ನ್ಯೂಯಾರ್ಕ್: ಭಾರತೀಯ ಮೂಲದ ವೈಭನ್ ತನೇಜಾ ಅವರನ್ನು ಅಮೆರಿಕ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಎಲೆಕ್ಟ್ರಿಕ್ ಕಾರು ಉತ್ಪಾದಕ ಕಂಪನಿ ಟೆಸ್ಲಾದ ನೂತನ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಿಸಲಾಗಿದೆ. \
ಹಿಂದಿನ ಹಣಕಾಸು ಮುಖ್ಯಸ್ಥ ಜಕಾರಿ ಕಿರ್ಖೋರ್ನ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರವನ್ನು ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಜಗತ್ತಿನ ಪ್ರಮುಖ ಕಂಪನಿಗಳಲ್ಲಿ ಭಾರತೀಯ ಮೂಲದವರು ಸಿಇಒಗಳಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಜಕಾರಿ ಕಿರ್ಖೋರ್ನ್ ಅವರು ಟೆಸ್ಲಾ ಕಂಪೆನಿಯಲ್ಲಿ ಸುಮಾರು ಹದಿಮೂರು ವರ್ಷಗಳ ಕಾಲ ಕರ್ತವ್ಯವನ್ನು ನಿರ್ವಹಿಸಿದ್ದು ತಮ್ಮ ಹುದ್ದೆಯಿಂದ ಕೆಳಗಿಳಿಯಲು ಕಾರಣವೇನೆಂದು ತಿಳಿಯಪಡಿಸಿಲ್ಲ.
ತನ್ನ ಹುದ್ದೆಯಿಂದ ನಿರ್ಗಮಿಸುವುದಾಗಿ ಜಕಾರಿ ಕಿರ್ಖೋರ್ನ್ ಅವರು ಟ್ವೀಟ್ ಮಾಡಿದ್ದು ಜೊತೆಗೆ ತನ್ನ ಹದಿಮೂರು ವರ್ಷದ ಕೆಲಸದ ಅನುಭವವನ್ನು ಹಂಚಿಕೊಂಡಿದ್ದಾರೆ. ಕಂಪೆನಿ ತನಗೆ ಹೊಸ ಅನುಭವವನ್ನು ನೀಡಿದೆ ಅಲ್ಲದೆ ಕಂಪೆನಿಯ ಸಿಬ್ಬಂದಿಗಳಿಂದ ಕೂಡಾ ಉತ್ತಮ ಸ್ಪಂದನೆ ಸಿಕ್ಕಿದ್ದು ಅದಕ್ಕಾಗಿ ಉದ್ಯೋಗಿಗಗಳಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Mangaluru ದೂರುದಾರರಿಗೆ ಪೊಲೀಸ್ ಕಮಿಷನರ್ ಕಚೇರಿಯಿಂದ ಕರೆ!