಭಾರತೀಯ ನಾಗರಿ ಕತೆಯ ಆರಂಭವನ್ನು ಹರಪ್ಪ ನಾಗರಿ ಕತೆಯ ಬದಲಾಗಿ ಸಿಂಧೂ-ಸರಸ್ವತಿ ನಾಗರಿಕತೆ ಎಂದು ಹೆಸರಿಸಲಾಗಿದೆ. ಎಕ್ಸ್‌ಪ್ಲೋರಿಂಗ್‌ ಸೊಸೈಟಿ ಇಂಡಿಯಾ ಆ್ಯಂಡ್‌ ಬಿಯಾಂಡ್‌ ಪಠ್ಯದಲ್ಲಿ ಜಾತಿ ವ್ಯವಸ್ಥೆ, ಅದರಲ್ಲಿನ ಮಹಿಳೆಯರು ಮತ್ತು ಶೂದ್ರರಿಗೆ ಅಧ್ಯಯನಕ್ಕೆ ಅವಕಾಶ ನೀಡದ ಬಗ್ಗೆ ಯಾವುದೇ ಮಾಹಿತಿ ಇಲ್ಲದಂತೆ ವೇದಗಳ ಬಗ್ಗೆ ವಿವರಣೆ ನೀಡಲಾಗಿದೆ. ಡಾ| ಬಿ.ಆರ್‌.ಅಂಬೇಡ್ಕರ್‌ ಅವರು ಜಾತಿ ತಾರತಮ್ಯ ಎದುರಿಸಿದ ವಿಚಾರಕ್ಕೂ ಕೊಕ್‌ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next