Advertisement

ಕ್ಯಾಶ್‌ ವ್ಯಾನ್‌ ಲೂಟಿ: 4 ಪೊಲೀಸರು, 2 ಬ್ಯಾಂಕ್‌ ಅಧಿಕಾರಿಗಳ ಹತ್ಯೆ

07:22 PM May 01, 2017 | Team Udayavani |

ಶ್ರೀನಗರ : ಕಾಶ್ಮೀರದ ಕುಲಗಾಂವ್‌ ಜಿಲ್ಲೆಯಲ್ಲಿ ಬ್ಯಾಂಕ್‌ ಒಂದರ ಕ್ಯಾಶ್‌ ವ್ಯಾನ್‌ ಲೂಟಿ ಮಾಡಿದ ಉಗ್ರರು ನಾಲ್ವರು ಪೊಲೀಸರು ಹಾಗೂ ಇಬ್ಬರು ಬ್ಯಾಂಕ್‌ ಅಧಿಕಾರಿಗಳನ್ನು ಗುಂಡಿಕ್ಕಿ ಸಾಯಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಬ್ಯಾಂಕಿನ ಕ್ಯಾಶ್‌ ವ್ಯಾನಿನಲ್ಲಿದ್ದ ನಾಲ್ವರು ಪೊಲೀಸರು ಹಾಗೂ ಇಬ್ಬರು ಬ್ಯಾಂಕ್‌ ಅಧಿಕಾರಿಗಳನ್ನು ವಾಹನದಿಂದ ಹೊರಗೆಳೆದು ಅವರನ್ನು ಗುಂಡಿಕ್ಕಿ ಕೊಂದರೆಂದು ದಕ್ಷಿಣ ಕಾಶ್ಮೀರ ಡಿಐಜಿ ಎಸ್‌ ಪಿ ಪಾಣಿ ಸುದ್ದಿಗಾರರಿಗೆ ತಿಳಿಸಿದರು. 

ಘಟನೆಯ ಪೂರ್ತಿ ವಿವರಗಳು ಇನ್ನಷ್ಟೇ ಸಿಗಬೇಕಾಗಿದ್ದು ಅವುಗಳನ್ನು ಎದುರು ನೋಡಲಾಗುತ್ತಿದೆ ಎಂದು ಪಾಣಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next