Advertisement

ಪೊಲೀಸ್‌ ಹತ್ಯೆಗೆ ತಕ್ಷಣ ಪ್ರತೀಕಾರ;ಕುಲ್ಗಾಂವ್‌ನಲ್ಲಿ 3 ಉಗ್ರರ ಹತ್ಯೆ

09:31 AM Jul 22, 2018 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂವ್‌ ಜಿಲ್ಲೆಯ ಖುದ್ವಾನಿಯ ವಾನಿ ಮೊಹಲ್ಲಾ  ಎಂಬಲ್ಲಿ  ಭದ್ರತಾ ಪಡೆಗಳು ಭಾನುವಾರ ಭಾರೀ ಗುಂಡಿನ ಚಕಮಕಿ ನಡೆಸಿ ಮೂವರು ಉಗ್ರರನ್ನು ಹತ್ಯೆ ಗೈಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಹತ್ಯೆಗೀಡಾದ ಉಗ್ರರು ಸಲೀಮ್‌ ಶಾ ಎಂಬ ಪೊಲೀಸ್‌ ಕಾನ್‌ಸ್ಟೆಬಲ್‌ರ ನ್ನು   ಅಪಹರಿಸಿ  ಶನಿವಾರ ಹತ್ಯೆಗೈದಿದ್ದರು.  ಶಾ ಅವರು ರಜೆಯ ನಿಮಿತ್ತ ಮನೆಗೆ ಬಂದಿದ್ದಾಗ, ಶುಕ್ರವಾರ ರಾತ್ರಿ ಅವರನ್ನು ಉಗ್ರರು ಅಪಹರಿಸಿದ್ದರು.

ಪೊಲೀಸ್‌ ಹತ್ಯೆ ಬಳಿಕ ಉಗ್ರರ ಸುಳಿವಿನ ಹಿನ್ನಲೆಯಲ್ಲಿ ಬಿಎಸ್‌ಎಫ್,ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆಗಳು ಭಾರೀ ಕಾರ್ಯಾಚರಣೆಗಿಳಿದು ತಕ್ಷಣದಲ್ಲಿ ಮೂವರನ್ನು ಹತ್ಯೆಗೈದಿದ್ದಾರೆ. ಉಗ್ರರ ಬಳಿಯಿಂದ ಮೂರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಕಳೆದ ತಿಂಗಳಷ್ಟೇ ಉಗ್ರರು ಯೋಧ ಔರಂಗಬೇಜ್‌ ರನ್ನು ಅಪಹರಿಸಿ, ಹತ್ಯೆಗೈದಿದ್ದ ಘಟನೆ ಶೋಪಿಯಾನ್‌ ನಲ್ಲಿ ನಡೆದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next