Advertisement

ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಿ

05:11 PM Jul 10, 2021 | Team Udayavani |

ಬಾದಾಮಿ: ಜುಲೈ 19ಮತ್ತು 22ರಂದು ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಲೋಪದೋಷಗಳು ಆಗದಂತೆ ಕೊರೊನಾ ಮುಂಜಾಗ್ರತಾ ಕ್ರಮ ಅನುಸರಿಸಿ ಪರೀಕ್ಷೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ (ಪರೀಕ್ಷೆ) ವಿ.ಸುಮಂಗಲಾ ಹೇಳಿದರು.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ಕೆಸ್ವಾನ್‌ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಒಂದು ಕೊಠಡಿಯಲ್ಲಿ 12 ಮಕ್ಕಳಂತೆ 6 ಅಡಿ ಅಂತರದಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆಸಬೇಕು. ಈಗಾಗಲೇ ಮಂಡಳಿಯಿಂದ ಎಲ್ಲ ಜಿಲ್ಲೆಗಳಿಗೆ ಪ್ರಶ್ನೆಪತ್ರಿಕೆ, ಓಎಂಆರ್‌, ಸಿ.ಎನ್‌ಆರ್‌ಗಳನ್ನು ಕಳುಹಿಸಲಾಗಿದೆ. ಪ್ರಶ್ನೆಪತ್ರಿಕೆಗಳು ಸೋರಿಕೆಯಾಗದಂತೆ ಕ್ರಮ ತೆಗೆದುಕೊಳ್ಳುವುದು. ಶಿಕ್ಷಣಾಧಿಕಾರಿಗಳು ಮುಖ್ಯಅಧೀಕ್ಷಕರ ಸಭೆ ಕರೆದು ಪರೀಕ್ಷೆಯ ಬಗ್ಗೆ ಮಾಹಿತಿ ಪುಸ್ತಕದ ಅಂಶಗಳನ್ನು ಓದಿ ಮನನ ಮಾಡಿಕೊಳ್ಳಲು ತಿಳಿಸಬೇಕು.

350 ಮಕ್ಕಳು ದಾಖಲಾಗಿರುವ ಪರೀಕ್ಷಾ ಕೇಂದ್ರಕ್ಕೆ ಒಬ್ಬರನ್ನು ಮುಖ್ಯ ಅಧೀಕ್ಷಕರನ್ನು ನೇಮಿಸುವುದು. 350 ರಿಂದ 550 ಮಕ್ಕಳಿದ್ದಲ್ಲಿ ಹೆಚ್ಚುವರಿ ಅ ಧೀಕ್ಷಕರನ್ನು ನೇಮಿಸುವುದು. ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ, ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸಬೇಕು ಎಂದರು.

ಮಕ್ಕಳು ಪರೀಕ್ಷೆ ಹಾಜರಾಗುವ ದಿನ ಪರೀಕ್ಷೆ ಕೇಂದ್ರದ ಮುಖ್ಯ ದ್ವಾರದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ತಪಾಸಣಾ ಕೌಂಟರ್‌ ಸ್ಥಾಪಿಸುವುದು. ಎಲ್ಲರಿಗೂ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿ ಕೊಠಡಿಯ ಒಳಗಡೆ ಹೋಗುವಂತೆ ಹೇಳುವುದು. ಎಲ್ಲ ಮಕ್ಕಳು ಮಾಸ್ಕ್, ಸ್ಯಾನಿಟೈಸರ್‌ ಬಳಸುವುದು ಎಂದು ತಿಳಿಸಿದರು. ವಿಡಿಯೋ ಸಂವಾದದಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿ ಎಂ.ಪಿ.ಮಾಗಿ, ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ, ಶಿಕ್ಷಣ ಸಂಯೋಜಕ ಹನಮಂತರಾಜು, ಮುಖ್ಯ ಅ ಕ್ಷಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next