Advertisement

Test; ಅಫ್ಘಾನಿಸ್ಥಾನಕ್ಕೆ ಒಲಿಯಿತು 1-0 ಸರಣಿ

11:40 PM Jan 06, 2025 | Team Udayavani |

ಬುಲವಾಯೋ: ಜಿಂಬಾಬ್ವೆ ಎದುರಿನ ದ್ವಿತೀಯ ಟೆಸ್ಟ್‌ ಪಂದ್ಯವನ್ನು 72 ರನ್ನುಗಳಿಂದ ಗೆದ್ದ ಅಫ್ಘಾನಿಸ್ಥಾನ ಸರಣಿ ಗೆಲುವಿನ ಸಂಭ್ರಮವನ್ನಾಚರಿಸಿದೆ. 2 ಪಂದ್ಯಗಳ ಈ ಸರಣಿಯನ್ನು ಅಫ್ಘಾನ್‌ 1-0 ಅಂತರದಿಂದ ತನ್ನದಾಗಿಸಿಕೊಂಡಿತು.

Advertisement

ಗೆಲುವಿಗೆ 278 ರನ್ನುಗಳ ಗುರಿ ಪಡೆದಿದ್ದ ಜಿಂಬಾಬ್ವೆ 4ನೇ ದಿನದ ಅಂತ್ಯಕ್ಕೆ 8 ವಿಕೆಟ್‌ ಕಳೆದುಕೊಂಡು 205 ರನ್‌ ಗಳಿಸಿತ್ತು. ಸೋಮವಾರ ಇದೇ ಮೊತ್ತಕ್ಕೆ ಆಲೌಟ್‌ ಆಯಿತು.

ಇದರೊಂದಿಗೆ ಜಿಂಬಾಬ್ವೆ ಎದುರಿನ ಪ್ರಸಕ್ತ ಪ್ರವಾಸದಲ್ಲಿ ಆಡಲಾದ ಎಲ್ಲ 3 ಸರಣಿಗಳನ್ನೂ ಅಫ್ಘಾನಿಸ್ಥಾನ ಗೆದ್ದಂತಾಯಿತು. ಟಿ20 ಸರಣಿಯನ್ನು 2-1ರಿಂದ, ಏಕದಿನ ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿತ್ತು. ಬೃಹತ್‌ ಮೊತ್ತದ ಮೊದಲ ಟೆಸ್ಟ್‌ ಪಂದ್ಯ ಡ್ರಾಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next