Advertisement

ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಟೆಸ್ಟ್‌ ಸರಣಿ ಗೆದ್ದ ವೆಸ್ಟ್‌ ಇಂಡೀಸ್‌

11:09 PM Mar 28, 2022 | Team Udayavani |

ಗ್ರೆನಡಾ: ಪ್ರವಾಸಿ ಇಂಗ್ಲೆಂಡ್‌ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿದ ವೆಸ್ಟ್‌ಇಂಡೀಸ್‌, 3 ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ.”ಬೋಥಂ-ರಿಚರ್ಡ್ಸ್‌ ಟ್ರೋಫಿ’ಯ ಮೇಲೆ ಹಕ್ಕು ಸ್ಥಾಪಿಸಿದೆ.

Advertisement

28 ರನ್ನುಗಳ ಸುಲಭ ಗುರಿ ಪಡೆದ ವೆಸ್ಟ್‌ ಇಂಡೀಸ್‌ ವಿಕೆಟ್‌ ನಷ್ಟವಿಲ್ಲದೆ ಗುರಿ ಮುಟ್ಟಿತು. ಮೊದಲೆರಡು ಟೆಸ್ಟ್‌ ಡ್ರಾಗೊಂಡಿತ್ತು.

ಇಂಗ್ಲೆಂಡ್‌ ಕಳೆದ 50 ವರ್ಷಗಳಲ್ಲಿ ವಿಂಡೀಸ್‌ ನೆಲದಲ್ಲಿ ಟೆಸ್ಟ್‌ ಗೆದ್ದದ್ದು ಒಮ್ಮೆ ಮಾತ್ರ. ಅದು 2003-04ರ ಸರಣಿಯಾಗಿತ್ತು. ಆಂಗ್ಲರ ಗೆಲುವಿನ ಅಂತರ 3-0.

ಸಣ್ಣ ಮೊತ್ತದ ಸೆಣಸಾಟ
ಇದೊಂದು ಸಣ್ಣ ಮೊತ್ತದ ಸೆಣಸಾಟವಾಗಿತ್ತು. ಮೊದಲ ಇನ್ನಿಂಗ್ಸ್‌ ನಲ್ಲಿ ಇಂಗ್ಲೆಂಡ್‌ ಗಳಿಸಿದ್ದು 204 ರನ್‌ ಮಾತ್ರ. ಇದರಲ್ಲಿ ಅಂತಿಮ ಆಟಗಾರ ಶಕೀಬ್‌ ಮಹಮೂದ್‌ ಅವರದೇ ಸರ್ವಾಧಿಕ ಗಳಿಕೆಯಾಗಿತ್ತು ಎಂಬುದು ಉಲ್ಲೇಖನೀಯ (49). ಜವಾಬಿತ್ತ ವೆಸ್ಟ್‌ ಇಂಡೀಸ್‌ 297 ರನ್‌ ಮಾಡಿತು. 8ನೇ ಕ್ರಮಾಂಕದಲ್ಲಿ ಆಡಲಿಳಿದ ವಿಕೆಟ್‌ ಕೀಪರ್‌ ಜೋಶುವ ಡ ಸಿಲ್ವ ಚೊಚ್ಚಲ ಶತಕ ಸಂಭ್ರಮ ಆಚರಿಸಿದರು (ಅಜೇಯ 100).

ದ್ವಿತೀಯ ಸರದಿಯಲ್ಲಿ ಇಂಗ್ಲೆಂಡ್‌ ಬ್ಯಾಟಿಂಗ್‌ ಇನ್ನಷ್ಟು ಚಿಂತಾಜನಕ ವಾಗಿತ್ತು. ಕೈಲ್‌ ಮೇಯರ್ ಬೌಲಿಂಗ್‌ ದಾಳಿಗೆ (18ಕ್ಕೆ 5) ತತ್ತರಿಸಿದ ರೂಟ್‌ ಪಡೆ 120ಕ್ಕೆ ಕುಸಿಯಿತು.

Advertisement

ಇದನ್ನೂ ಓದಿ:ಏಶ್ಯನ್‌ ಗೇಮ್ಸ್‌ ಆರ್ಚರಿ: ದೀಪಿಕಾ ಇಲ್ಲದ ವನಿತಾ ತಂಡ ಆಯ್ಕೆ

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-204 ಮತ್ತು 120. ವೆಸ್ಟ್‌ ಇಂಡೀಸ್‌-297 ಮತ್ತು ವಿಕೆಟ್‌ ನಷ್ಟವಿಲ್ಲದೆ 28. ಪಂದ್ಯಶ್ರೇಷ್ಠ: ಜೋಶುವ ಡ ಸಿಲ್ವ. ಸರಣಿಶ್ರೇಷ್ಠ: ಕ್ರೆಗ್‌ ಬ್ರಾತ್‌ವೇಟ್‌.

Advertisement

Udayavani is now on Telegram. Click here to join our channel and stay updated with the latest news.

Next