Advertisement
ಹುಲ್ಲಿನ ಅಂಕಣದಲ್ಲಿ ಭಾರೀ ಸವಾಲು
Related Articles
ಈ ವರ್ಷ ಆಸ್ಟ್ರೇಲಿಯನ್ ಓಪನ್ ಗೆದ್ದ ಫೆಡರರ್ 18ನೇ ಸ್ಲಾಂನತ್ತ ಕಣ್ಣಿಟ್ಟಿದ್ದಾರೆ. ಈಗಾಗಲೇ ಈ ವರ್ಷ ನಾಲ್ಕು ಟೂರ್ನಿ ಗೆದ್ದಿರುವುದು ಅವರ ಫಾರಂ ತೋರಿಸುತ್ತದೆ. ವಿಂಬಲ್ಡನ್ ತಯಾರಿಯ ನಿಟ್ಟಿನಲ್ಲಿ ಫ್ರೆಂಚ್ ಓಪನ್ ಆಡದಿರಲು ನಿರ್ಧರಿಸಿದ ಫೆಡ್ ಪೀಟ್ ಸಾಂಪ್ರಾಸ್‌ರ 7 ವಿಂಬಲ್ಡನ್ ಪ್ರಶಸ್ತಿ ದಾಖಲೆ ಸರಿಗಟ್ಟುವ ಸನಿಹದಲ್ಲಿದ್ದಾರೆ. 36 ವರ್ಷದ ಮೈಲುಗಲ್ಲು ಕೂಡ ಹತ್ತಿರದಲ್ಲಿದೆ ಎಂಬ ಅಂಶ ಕೂಡ ಗಮನಿಸಬೇಕಾದುದೇ. ನಿಜ, ಅಗ್ರಕ್ರಮಾಂಕಿತರಾಗಿಯೂ ಹಾಲಿ ಚಾಪಿಯನ್ ಮರ್ರೆ ಫಾರಂ ಆತಂಕಕಾರಿ. 2013, 16ರಲ್ಲಿ ವಿಂಬಲ್ಡನ್ ಗೆದ್ದ ಈತ ಕಳೆದ ಬಾರಿಯ ವಿಜೇತರಾಗುವ ಮುನ್ನ 33 ಪಂದ್ಯಗಳಲ್ಲಿ ಕೇವಲ 6 ಪಂದ್ಯ ಸೋತಿದ್ದರು. 2 ಫೈನಲ್ ಹಾಗೂ ರೋಂ ಮಾಸ್ಟರ್. ಈ ಬಾರಿ 21-9ರ ಗೆಲುವು ಸೋಲು. ಹೋಗಲಿ, ಮಾಸ್ಟರ್ ಟೂರ್ನಿಗಳ ಪೈಕಿ ಫ್ರೆಂಚ್ ಓಪನ್‌ನಲ್ಲಷ್ಟೇ ಕ್ವಾರ್ಟರ್ ಫೈನಲ್. ಅದೇ ಅತ್ಯುತ್ತಮ ಸಾಧನೆ. ಇಷ್ಟರ ಮೇಲೆ, ಮೊನ್ನೆ ಹುಲ್ಲಿನಂಕಣದ ಏಜಿಯಾನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾದ ಜಾರ್ಡನ್ ಥಾಮ್ಸನ್ ಕೈಯಲ್ಲಿ ಸೋಲು. 30ರ ಹರೆಯದ ಮರ್ರೆ ಹಿಂದಿನೆರಡು ವಿಂಬಲ್ಡನ್ ಗೆಲ್ಲುವ ಮುನ್ನ ಕ್ವೀನ್ ಕ್ಲಬ್‌ನ ಪೂರ್ವಭಾವಿ ಟೂನಿಯಲ್ಲೂ ವಿಜೇತರಾಗಿದ್ದರು ಎಂಬ ನೆನಪು ಹರಿದಾಡುತ್ತದೆ. ಮರ್ರೆ ಮುಂದೆ ದೊಡ್ಡ ಸವಾಲಿದೆ.
Advertisement
ಫಾರ್ಮ್ ಹುಡುಕಾಟದಲ್ಲಿ ಮರ್ರೆಇದೇ ಕಥೆ ಜೋಕೋವಿಚ್‌ರದು. ಕಳೆದ ವರ್ಷ ಎಲ್ಲ ನಾಲ್ಕು ಗ್ರ್ಯಾನ್ ಸ್ಲಾಂಗಳನ್ನು ಗೆದ್ದು ವಿಂಬಲ್ಡನ್‌ಗೆ ಬಂದಿದ್ದರೆ ಈ ಬಾರಿ ಬರಿಗೈ! ಇಡೀ ವರ್ಷದಲ್ಲಿ ಈ ಆಟಗಾರ ಗೆದ್ದಿರುವುದು ಒಂದು ಪ್ರಶಸ್ತಿಯನ್ನು ಮಾತ್ರ. ಆ ಮಟ್ಟಿಗೆ 10ನೇ ಫ್ರೆಂಚ್ ಗೆದ್ದ ರಫೆಲ್ ನಡಾಲ್ ಹೆಚ್ಚು ಆತ್ಮವಿಶ್ವಾಸದಿಂದ ವಿಂಬಲ್ಡನ್‌ಗೆ ಆಡಲಿಳಿಯಬಹುದು. ಟೆನಿಸ್‌ನಲ್ಲಿ “ಅಪ್‌ಸೆಟ್‌ಗೂ ಪ್ರಚಾರ ಸಿಗುತ್ತದೆ. ಕ್ವೀನ್ಸ್ ಫೈನಲ್ ಆಡಿದ ಫೆಲಿಸಿನೋ ಲೋಪೆಜ್, ಮರಿನ್ ಸಿಲಿಕ್, ರೊಲ್ಯಾಂಡ್ ಗ್ಯಾರಸ್‌ನಲ್ಲಿ ಜೋಕೋವಿಕ್‌ಗೆ ಸೋಲುಣಿಸಿದ ಡೊಮಿನಿಕ್ ಥೀಮ್, ಆಸ್ಟ್ರೇಲಿಯಾದ ನಿಕ್ ಕಿರ್ಗೋಯಿಸ್, ಅಲೆಕ್ಸಾಂಡರ್ ಜ್ವರೆವ್ ತರಹದ ಉದಯೋನ್ಮುಖರು ಪ್ರಜ್ವಲಿಸಬಹುದು, ಯಾರಿಗ್ಗೊತ್ತು? ಸೆರೆನಾ ಇಲ್ಲದಿರುವುದರಿಂದ ಸ್ಲಾಂನ ಮಹಿಳಾ ವಿಭಾಗ ಅಕ್ಷರಶಃ ಓಪನ್. ಗಾಯಾಳುವಾಗಿರುವುದರಿಂದ ಮಾರಿಯಾ ಶರಪೋವಾ ಅರ್ಹತಾ ಸುತ್ತಲ್ಲೂ ಆಡುತ್ತಿಲ್ಲ. ವಿಂಬಲ್ಡನ್ ಅಧಿಕಾರಿಗಳು “ಕ್ಲೀನ್ ಇಮೇಜ್‌ನ ಪ್ರತಿಪಾದಕರಾಗಿರುವುದರಿಂದ ಕನಸಿನಲ್ಲೂ ಶರಪೋವಾಗೆ ವೈಲ್ಡ್‌ಕಾರ್ಡ್ ಕೊಡುವುದಿಲ್ಲ! ಈ ಹಿನ್ನೆಲೆಯಲ್ಲಿ ಡ್ರಾ ಗಮನಿಸಿದರೆ, ಮಾಜಿ ಚಾಂಪಿಯನ್‌ರಾದ ವೀನಸ್ ವಿಲಿಯಮ್ಸ್, ಪೆಟ್ರಾ ಕ್ವಿಟೋವಾ ಮಾತ್ರ ಸೆಂಟರ್ ಕೋರ್ಟ್‌ನಲ್ಲಿ ಚಾಂಪಿಯನ್ ಪ್ಲೇಟ್ ಎತ್ತಿಹಿಡಿದ ಅನುಭವವಿರುವವರು. ವೀನಸ್ ಸ್ಪರ್ಧಿಸುತ್ತಾರೆ ಎಂಬುದಕ್ಕಿಂತ ಹೆಚ್ಚು ಭವಿಷ್ಯ ಕಷ್ಟ. 2011, 14ರಲ್ಲಿ ವಿಂಬಲ್ಡನ್ ಗೆದ್ದಿದ್ದ ಕ್ವಿಟೋವಾ ತನ್ನ ಮನೆಯಲ್ಲಿ ದರೋಡೆಕೋರನ ವಿರುದ್ಧ ಹೋರಾಟ ನಡೆಸುವಾಗ ಕೈಗೆ ಗಂಭೀರ ಗಾಯ ಮಾಡಿ ಕೊಂಡವರು. ಫ್ರೆಂಚ್ ಓಪನ್ ಗೆದ್ದ 20ರ ಜೆಲೆನಾ ಓಸ್ಟಾಪೆಂಕೋ ವಿಂಬಲ್ಡನ್‌ನ್ನು ಗೆದ್ದರೆ ಸತತ ಎರಡು ಸ್ಲಾಂ ಫೈನಲ್ ಗೆದ್ದಂತಾಗುತ್ತದೆ. ಅಂತಹ ಫಾರಂನ್ನು ಸದ್ಯ ತಯಾರಿ ಟೂರ್ನಿಗಳಲ್ಲಿ ಜೆಲೆನಾ ತೋರಿಸುತ್ತಿರುವುದೇನೋ ನಿಜ. ವಿಂಬಲ್ಡನ್‌ನ ಕಿರಿಯರ ಪ್ರಶಸ್ತಿ ಪಡೆದಿರುವ ಜೆಲೆನಾ ಆಕೆಯ ಕೋಚ್ ಅನ್ನಾಬೆಲ್ ಮೆಡಿನಾ ಗರ್ರಿಗ್ಯೂ ಪ್ರಕಾರ ಫೇವರಿಟ್. ಜೆಲೆನಾಗೆ ಗ್ರಾಸ್ ಫೇವರಿಟ್! ಹಾಗೆಂದುಕೊಂಡು ತನ್ನ ಮೇಲೆ ತಾನೇ ಒತ್ತಡ ಹೇರಿಕೊಳ್ಳದಿದ್ದರೆ ಒಳ್ಳೆಯದಿತ್ತು. ಇಂಗ್ಲೆಂಡಿಗರಿಗೆ ಮರ್ರೆಯಂತೆ ಮಹಿಳಾ ವಿಭಾಗದಲ್ಲಿ ಜೋಹನ್ ಕೊಂಟಾ ಈವರೆಗಿನ ಅಭಾವವನ್ನು ಮರೆಸುತ್ತಾರೆ ಎಂಬ ಹಗಲುಗನಸು. ಇಂತದೊಂದು ಕನಸುಗಳಿಗೆ ಈ ಸಂಚಿಕೆ ಅವಕಾಶ ಕಲ್ಪಿಸಿದೆ. ಅದಕ್ಕೆಂದೇ ಬಿಬಿಸಿ ಕಾಮೆಂಟರೇಟರ್ ಜಾನ್ ಲಾಯ್ಡ ಹೇಳುತ್ತಿದ್ದರು, ಮಹಿಳಾ ವಿಭಾಗದಲ್ಲಿ ಈ ಬಾರಿ 15 ಫೆೇವರಿಟ್‌ಗಳನ್ನು ಗುರುತಿಸಬಹುದು! ವಿಂಬಲ್ಡನ್ ಕ್ಯೂ ಎಂಬುದು ಪರಂಪರೆಯ ತುಣುಕು!
ಇವತ್ತಿಗೂ ಕೊನೆಯ ನಾಲ್ಕು ದಿನಗಳ ಹೊರತಾಗಿ ಉಳಿದ ದಿನ ಕ್ಯೂ ನಿಂತು ಟಿಕೆಟ್ ಪಡೆದೇ ಸೆಂಟರ್ ಕೋರ್ಟ್, ಕೋರ್ಟ್ ನಂ.1 ಮತ್ತು 2ಕ್ಕೆ ಪ್ರವೇಶ ಪಡೆಯಬಹುದು. ಸೀಮಿತ ಸಂಖ್ಯೆಯ ಟಿಕೆಟ್‌ಗಾಗಿ ಸಾವಿರಾರು ಜನ ವಿಂಬಲ್ಡನ್ ಪಾರ್ಕ್‌ನಲ್ಲಿ ಕಾಯುತ್ತಾರೆ. ಟಿಕೆಟ್ ಸಿಕ್ಕಿಲ್ಲವೆಂದರೂ,
ಪಾರ್ಕ್‌ನ ಬಿಗ್ ಸ್ಕಿ$›àನ್‌ನಲ್ಲಿ ಆಟ ನೋಡಬಹುದು. ಹಾಗಾಗಿ ವಿಂಬಲ್ಡನ್ ಎಂಬುದು ಅಲ್ಲಿನ ಕುಟುಂಬಗಳ ಪ್ರವಾಸಿ ಸ್ಥಳ ಕೂಡ. ಟಿಕೆಟ್ ಖರೀದಿಗೆ ಕ್ರೆಡಿಟ್, ಡೆಬಿಟ್ ಕಾರ್ಡ್ ಹೊರತೆಗೆದರೂ ಪ್ರಯೋಜನವಿಲ್ಲ. ಟಿಕೆಟ್ ಖರೀದಿಗೆ ನಗದು ಮಾತ್ರ ಮಾನ್ಯ! ಹಾಗಾಗಿ ವಿಂಬಲ್ಡನ್ ಕ್ಯೂನಲ್ಲಿ ನಿಲ್ಲುವುದನ್ನು ಕೂಡ ಜನ ಇಷ್ಟಪಡುತ್ತಾರೆ. ಆ ಅನುಭವ ಜೀವನದಲ್ಲೊಮ್ಮೆ ಆಗಬೇಕು ಎಂಬ ಪ್ರತೀತಿ ಹುಟ್ಟಿಕೊಂಡಿದೆ. ಮಾ.ವೆಂ.ಸ.ಪ್ರಸಾದ್