Advertisement
ಬೆಳಗ್ಗೆ 7.30ಕ್ಕೆ ಮೈಸುಡಲು ಆರಂಭಿಸುವ ಬಿಸಿಲು ಸಂಜೆ ಐದು ಆದ್ರೂ ತಗ್ಗುವುದೇ ಇಲ್ಲ. ಮೈಚರ್ಮದ ಜೊತೆ ಬಾಯಿ ಒಣಗುವಅನುಭವವಾಗುತ್ತದೆ. ಬಿಸಿಲಿನ ತೀವ್ರತೆಗೆ ಜನರುತಂಪು ಪಾನೀಯ, ಪಾನಕ, ಮಜ್ಜಿಗೆ, ಎಳೆನೀರು ಕಡೆವಾಲುತ್ತಿದ್ದಾರೆ.
Related Articles
Advertisement
ಬೇಸಿಗೆಯಲ್ಲಿ ಎಳೆನೀರಿಗೆ ಹೆಚ್ಚಿನ ಬೇಡಿಕೆಇರುತ್ತದೆ. 35 ವರ್ಷಗಳಿಂದ ಇದೇವ್ಯಾಪಾರ ಮಾಡುತ್ತಿದ್ದೇನೆ. ಆಸ್ಪತ್ರೆಗೆ ಬರುವರೋಗಿಗಳಿಗೆ, ವೃದ್ಧರಿಗೆ 25 ರೂ. ಬೆಲೆ ನಿಗದಿಮಾಡಿದ್ದೇವೆ. ತಾಲೂಕು, ಜಿಲ್ಲೆಯಲ್ಲಿನ ತೆಂಗಿನತೋಟಗಳಿಂದ ಎಳೆನೀರನ್ನು ಖರೀದಿಸಿತರಲಾಗುತ್ತಿದೆ. ಜನರು ಸಹ ಎಳನೀರನ್ನೇಹೆಚ್ಚು ಕೇಳುತ್ತಾರೆ. – ಮುನಿರಾಜು, ಎಳೆನೀರು ವ್ಯಾಪಾರಿ, ದೇವನಹಳ್ಳಿ
ಈ ಬಾರಿ ಬಿಸಿಲಿನ ತಾಪಮಾನಹೆಚ್ಚಾಗಿದೆ. ಮಧ್ಯಾಹ್ನದ ವೇಳೆ ನೆತ್ತಿಸುಡುತ್ತದೆ. ಮನೆಯಿಂದ ಹೊರ ಹೋಗಲುಹಿಂದೇಟು ಹಾಕುವಂತಾಗಿದೆ. ಬಿಸಿಲಿನತಾಪಕ್ಕೆ ತಲೆನೋವಿನ ಬಾಧೆ ಹೆಚ್ಚಾಗುತ್ತದೆ.ಊಟವೂ ಸರಿಯಾಗಿ ಸೇರುವುದಿಲ್ಲ.ಹೀಗಾಗಿ ಎಳೆ ನೀರು ಕುಡಿಯುವುದರಿಂದಸುಸ್ತು ಕಡಿಮೆ ಆಗಿ, ಆರೋಗ್ಯಕಾಪಾಡಿಕೊಳ್ಳಬಹುದು. – ವೆಂಕಟೇಶ್, ನಾಗರಿಕ
ನರೇಗಾ ಯೋಜನೆಯಲ್ಲಿ ಉದ್ಯೋಗಚೀಟಿ ಹೊಂದಿದವರಿಗೆ ತೆಂಗಿನ ತೋಟಮಾಡುವವರಿಗೆ ಪ್ರೋತ್ಸಾಹವನ್ನು ಇಲಾಖೆಯಿಂದ ನೀಡಲಾಗುತ್ತಿದೆ. ಪ್ರತಿ ಬೇಸಿಗೆ ವೇಳೆಯಲ್ಲಿ ಎಳೆನೀರಿಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. ಎಳೆನೀರು ತೋಟ ಮಾಡುವ ರೈತರುನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. – ಮಹಂತೇಶ್ ಮುರುಗೋಡ್, ಉಪ ನಿರ್ದೇಶಕ, ಜಿಲ್ಲಾ ತೋಟಗಾರಿಕಾ ಇಲಾಖೆ
– ಎಸ್.ಮಹೇಶ್