ಕ್ಯಾನ್ಬೆರಾ: ಭಾರತ ಮತ್ತು ಆಸ್ಟ್ರೇಲಿಯಾ ಪ್ರೈಮಿನಿಸ್ಟರ್ 11 ನಡುವಿನ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ಮೊದಲನೇ ದಿನದಾಟ ಮಳೆಯ ಕಾರಣ ರದ್ದಾಗಿದೆ. ಟಾಸ್ ಕೂಡ ನಡೆಯದೆ ಮೊದಲನೇ ದಿನದಾಟ ರದ್ದಾಗಿದ್ದು, ಭಾನುವಾರ 2ನೇ ದಿನ ಮಳೆ ಅವಕಾಶ ನೀಡಿದರೆ ಇತ್ತಂಡಗಳು 50 ಓವರ್‌ಗಳ ಪಂದ್ಯ ಆಡಲಿವೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ, ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಆರಂಭಿಕ ಪಂದ್ಯವನ್ನು 295 ರನ್‌ಗಳಿಂದ ಗೆದ್ದಿತ್ತು. 2ನೇ ಟೆಸ್ಟ್ ಆಗಿ ಅಡಿಲೇಡ್‌ನಲ್ಲಿ ಡಿ.6ರಿಂದ ಹಗಲು-ರಾತ್ರಿ ಪಿಂಕ್ ಬಾಲ್ ಪಂದ್ಯ ನಡೆಯಲಿದೆ. ಇದಕ್ಕಾಗೇ ಭಾರತ-ಆಸೀಸ್ ಕ್ಯಾನ್ಬೆರಾದಲ್ಲಿ ಪಿಂಕ್ ಬಾಲ್ ಅಭ್ಯಾಸ ಪಂದ್ಯ ಆಡುತ್ತಿದೆ.
ಆ್ಯಷಸ್‌ಗಿಂತ ಭಾರತ-ಆಸ್ಟ್ರೇಲಿಯಾ ಸರಣಿ ದೊಡ್ಡದು: ಆಸೀಸ್ ಪ್ರಧಾನಿ ಅಲ್ಬನೀಸ್
ಶನಿವಾರ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ಸಮಯ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದ ಜೊತೆಗೆ ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸ್ ಫೋಟೋ ತೆಗೆಸಿಕೊಂಡರು. ಈ ವೇಳೆ ಅವರು ಮಾತನಾಡಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆ್ಯಷಸ್ ಸರಣಿಗಿಂತ ಬಾರ್ಡರ್-ಗಾವಸ್ಕರ್‌ನಲ್ಲಿ ಭಾರತ-ಆಸೀಸ್ ಮುಖಾಮುಖೀ ಹೆಚ್ಚು ಕುತೂಹಲಕಾರಿ ಎಂದರು. 1996/97ರಲ್ಲಿ ಆರಂಭವಾಗಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ 10 ಬಾರಿ, ಆಸ್ಟ್ರೇಲಿಯಾ 5 ಬಾರಿ ಗೆದ್ದಿವೆ. 1 ಬಾರಿ ಸರಣಿ ಡ್ರಾ ಎನಿಸಿದೆ.