Advertisement
ಇದೇ ಮೊದಲ ಸಲ ಹತ್ತು ಸಾವಿರ ರೂ. ಹೆಚ್ಚುವರಿಯಾಗಿ ನೀಡಲಾಗುತ್ತಿದೆ ಎಂದರು. ಪ್ರವಾಹದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಿಸಲು ಈಗಾಗಲೇ ಐದು ಲಕ್ಷ ರೂ. ಪರಿಹಾರ ಘೋಷಿಸಲಾಗಿದ್ದು, ಇಷ್ಟೊಂದು ಪರಿಹಾರ ನೀಡುತ್ತಿರುವುದು ಕೂಡ ಇದೇ ಮೊದಲ ಬಾರಿ. ಔರಾದಕರ್ ವರದಿಯನ್ನು ತಕ್ಷಣ ಜಾರಿ ಮಾಡಲಾಗುವುದು.
Related Articles
ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿ, ತಮ್ಮನ್ನು ಭೇಟಿಯಾಗದೇ ತೆರಳು ತ್ತಿದ್ದಂತೆ ಎಚ್ಚೆತ್ತುಕೊಂಡ ಸಿಎಂ ಯಡಿಯೂರಪ್ಪ ನೇರ ವಾಗಿ ಕತ್ತಿ ಮಾಲೀಕತ್ವದ ಹೋಟೆಲ್‌ಗೆ ತೆರಳಿ ಅವ ರೊಂದಿಗೆ ಉಪಾ ಹಾರ ಸೇವಿಸಿದರು. ಮಂಗಳವಾರ ಬೆಳಗಾವಿಗೆ ಆಗಮಿ ಸಿದ ಯಡಿಯೂರಪ್ಪ ನಿಗದಿಯಂತೆ ಸರ್ಕ್ನೂಟ್ ಹೌಸ್‌ಗೆ ತೆರಳಬೇಕಿತ್ತು. ಆದರೆ ಹಠಾತ್ತನೇ ಮಾರ್ಗ ಬದಲಿಸಿ ನೇರವಾಗಿ ಯುಕೆ 27 ಹೋಟೆಲ್‌ಗೆ ತೆರಳಿ ಉಮೇಶ ಕತ್ತಿ ಅವರನ್ನು ಪಕ್ಕಕ್ಕೆ ಕೂರಿಸಿಕೊಂಡು ಮಾತುಕತೆ ನಡೆಸಿದರು.
Advertisement
ಉಪ್ಪಿಟ್ಟು, ಅವಲಕ್ಕಿ, ಸ್ಯಾಂಡ್‌ವಿಚ್, ಚಹಾ ಸೇವಿಸಿದ ಯಡಿಯೂರಪ್ಪ, ಉಮೇಶ ಕತ್ತಿ ಅವರ ಕುಶಲೋಪರಿ ವಿಚಾರಿಸಿದರು. ಬಳಿಕ ಕೆಲ ಹೊತ್ತು ಮಾತುಕತೆ ನಡೆಸಿದರು. ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಇತರರು ಇದ್ದರು.
ಕತ್ತಿ, ಕಾಗೆ, ಪೂಜಾರಿಗೆ ಮುನಿಸಿಲ್ಲ – ಸಿಎಂ: “ಉಮೇಶ ಕತ್ತಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರಿಗೆ ಯಾವುದೇ ಅಸಮಾಧಾನ, ಮುನಿಸೂ ಇಲ್ಲ’ ಎಂದು ಇದೇ ವೇಳೆ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು. ರಾಜು ಕಾಗೆ ಮತ್ತು ಅಶೋಕ ಪೂಜಾರಿ ಅವರಿಗೂ ಅಸಮಾಧಾನ ಇಲ್ಲ. ಟಿಕೆಟ್ ದೊರಕದ ಬಿಜೆಪಿ ನಾಯಕರು ಕಾಂಗ್ರೆಸ್ ಬಾಗಿಲು ತಟ್ಟುವ ವಿಷಯ ನನ್ನ ಗಮನಕ್ಕಿಲ್ಲ. ಅನರ್ಹ ಶಾಸಕರ ಕುರಿತು ಅ.25ರ ನಂತರ ಮಾತನಾಡುತ್ತೇನೆ ಎಂದರು.