Advertisement

ನಾನು ಗವರ್ನರ್ ಆಗಿದ್ದಾಗ ಉಗ್ರರು ಶ್ರೀನಗರದ ಒಳಗೆ ನುಸುಳಿಲ್ಲ: ಸತ್ಯಪಾಲ್ ಮಲಿಕ್

05:14 PM Oct 18, 2021 | Team Udayavani |

ರಾಜಸ್ಥಾನ್: ನಾನು ಜಮ್ಮು-ಕಾಶ್ಮೀರದ ರಾಜ್ಯಪಾಲನಾಗಿದ್ದ ಸಂದರ್ಭದಲ್ಲಿ ಶ್ರೀನಗರದ 50ರಿಂದ 100 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಉಗ್ರರು ಒಳನುಸುಳಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸೋಮವಾರ(ಅಕ್ಟೋಬರ್ 18) ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ನಾನು ಗವರ್ನರ್ ಆಗಿದ್ದ ಅವಧಿಯಲ್ಲಿ ಉಗ್ರರು ಶ್ರೀನಗರದ 100 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಪ್ರವೇಶಿಸಿರಲಿಲ್ಲ. ಆದರೆ ಈಗ ಶ್ರೀನಗರದಲ್ಲಿ ಉಗ್ರರು ಅಮಾಯಕರ ಹತ್ಯೆಗೈಯುತ್ತಿದ್ದಾರೆ. ಇದು ನಿಜಕ್ಕೂ ದುಃಖದ ವಿಚಾರವಾಗಿದೆ ಎಂದು ಮಲಿಕ್ ಹೇಳಿದರು.

ಸತ್ಯಪಾಲ್ ಮಲಿಕ್ 2018ರ ಆಗಸ್ಟ್ ನಿಂದ 2019ರ ಅಕ್ಟೋಬರ್ ವರೆಗೆ ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಮಲಿಕ್ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ಕಲಂ ಅನ್ನು ರದ್ದುಗೊಳಿಸಿತ್ತು. ಬಳಿಕ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು.

ಸತ್ಯಪಾಲ್ ಮಲಿಕ್ ಅವರು 2019ರ ಆಗಸ್ಟ್ ನಿಂದ 2020ರ ಆಗಸ್ಟ್ 18ರವರೆಗೆ ಗೋವಾದ ರಾಜ್ಯಪಾಲರಾಗಿದ್ದರು. ನಂತರ 2020ರ ಆಗಸ್ಟ್ 20ರಂದು ಮೇಘಾಲಯದ ಗವರ್ನರ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next