ನೆಲಮಂಗಲ: ಕೋವಿಡ್ ಸಂಕಷ್ಟದಲ್ಲಿ ಎಸ್‌ಎಸ್‌ಎ ಲ್‌ಸಿ ವಿದ್ಯಾರ್ಥಿಗಳಿಗೆ ನೀಡಿರುವ ಬಹು ಆಯ್ಕೆ ಪ್ರಶ್ನೆ ಪತ್ರಿಕೆಯ ಮಾದರಿಯಲ್ಲಿಯೇ ಮುಂದಿನದಿನಗಳಲ್ಲಿಯೂ ಪರೀಕ್ಷೆಗಳಲ್ಲಿ ಕಾರ್ಯರೂಪಕ್ಕೆ ತರ ಬೇಕು ಎಂದು ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಸಲಹೆ ನೀಡಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪರೀಕ್ಷಾ ಕೇಂದ್ರಗಳಿಗೆ ಭೇಟಿನೀಡಿ ಪರಿಶೀಲಿಸಿ ಮಾತನಾಡಿ, ತಾಲೂಕಿನಲ್ಲಿ 24ಕೇಂದ್ರಗಳಲ್ಲಿ ಮುಂಜಾಗ್ರತೆ ಕ್ರಮವಹಿಸಿ ಸುರಕ್ಷತೆಯಿಂದ ಎಸ್‌ಎಸ್‌ಎಲ್‌ಸಿ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ತಾಲೂಕಿನಲ್ಲಿ 3 ಸಾವಿರ ವಿದ್ಯಾರ್ಥಿಗಳುಪರೀಕ್ಷೆ ಬರೆದಿದ್ದು, ಮಕ್ಕಳಿಗೆ ಮಾಸ್ಕ್, ನೀರು,ಬಿಸ್ಕೇಟ್ ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿನಲ್ಲಿಯಶಸ್ವಿಯಾಗಿ ಪರೀಕ್ಷೆ ನಡೆಯುತ್ತಿದೆ. ಈ ಬಾರಿ ತಯಾರಿಸಿರುವಪ್ರಶ್ನೆಪತ್ರಿಕೆಯಮಾದರಿಯಲ್ಲಿಯೇಮುಂದಿನ ದಿನಗಳಲ್ಲಿ ಪರೀಕ್ಷೆಗಳಿದ್ದರೆ ವಿದ್ಯಾರ್ಥಿಗಳು ಪೂರ್ಣ ಪುಸ್ತಕ ಓದುವ ಅನಿವಾರ್ಯತೆ ಬರುತ್ತದೆ. ಅದರಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿಯಾಗುವ ಜತೆ ಸಿಇಟಿ, ಕೆಎಎಸ್ ನಂತರ ಪರೀಕಗಳೆÒ ತಯಾರಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
2871 ವಿದ್ಯಾರ್ಥಿಗಳು ಹಾಜರಿ: ತಾಲೂಕಿನ 24 ಪರೀಕ್ಷಾ ಕೇಂದ್ರಗಳಲ್ಲಿ 3044 ವಿದ್ಯಾರ್ಥಿಗಳುನೋಂದಣಿ ಪಡೆದಿದ್ದು, ಹೊಸದಾಗಿ ಪರೀಕ್ಷೆ ಬರೆಯುವ 2884 ವಿದ್ಯಾರ್ಥಿಗಳಲ್ಲಿ 2871 ವಿದ್ಯಾರ್ಥಿಗಳು ಹಾಜರಾಗಿದ್ದರು. 13 ವಿದ್ಯಾರ್ಥಿಗಳು ಗೈರಾಗಿದ್ದರು. ಪುನರಾವರ್ತಿತ 160 ವಿದ್ಯಾರ್ಥಿಗಳಲ್ಲಿ3 ಮಂದಿ ಗೈರಾಗಿದ್ದರು. ಒಟ್ಟಾರೆ 3029 ವಿದ್ಯಾರ್ಥಿಗಳು ಮೊದಲ ಹಂತದಲ್ಲಿ ಗಣಿತ, ವಿಜ್ಞಾನ, ಸಮಾಜವಿಜ್ಞಾನ ಪರೀಕ್ಷೆ ಬರೆದಿದ್ದಾರೆ. 4 ವಿದ್ಯಾರ್ಥಿಗಳುಅನಾರೋಗ್ಯ ಕಾರಣಕ್ಕೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ.
ಕಸಿದು ಬಿದ್ದ ವಿದ್ಯಾರ್ಥಿ: ತ್ಯಾಮಗೊಂಡ್ಲು ಭಾಗದಿಂದ ನಗರದ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿ ಪರೀಕ್ಷಾ ಕೇಂದ್ರದ ವಿಳಾಸ ತಿಳಿಯದೇ ಪ್ರಿಯದರ್ಶಿನಿ ಶಾಲೆ ಬಳಿ ಹೋಗಿದ್ದಾನೆ. ನಂತರ ಆತನನ್ನು ಗುರುತಿನ ಚೀಟಿಯಿದ್ದ ವಿನಾಯಕ ವಿದ್ಯಾನಿಕೇತನಪರೀಕ್ಷೆ ಕೇಂದ್ರಕ್ಕೆ ಕರೆತಂದಿದ್ದಾರೆ. ಆತಂಕಕೊಂಡವಿದ್ಯಾರ್ಥಿ ಶಾಲೆ ಆವರಣದಲ್ಲಿ ಕುಸಿದು ಬಿದ್ದಿದ್ದಾನೆ.ತಕ್ಷಣ ಬಿಇಒ ರಮೇಶ್ ವೈದ್ಯರ ತಂಡವನ್ನು ಕರೆಸಿ, ಪರೀಕ್ಷೆ ಹಾಗೂ ಧೈರ್ಯ ತುಂಬುವ ಮೂಲಕ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟರು.
ಆರೋಗ್ಯ ತಪಾಸಣೆ: 24 ಕೇಂದ್ರಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ಶಿಕಕ Ò ರು, ಕೇಂದ್ರದಲ್ಲಿ ನಿಯೋಜನೆಗೊಂಡ ಸಿಬಂದಿº ಪ್ರತಿ ಮಕ್ಕಳಿಗೂಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ಯಾನ್ ಮೂಲಕ ತಪಾಸಣೆ ಮಾಡಿದರೆ, ಸೌಟ್ಸ್ ಮತ್ತುಗೈಡ್ಸ್ ತಾಲೂಕು ಘಟಕದಿಂದ ಮಾಸ್ಕ್ ವಿತರಿಸಿದರು.
ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕಿ ಪ್ರೇಮ, ಬಿಇಒ ರಮೇಶ್ ಮತ್ತು ತಾಲೂಕು ಅಧಿಕಾರಿಗಳು ಹಾಜರಿದ್ದರು.