ಎಲ್ಲ 124 ಸಿಬ್ಬಂದಿಯನ್ನೂ ಕೂಡಲೇ ಕೆಲಸದಿಂದ ತೆಗೆದುಹಾಕುವಂತೆಯೂ ಸೂಚನಾದೇಶ ನೀಡಲಾಗಿದೆ.
Advertisement
ರಾಜ್ಯಪಾಲರ ಸೂಚನೆಯಂತೆ ಉನ್ನತ ಶಿಕ್ಷಣ ಇಲಾಖೆಯಿಂದ ಮೈಸೂರು ವಿವಿ ಕುಲಪತಿಗಳಿಗೆ ನಿರ್ದೇಶಿಸಲಾಗಿದೆ. ಡಾ. ಎಂ.ಆರ್.ನಿಂಬಾಳ್ಕರ್ ನೇತೃತ್ವದ ತನಿಖಾ ತಂಡವು ರಂಗಪ್ಪ ಅವರು, ಕುಲಪತಿಯಾಗಿದ್ದ ಕಡೇ ದಿನಗಳಲ್ಲಿ 124 ಸಿಬ್ಬಂದಿ ಯನ್ನು ಕಾನೂನು ಬಾಹಿರವಾಗಿ ನೇಮಕ ಮಾಡಿಕೊಂಡಿ ದ್ದಾರೆ ಎಂದು ಹೇಳಿದೆ.
ಅಧಿನಿಯಮ ಪ್ರಕಾರ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ವೀರಬ್ರಹ್ಮಚಾರಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗೆ ನಿರ್ದೇಶಿಸಿದ್ದಾರೆ. ಜತೆಗೆ ಅಕ್ರಮವಾಗಿ ನೇಮಕಗೊಂಡ “ಸಿ’ ಮತ್ತು “ಡಿ’ ಗ್ರೂಪ್‌ನ 124 ಬೋಧಕೇತರ ಸಿಬ್ಬಂದಿಗಳನ್ನು ಕೂಡಲೇ ಕೆಲಸದಿಂದ ತೆಗೆದು ಹಾಕುವಂತೆ ಸೂಚನಾದೇಶ ನೀಡಿದ್ದಾರೆ. ಮೈಸೂರು ವಿವಿಗೆ ವಿವಿಧ ನೇಮಕಾತಿ ಮಾಡಿಕೊಳ್ಳುವ ಮುನ್ನ ಕಡ್ಡಾಯವಾಗಿ ನೇಮಕಾತಿ ನಿಯಮ, ಮಾರ್ಗಸೂಚಿ ಮತ್ತು ಮೀಸಲಾತಿ ಕಾರ್ಯಸೂಚಿಯನ್ನು ಪಾಲಿಸುವಂತೆ ತಿಳಿಸಿದ್ದಾರೆ.
Related Articles
ನಿಯಮದ ಪ್ರಕಾರ ಬೋಧಕೇತರ ಸಿಬ್ಬಂದಿ ನೇಮಕ ಸಂದರ್ಭದಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಬೇಕಿತ್ತು. ಅದನ್ನೂ ಮಾಡಿರಲಿಲ್ಲ. ಈ ನೇಮಕಾತಿ ಅಕ್ರಮವಾಗಿ ನಡೆದಿದೆ ಎಂದು ಮೈಸೂರು ವಿವಿಯ ಪ್ರಭಾರ ಕುಲಪತಿ ಪ್ರೊ.ಮಾನೆಯವರು ರಾಜ್ಯಪಾಲರಿಗೆ
ದೂರು ನೀಡಿದ್ದರು. ಅದರಂತೆ ರಾಜ್ಯಪಾಲರು 2017ರಲ್ಲಿ ನೇಮಕಾತಿಯ ಸಮಗ್ರ ತನಿಖೆಗೆ ಆದೇಶ ಹೊರಡಿಸಿದ್ದರು.
Advertisement
ವಿಶ್ವವಿದ್ಯಾಲಯದ ತನಿಖಾ ತಂಡದ ಅಧ್ಯಕ್ಷ ಡಾ.ಎಂ. ಆರ್.ನಿಂಬಾಲ್ಕರ್, ಸದಸ್ಯ ಡಾ.ಕಣುಬಾಯ್ ಗೋವಿಂದ್ ಜೀ ಮಾನವಿಯವರು 2017ರ ಜುಲೈ 28ರಂದು ಅಧಿಕಾರ ವಹಿಸಿಕೊಂಡು, ಕೂಲಂಕಷವಾಗಿ ಪ್ರಕರಣದ ತನಿಖೆ ನಡೆಸಿ. ಸಮಗ್ರ ವರದಿಯನ್ನು ರಾಜ್ಯಪಾಲರಿಗೆ ಒಪ್ಪಿಸಿದ್ದರು. ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿ ಪ್ರೊ.ಕೆ.ಎಸ್. ರಂಗಪ್ಪ ಅವರು ಬೋಧಕೇತರ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದಾರೆ. ಹೀಗಾಗಿ ರಾಜ್ಯಪಾಲರು ಯಾವ ರೀತಿಯ ಕ್ರಮ ಬೇಕಾದರೂ ತೆಗೆದುಕೊಳ್ಳಬಹುದು.
ವಿಶ್ವವಿದ್ಯಾಲಯದ ಕಾಯ್ದೆಯಂತೆ ಯಾವ ನಿಯಮವನ್ನು ಪಾಲಿಸದೇ ಕಾನೂನು ಬಾಹಿರವಾಗಿ ನೇಮಕಾತಿ ಮಾಡಿಕೊಂಡಿದ್ದಾರೆ. ನೇಮಕವಾಗಬೇಕಿರುವ ಸಿಬ್ಬಂದಿಯ ವಿದ್ಯಾರ್ಹತೆ, ವರ್ಷ, ಸೇವಾನುಭವವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಕುಲಸಚಿವ ಪ್ರೊ.ಆರ್.ರಾಜಣ್ಣ ಅವರ ವಿರುದ್ಧವೂ ಸರ್ಕಾರ ಯಾವುದೇ ಕ್ರಮ ಬೇಕಾದರೂ ತೆಗೆದುಕೊಳ್ಳಬಹುದು ಎಂದು ಶಿಫಾರಸ್ಸು ಮಾಡಿದೆ.