Advertisement

Terdal:ಮನುಷ್ಯನ ಆರೋಗ್ಯಕ್ಕೆ ನೀರು ಅವಶ್ಯ-ಕೆಸರಗೊಪ್ಪ

05:49 PM Nov 09, 2023 | Team Udayavani |

ತೇರದಾಳ: ನೀರು ಮನುಷ್ಯನ ಬದುಕಿಗೆ ಮತ್ತು ಆರೋಗ್ಯಕ್ಕೆ ಅವಶ್ಯಕ. ಅದನ್ನು ಎಲ್ಲರೂ ಹಿತವಾಗಿ ಮತ್ತು ಮಿತವಾಗಿ
ಬಳಸುವುದು ಅಗತ್ಯವಾಗಿದೆ. ಅಲ್ಲದೆ, ಜಲಮೂಲಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಹೇಳಿದರು.

Advertisement

ಪಟ್ಟಣದ ಪುರಸಭೆ ನಿರ್ವಹಿಸುವ ಜಲಶುದ್ಧೀಕರಣ ಕೇಂದ್ರದಲ್ಲಿ ನೀರು ಸರಬರಾಜು ಹಾಗೂ ಡೇ-ನಲ್ಮ ವಿಭಾಗದಡಿಯಲ್ಲಿ ಹಮ್ಮಿಕೊಂಡ ಜಲ ದೀಪಾವಳಿ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರು ಕುರಿತು ಅವರು ಮಾತನಾಡಿದರು.

ಸದ್ಯ ನೀರಿನ ಕೊರತೆ ಇದೆ. ಅದನ್ನು ಕಾಳಜಿಯಿಂದ ಬಳಸಿದರೆ ಮಾತ್ರ ಭವಿಷ್ಯದಲ್ಲಿ ಅದು ನಮಗೆ ದೊರೆಯುತ್ತದೆ. ಇಲ್ಲದಿದ್ದರೆ ಸಾಕಷ್ಟು ತೊಂದರೆ ಎದುರಾಗುತ್ತದೆ. ಎಲ್ಲ ಕೆಲಸವನ್ನು ಪುರಸಭೆಯೆ ಮಾಡಲಿ ಎಂಬ ಮನೋಭಾವ ತೊರೆದು ಎಲ್ಲರೂ ಕೂಡಿ ಸಹಕಾರದಿಂದ ಪುರಸಭೆಗೆ ಕೈ ಜೋಡಿಸಬೇಕು ಎಂದರು.

2005ರಲ್ಲಿ ಪುರಸಭೆ ವ್ಯಾಪ್ತಿಯಲ್ಲಿ 2.5 ಮಿಲಿಯನ್‌ ಲೀಟರ್‌ ನೀರಿನ ಬೇಡಿಕೆಗೆ ಅನುಗುಣವಾಗಿ ನೀರು ಪೂರೈಕೆ ಆರಂಭಿಸಿತ್ತು. ಈಗ ಜನಸಂಖ್ಯೆ ಹೆಚ್ಚಾಗಿದ್ದು, ಇದರ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಕೆ ಮಾಡಲು ಕಾರ್ಯಕ್ರಮ ಹಾಕಿಕೊಳ್ಳಬೇಕಾಗಿದೆ ಎಂದರು.

ಪುರಸಭೆ ಜೆಇ ಎಸ್‌.ಬಿ. ಮಾತಾಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ 35ಕ್ಕೂ ಹೆಚ್ಚಿನ ಸ್ತ್ರೀ ಶಕ್ತಿ ಸಂಘದವರಿಗೆ ನದಿಯಿಂದ
ನೀರು ಎತ್ತುವ ಕಾರ್ಯದಿಂದ ಆರಂಭಿಸಿ ಶುದ್ಧ ನೀರು ಸಂಗ್ರಹ, ಅಲ್ಲಿಂದ ಮನೆಯ ನಲ್ಲಿಗೆ ಬರುವ ನೀರು ಕುರಿತು ಫಿಲ್ಟರ್‌
ಹೌಸನಲ್ಲಿ ನಡೆಯುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿವರಿಸಿದರು.

Advertisement

ಪುರಸಭೆ ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರಪಾಟೀಲ್‌, ಸಿಬ್ಬಂದಿ ಭರಮು ದನಗರ, ಗೌರಿ ಮಾಲಾಪುರ, ನೇತ್ರಾವತಿ ಹಟ್ಟಿ, ಪ್ರಭು ಧರೆನ್ನವರ, ನೀರು ಸರಬರಾಜು ಸಿಬ್ಬಂದಿ ರಮೇಶ ದೊಡಮನಿ, ರವೀಂದ್ರ ರೋಡಕರ, ಮಶ್ಚೇಂದ್ರ ಗೋಠಡಕಿ, ಭರತ ಗುಡಕ್ಕನವರ, ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next