Advertisement

“ದೇವಾಲಯಗಳು ಸಾತ್ವಿಕ ಪ್ರತಿಪಾದನ ಕೇಂದ್ರಗಳಾಗಲಿ’

09:58 AM Mar 31, 2017 | |

ಬೆಳ್ತಂಗಡಿ: ದೇವಾಲಯವೆಂದರೆ ಅದೊಂದು ವಾಣಿಜ್ಯ ಸಂಕೀರ್ಣ ಅಥವಾ  ಸಿಟಿ ಸೆಂಟರ್‌ ಅಲ್ಲ. ಅಲ್ಲಿ ಭಕ್ತರಲ್ಲಿ ಒಂದು ರೀತಿಯ ಕಂಪನದ ಅನುಭವವಾಗುತ್ತದೆ. ಆದರೆ ಇಂದಿನ ವಿದ್ಯಮಾನದಲ್ಲಿ ದೇವಾಲಯಗಳು ಗೊಂದಲದ ಗೂಡಾಗುತ್ತಿವೆ. ಅಲ್ಲಿ ಭಕ್ತಿಗಿಂತ ಭಯದ ವಾತಾವರಣವೇ ಹೆಚ್ಚುತ್ತಿದೆ.  

Advertisement

ದೇವಳಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕಾದರೆ ಅದು ಸಾತ್ವಿಕತೆಯ ಪ್ರತಿಪಾದನಾ ತಾಣವಾಗಬೇಕು ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ| ಶ್ರೀಶ ಕುಮಾರ್‌ ಹೇಳಿದರು.

ಅವರು ಕುರಾಯ ಶ್ರೀ ಸದಾಶಿವ ದೇವಸ್ಥಾನದ ನವೀಕರಣ ಪುನರ್‌ ಪ್ರತಿಷ್ಠಾಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ  ಬುಧವಾರ ರಾತ್ರಿ  ಧಾರ್ಮಿಕ ಉಪನ್ಯಾಸ ನೀಡಿದರು.

ರೈತಬಂಧು, ಮಾರುತಿಪುರದ ಉದ್ಯಮಿ ಶಿವಶಂಕರ್‌ ನಾಯಕ್‌  ಅಧ್ಯಕ್ಷತೆ ವಹಿಸಿದ್ದರು. ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ  ಚಿದಾನಂದ ರಾವ್‌ ಕೊಲ್ಲಾಜೆ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್‌ ಅಗರ್ತ, ಬಂದಾರು ಗ್ರಾ. ಪಂ. ಅಧ್ಯಕ್ಷ  ಉದಯ ಕುಮಾರ್‌ ಬಿ.ಕೆ. ಶುಭ ಹಾರೈಸಿದರು.

Advertisement

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್‌ ಪೂಂಜ, ಪ್ರಧಾನ ಕಾರ್ಯದರ್ಶಿ ಶ್ರೀಪತಿ ಭಟ್‌,  ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಿನಕರ ಪೂಜಾರಿ, ಜಿ.ಪಂ. ಮಾಜಿ ಸದಸ್ಯೆ ದೇವಕಿ ಸಂಜೀವ ಗೌಡ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ತಿಮ್ಮಯ್ಯ ಗೌಡ, ಕೋಶಾಧಿಕಾರಿ ಹರೀಶ್‌ ಹೊಳ್ಳ, ತಾ.ಪಂ.ಸದಸ್ಯ ಕೃಷ್ಣಯ್ಯ ಆಚಾರ್ಯ, ಚಪ್ಪರ ಸಮಿತಿ ಸಂಚಾಲಕ ತಿಮ್ಮಪ್ಪ ಗೌಡ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪುತ್ತಿಲ ಕುಶಾಲಪ್ಪ ಗೌಡ,  ಸ್ವಾಗತ ಸಮಿತಿ ಸಹ ಸಂಚಾಲಕ ಬಾಲಕೃಷ್ಣ ಗೌಡ ಪಿ. ಉಪಸ್ಥಿತರಿದ್ದರು.

ಶಿಕ್ಷಕ ವಿಜಯ ಕುಮಾರ್‌ ಮತ್ತು ಚೈತ್ರ ಕಾರ್ಯಕ್ರಮ ನಿರೂಪಿಸಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್‌ ಪೂಂಜ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ವೆಂಕಟ್ರಮಣ ಗೌಡ ಬಾಳೆಹಿತ್ತಿಲು ವಂದಿಸಿದರು.

ದೇಗುಲಗಳು ಗೊಂದಲ, ವ್ಯಾಪಾರದ ಕೇಂದ್ರಗಳಾಗದಿರಲಿ 
ಇಂದು ದೇವಾಲಯ, ಬ್ರಹ್ಮಕಲಶಗಳು ವ್ಯಾಪಾರದ ಕೇಂದ್ರ ಗಳಾಗುತ್ತಿವೆ.  ದೇಣಿಗೆಗಳ ಆಧಾರದಲ್ಲಿ ಬ್ರಹ್ಮಕಲಶ, ಜೀರ್ಣೋದ್ಧಾರ ಸಮಿತಿ, ವಿವಿಧ ಹುದ್ದೆಗೆ ಹಣವಂತರನ್ನು ಆಯ್ಕೆ ಮಾಡುವ ಸಂಪ್ರದಾಯ ಅಪಾಯಕಾರಿ. ದೇಗುಲಗಳನ್ನು ದೇವಾಲಯಗಳನ್ನಾಗಿಯೇ  ಉಳಿಸಿಕೊಂಡು  ಹಣ, ಲಾಭ, ನಷ್ಟ ಲೆಕ್ಕಾಚಾರದ ಗೊಂದಲಮಯ ವ್ಯವಹಾರದ ಕೇಂದ್ರವಾಗುವುದನ್ನು ತಪ್ಪಿಸೋಣ.       
             
– ಡಾ| ಶ್ರೀಶ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next