Advertisement

Rishabh Pant: ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌, ಟಾಪ್‌ ಟೆನ್‌ಗೆ ಮರಳಿದ ರಿಷಭ್‌ ಪಂತ್‌

11:18 PM Sep 25, 2024 | Team Udayavani |

ದುಬಾೖ: ಬಾಂಗ್ಲಾದೇಶ ವಿರುದ್ಧದ “ಕಮ್‌ ಬ್ಯಾಕ್‌’ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿದ ರಿಷಭ್‌ ಪಂತ್‌, ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ ಯಾದಿಯಲ್ಲಿ ಮರಳಿ ಟಾಪ್‌-10 ಯಾದಿಯನ್ನು ಅಲಂಕರಿಸಿದ್ದಾರೆ. ಅವರೀಗ 731 ಅಂಕಗಳೊಂದಿಗೆ 6ನೇ ಸ್ಥಾನಿಯಾಗಿದ್ದಾರೆ.

Advertisement

ಚೆನ್ನೈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಹೊಡೆದ ಯಶಸ್ವಿ ಜೈಸ್ವಾಲ್‌ (751) 5ನೇ ಸ್ಥಾನಕ್ಕೆ ಏರಿದ್ದಾರೆ. ಆದರೆ ನಾಯಕ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ಅವರು 5 ಸ್ಥಾನಗಳ ಕುಸಿತ ಕಂಡಿದ್ದಾರೆ. ಇಬ್ಬರೂ ಚೆನ್ನೈಯಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದರು. ರೋಹಿತ್‌ ಅವರೇನೋ ಟಾಪ್‌-10 ಯಾದಿಯಲ್ಲಿ ಉಳಿದಿದ್ದಾರೆ (716 ಅಂಕ, 10ನೇ ಸ್ಥಾನ). ಆದರೆ ವಿರಾಟ್‌ ಕೊಹ್ಲಿ 12ನೇ ಸ್ಥಾನಕ್ಕೆ ಇಳಿದಿದ್ದಾರೆ (709).

ಜೋ ರೂಟ್‌ (899), ಕೇನ್‌ ವಿಲಿಯಮ್ಸನ್‌ (852) ಮತ್ತು ಡ್ಯಾರಿಲ್‌ ಮಿಚೆಲ್‌ (760) ಮೊದಲ 3 ಸ್ಥಾನ ಕಾಯ್ದುಕೊಂಡಿದ್ದಾರೆ.

ಅಶ್ವಿ‌ನ್‌ ನಂ.1 ಸ್ಥಾನ ಗಟ್ಟಿ
ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಆರ್‌. ಅಶ್ವಿ‌ನ್‌ ಅವರ ಅಗ್ರಸ್ಥಾನ ಗಟ್ಟಿಯಾಗಿದೆ. ಚೆನ್ನೈ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಹಾರಿಸಿದ ಅವರು 871 ಅಂಕ ಹೊಂದಿದ್ದಾರೆ. ಜಸ್‌ಪ್ರೀತ್‌ ಬುಮ್ರಾ ಮೂರರಿಂದ 2ನೇ ಸ್ಥಾನಕ್ಕೆ ಏರಿದ್ದಾರೆ (854). ಜೋಶ್‌ ಹೇಝಲ್‌ವುಡ್‌ ಒಂದು ಸ್ಥಾನ ಕೆಳಗಿಳಿದರು (3).

ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಅಮೋಘ ಪ್ರಗತಿ ಸಾಧಿಸಿದವರೆಂದರೆ ಶ್ರೀಲಂಕಾದ ಪ್ರಭಾತ್‌ ಜಯಸೂರ್ಯ. ಅವರದು 5 ಸ್ಥಾನಗಳ ಜಿಗಿತ. ನ್ಯೂಜಿಲ್ಯಾಂಡ್‌ ಎದುರಿನ ಗಾಲೆ ಟೆಸ್ಟ್‌ ಪಂದ್ಯದಲ್ಲಿ 9 ವಿಕೆಟ್‌ ಉಡಾಯಿಸುವ ಮೂಲಕ ಅವರು 8ನೇ ಸ್ಥಾನಕ್ಕೆ ಏರಿದರು (743). ರವೀಂದ್ರ ಜಡೇಜ ಒಂದು ಸ್ಥಾನದ ಪ್ರಗತಿ ಸಾಧಿಸಿ ಆರಕ್ಕೇರಿದರು (804).

Advertisement

ಟಾಪ್‌-10 ಟೆಸ್ಟ್‌ ಬ್ಯಾಟರ್
1. ಜೋ ರೂಟ್‌ 899
2. ಕೇನ್‌ ವಿಲಿಯಮ್ಸನ್‌ 852
3. ಡ್ಯಾರಿಲ್‌ ಮಿಚೆಲ್‌ 760
4. ಸ್ಟೀವನ್‌ ಸ್ಮಿತ್‌ 757
5. ಯಶಸ್ವಿ ಜೈಸ್ವಾಲ್‌ 751
6. ರಿಷಭ್‌ ಪಂತ್‌ 731
7. ಉಸ್ಮಾನ್‌ ಖ್ವಾಜಾ 728
8. ಮೊಹಮ್ಮದ್‌ ರಿಜ್ವಾನ್‌ 720
9. ಮಾರ್ನಸ್‌ ಲಬುಶೇನ್‌ 720
10. ರೋಹಿತ್‌ ಶರ್ಮ 716

ಟಾಪ್‌-10 ಟೆಸ್ಟ್‌ ಬೌಲರ್
1. ಆರ್‌. ಅಶ್ವಿ‌ನ್‌ 871
2. ಜಸ್‌ಪ್ರೀತ್‌ ಬುಮ್ರಾ 854
3. ಜೋಶ್‌ ಹೇಝಲ್‌ವುಡ್‌ 847
4. ಪ್ಯಾಟ್‌ ಕಮಿನ್ಸ್‌ 820
5. ಕಾಗಿಸೊ ರಬಾಡ 820
6. ರವೀಂದ್ರ ಜಡೇಜ 804
7. ನಥನ್‌ ಲಿಯಾನ್‌ 801
8. ಪ್ರಭಾತ್‌ ಜಯಸೂರ್ಯ 743
9. ಕೈಲ್‌ ಜೇಮಿಸನ್‌ 721
10. ಶಾಹೀನ್‌ ಶಾ ಅಫ್ರಿದಿ 709

Advertisement

Udayavani is now on Telegram. Click here to join our channel and stay updated with the latest news.

Next