Advertisement
ಇಂಗ್ಲೆಂಡ್ ಸರದಿಯನ್ನು ಆಧರಿಸಿ ನಿಂತವರು ಜೋ ರೂಟ್ ಮತ್ತು ಹ್ಯಾರಿ ಬ್ರೂಕ್. ಇಬ್ಬರೂ ಪ್ರಚಂಡ ಶತಕ ಬಾರಿಸಿ ಕಿವೀಸ್ ಬೌಲರ್‌ಗಳಿಗೆ ಬೆವರಿಳಿಸಿದರು. ಮುರಿಯದ 4ನೇ ವಿಕೆಟಿಗೆ 294 ರನ್ ಪೇರಿಸಿದರು. ಬಿರುಸಿನ ಆಟವಾಡಿದ ಬ್ರೂಕ್ಸ್ 184 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದಾರೆ. ರೂಟ್ 101 ರನ್ ಗಳಿಸಿ ಆಡುತ್ತಿದ್ದಾರೆ.
Related Articles
Advertisement
ಜಾಕ್ ಕ್ರಾಲಿ (2), ಬೆನ್ ಡಕೆಟ್ (9) ಮತ್ತು ಓಲೀ ಪೋಪ್ (10) ಬೇಗನೇ ಪೆವಿಲಿಯನ್ ಸೇರಿಕೊಂಡರು. 2 ವಿಕೆಟ್ ಮ್ಯಾಟ್ ಹೆನ್ರಿ ಪಡೆದರೆ, ಇನ್ನೊಂದು ನಾಯಕ ಟಿಮ್ ಸೌಥಿ ಪಾಲಾಯಿತು.
ಇದು ಸರಣಿಯ ಅಂತಿಮ ಟೆಸ್ಟ್. ಮೌಂಟ್ ಮೌಂಗನಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 267 ರನ್ನುಗಳ ಜಯಭೇರಿ ಮೊಳಗಿಸಿತ್ತು. ನ್ಯೂಜಿಲ್ಯಾಂಡ್ ಈಗ ಸರಣಿ ಸಮಬಲದ ಒತ್ತಡದಲ್ಲಿದೆ.
ತಂದೆಯ ಗರಿಷ್ಠ ಗಳಿಕೆಯತ್ತ ಗುರಿಮೊದಲ ಟೆಸ್ಟ್ ದ್ವಿಶತಕದ ಹಾದಿಯಲ್ಲಿರುವ ಹ್ಯಾರಿ ಬ್ರೂಕ್, ತನ್ನ ತಂದೆಯ ಸರ್ವಾಧಿಕ ಮೊತ್ತದತ್ತ ಗಮನ ನೆಟ್ಟಿರುವುದಾಗಿ ಹೇಳಿದ್ದಾರೆ. “ನನ್ನ ತಂದೆ ಡೇವಿಡ್ ಬ್ರೂಕ್, ಬರ್ಲಿ ಕ್ಲಬ್ ಪರ ಆಡುತ್ತಿರುವಾಗ ಗರಿಷ್ಠ 210 ರನ್ ಹೊಡೆದಿದ್ದರು. ಈ ಮೊತ್ತವನ್ನು ತಲುಪಬೇಕೆಂಬುದು ನನ್ನ ಗುರಿ. ಆದರೆ ದ್ವಿತೀಯ ದಿನದ ಮೊದಲ ಎಸೆತವನ್ನು ನಾನೇ ಎದುರಿ ಸಬೇಕಿದೆ ಎಂಬುದಷ್ಟೇ ಯೋಚಿಸ ಬೇಕಾದ ಸಂಗತಿ’ ಎಂದು ದ್ವಿಶತಕಕ್ಕೆ ಕೇವಲ 16 ರನ್ ದೂರಸಲ್ಲಿರುವ ಹ್ಯಾರಿ ಬ್ರೂಕ್ ಹೇಳಿದರು. “ಕಳೆದ ಪಾಕಿಸ್ಥಾನ ಪ್ರವಾಸದಲ್ಲೂ ನಾನು ಶತಕ ಬಾರಿಸಿದ್ದೆ. ಆದರೆ ಇಂದು ಬಾರಿಸಿದ ಶತಕ ನನ್ನ ಪಾಲಿಗೆ ಹೆಚ್ಚು ಮಹತ್ವದ್ದಾಗಿದೆ. ಅಲ್ಲಿ ಫ್ಲ್ಯಾಟ್ ಪಿಚ್ ಮೇಲೆ ಆಡಿದ್ದೆ. ಇಲ್ಲಿ 21ಕ್ಕೆ 3 ವಿಕೆಟ್ ಉರುಳಿದ ಬಳಿಕ ಬ್ಯಾಟಿಂಗ್‌ಗೆ ತುಸು ಕಠಿನವಾದ ಪಿಚ್ ಮೇಲೆ ಆಡಿ ಶತಕ ಬಾರಿಸಿದ್ದೇನೆ’ ಎಂದರು.