Advertisement
ಈ ಗೆಲುವಿನಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿ 1-1 ಸಮಬಲಗೊಂಡಿದೆ. ಸರಣಿ ನಿರ್ಣಾಯಕ ಪಂದ್ಯ ಗುರುವಾರದಿಂದ ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಮತ್ತು 47 ರನ್ನುಗಳಿಂದ ಗೆಲುವು ಸಾಧಿಸಿತ್ತು. ಎಡಗೈ ಸ್ಪಿನ್ನರ್ ನೋಮನ್ ಅಲಿ ಮತ್ತು ಸಜಿದ್ ಖಾನ್ ಇಂಗ್ಲೆಂಡಿನ ಎಲ್ಲ 20 ವಿಕೆಟ್‌ಗಳನ್ನು ಹಾರಿಸಿ ತಂಡದ ಭರ್ಜರಿ ಗೆಲುವಿಗೆ ಮಹತ್ತರ ಕೊಡುಗೆ ಸಲ್ಲಿಸಿದರು.
Related Articles
ಸ್ಪಿನ್ನರ್‌ಗಳಾದ ಸಜಿದ್ ಖಾನ್ ಮತ್ತು ನೋಮನ್ ಅಲಿ ಅದ್ಭುತ ದಾಳಿ ಸಂಘಟಿಸಿ ಇಂಗ್ಲೆಂಡಿನ ಎಲ್ಲ 20 ವಿಕೆಟ್ ಹಾರಿಸಿರುವುದು 1972ರ ಬಳಿಕ ಮೊದಲ ನಿದರ್ಶನವಾಗಿದೆ. ಸಜಿದ್ ಖಾನ್ 111ಕ್ಕೆ 7 ಮತ್ತು 93ಕ್ಕೆ 2 ಹಾಗೂ ನೋಮನ್ ಅಲಿ 101ಕ್ಕೆ 3 ಮತ್ತು 46ಕ್ಕೆ 8 ವಿಕೆಟ್ ಹಾರಿಸಿ ಗಮನ ಸೆಳೆದಿದ್ದಾರೆ. 1972ರಲ್ಲಿ ಇಂಗ್ಲೆಂಡ್ ವಿರುದ್ದವೇ ಲಾರ್ಡ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯದ ಡೆನಿಸ್ ಲಿಲ್ಲಿ ಮತ್ತು ಬಾಬ್ ಮ್ಯಾಸ್ಸೀ ಇಂಗ್ಲೆಂಡಿನ ಎಲ್ಲ 20 ವಿಕೆಟ್ ಕಿತ್ತು ತಂಡಕ್ಕೆ ಜಯ ತಂದುಕೊಟ್ಟಿದ್ದರು. ಟೆಸ್ಟ್‌ನಲ್ಲಿ ಇಬ್ಬರು ಬೌಲರ್‌ಗಳು ಎಲ್ಲ 20 ವಿಕೆಟ್ ಕಿತ್ತಿರುವುದು ಇದು ಏಳನೇ ಸಲವಾಗಿದೆ.
Advertisement
ಸಂಕ್ಷಿಪ್ತ ಸ್ಕೋರು: ಪಾಕಿಸ್ಥಾನ 366 ಮತ್ತು 221; ಇಂಗ್ಲೆಂಡ್ 291 ಮತ್ತು 144 (ಬೆನ್ ಸ್ಟೋಕ್ಸ್ 37, ನೋಮನ್ ಅಲಿ 46ಕ್ಕೆ 8, ಸಜಿದ್ ಖಾನ್ 93ಕ್ಕೆ 2).