Advertisement
24ರಂದು ಬಸವೇಶ್ವರ ಗದ್ದುಗೆಗೆ, ಗುಡಿದೇವತೆಗೆ ಹಾಗೂ ಮಾರುತೇಶ್ವರ ಮೂರ್ತಿಗಳಿಗೆ ಪಂಚಾಮೃತಾಭಿಷೇಕ, ಅಲಂಕಾರ ಪೂಜೆ, ತುಪ್ಪದಾರುತಿ, ಮಂಗಳಾರುತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 9ಗಂಟೆಗೆ ಸ್ಲೋ ಮೋಟರ್ ಸೈಕಲ್ ಸ್ಪರ್ಧೆ, 10ಗಂಟೆಗೆ ಎರೆಡು ಗಾಲಿ ಡಬ್ಬಿ ಜೊತೆ ಟ್ರಾÂಕ್ಟರ್ ರಿವರ್ಸ್ ಓಡಿಸುವ ಸ್ಪರ್ಧೆ, ಅದರಂತೆ 10.30ಕ್ಕೆ ತೆರಬಂಡಿ ಸ್ಪರ್ಧೆಗಳು ಜರುಗುತ್ತವೆ.
ಗುಡಿದೇವಿ ದೇವಸ್ಥಾನದ ವರೆಗೆ ಆಗಮನವಾಗುತ್ತದೆ. ಪ್ರಾತಃಕಾಲದಿಂದಲೆ ಭಕ್ತರ ಹರಕೆಗಳ ಅರ್ಪಣೆ ನಡೆಯಲಿದೆ. 12ಗಂಟೆಗೆ
ವಿಶೇಷ ಅಭಿಷೇಕ, ದೇವಿಯ ಪೂಜಾ ಸಮಾರಂಭ, ಸೀಮಿಲಕ್ಕವ್ವನ ಅಭಿಷೇಕ, ಗ್ರಾಮದ ದೇವತೆಗಳಿಗೆ ಭಕ್ತರು ಉಡಿ ತುಂಬುವ ಕಾರ್ಯಕ್ರಮ, ಶುಕ್ರವಾರ ಸಂಜೆ 5ಕ್ಕೆ ಭವ್ಯ ರಥೋತ್ಸವ ಜರುಗಲಿದೆ. ತ್ರಿ 10.30ಕ್ಕೆ ವಿವಿಧ ಖ್ಯಾತ ಕಲಾವಿದರಿಂದ ಪ್ರಸಿದ್ಧ ಡೊಳ್ಳಿನ ಪದಗಳ ಕಾರ್ಯಕ್ರಮವಿದೆ. ಶುಕ್ರವಾರ
ಬೆಳಗ್ಗೆ 9ಕ್ಕೆ ಮಹಿಳಾ ಸೈಕಲ್ ಸ್ಪರ್ಧೆ ಜರುಗುತ್ತದೆ. ರಥೋತ್ಸವದ ಬಳಿಕ ಸಂಜೆ 7ಕ್ಕೆ ಪರಸು ಕೋಲೂರ ಮತ್ತು ಮಾಳು ನಿಪನಾಳ ಅವರಿಂದ ರಸಮಂಜರಿ ಜರುಗುತ್ತದೆ.
Related Articles
Advertisement
ಕಾರ್ಯಕ್ರಮಗಳ ನೇತೃತ್ವವನ್ನು ಬಬಲಾದಿಯ ಶ್ರೀ ಸಿದ್ಧರಾಮಯ್ಯ ಅಜ್ಜ, ವೇದಮೂರ್ತಿ ಓಂಕಾರಯ್ಯ ಶ್ರೀ, ಕಕಮರಿಯ ಸದ್ಗುರು ಅಭಿನವ ಗುರುಲಿಂಗಜಂಗಮ ಶ್ರೀ, ಮರೆಗುದ್ದಿಯ ಪ್ರಭು ತೋಂಟದಾರ್ಯ ಶ್ರೀ, ಲಿಂಗನೂರಿನ ಶಿವಪುತ್ರಾವಧೂತ ಶ್ರೀ, ಜಕನೂರಿನ ಶಿವಯ್ಯ ಅಜ್ಜ, ಚಿಕ್ಕಪಡಸಲಗಿಯ ಅಕ್ಕಮಹಾದೇವಿ, ಗ್ರಾಮದ ರುಕ್ಮಮ್ಮಾತಾಯಿಯವರು ವಹಿಸುವರು. ಸ್ಪರ್ಧೆ ಹಾಗೂ ಇತರೆ ಮಾಹಿತಿಗಾಗಿ 8861988971, 9980451781 ಇಲ್ಲಿಗೆ ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ.