Advertisement
ಷೇರು ಖರೀದಿಯ ಕುರಿತು ಸೋಮವಾರ ಅಧಿಕೃತ ವಾಗಿ ಘೋಷಣೆ ಮಾಡಲಾಯಿತು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ (ಎಂಎಚ್‌ಇ) “ಮಣಿಪಾಲ ಆಸ್ಪತ್ರೆಗಳು’ ಬ್ರ್ಯಾಂಡ್ ಹೆಸರಿನಡಿ ದೇಶದ 16 ನಗರಗಳಲ್ಲಿ ಸುಮಾರು 8,300 ಹಾಸಿಗೆ ಸಾಮರ್ಥ್ಯವಿರುವ 29 ಆಸ್ಪತ್ರೆಗಳ ಸಮೂಹವನ್ನು ಹೊಂದಿದೆ.
Related Articles
ಮೂಲಗಳ ಪ್ರಕಾರ ಟೆಮಾಸೆಕ್ ಸಂಸ್ಥೆಯು ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನಿಂದ ಹೆಚ್ಚುವರಿ ಯಾಗಿ ಖರೀದಿಸು ತ್ತಿರುವ ಷೇರುಗಳ ಮೌಲ್ಯ 16,300 ಕೋಟಿ ರೂ.ಗಳು. ಟೆಮಾಸೆಕ್ ಅಧೀನಕ್ಕೆ ಶೇ. 59ರಷ್ಟು ಷೇರುಗಳು ಬರ ಲಿವೆ. ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್‌ನ ಒಟ್ಟು ಮೌಲ್ಯ ಸುಮಾರು 40 ಸಾವಿರ ಕೋಟಿ ರೂ.ಗಳು ಎಂದು ಹೇಳಲಾಗಿದೆ.
Advertisement
ಹರ್ಷದ ಸಂಗತಿಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನಲ್ಲಿನ ಗಣ ನೀಯ ಪ್ರಮಾಣದ ಷೇರುಗಳನ್ನು ಟೆಮಾಸೆಕ್ ಸ್ವಾಧೀನ ಪಡಿಸಿ ಕೊಳ್ಳುತ್ತಿರುವುದು ಬಹಳ ಸಂತೋಷದ ವಿಷಯ. ಆರೋಗ್ಯ ಕ್ಷೇತ್ರದಲ್ಲಿನ ಹೂಡಿಕೆಯು ದೀರ್ಘಾವಧಿ ದೃಷ್ಟಿಕೋನ ಮತ್ತು ಸಂವೇದನಾಶೀಲ ಸಾಮಾ ಜಿಕ ಹೊಣೆಗಾರಿಕೆಯನ್ನು ಬಯಸುತ್ತದೆ. ಇಂತಹ ಮೌಲ್ಯಗಳನ್ನು ಹೊಂದಿರುವ ಟೆಮಾಸೆಕ್ ಮತ್ತು ಟಿಪಿಜಿಯಂಥ ಪಾಲುದಾರರನ್ನು ನಾವು ಹೊಂದಿರು ವುದು ಹರ್ಷದ ಸಂಗತಿ ಎಂದು ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್‌ನ ಪ್ರವರ್ತಕ ರಂಜನ್ ಪೈ ಹೇಳಿದರು. ಕೊರೊನಾದಂಥ ಕ್ಲಿಷ್ಟಕರ ಸಮಯದಲ್ಲೂ ನಮ್ಮೊಂದಿಗೆ ಕೈಜೋಡಿಸಿ, ಉನ್ನತ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಬೆಂಬಲವಾಗಿ ನಿಂತ ಎನ್‌ಐಐಎಫ್ಗೂ ನಾನು ಆಭಾರಿಯಾಗಿದ್ದೇನೆ ಎಂದೂ ಅವರು ತಿಳಿಸಿದರು. ಟಿಪಿಜಿ ಕ್ಯಾಪಿಟಲ್‌ನ ಏಷ್ಯಾ ವಿಭಾಗದ ಸಹ- ಪ್ರವರ್ತಕ ಪಾಲುದಾರ ಪುನೀತ್ ಭಾಟಿಯಾ ಮಾತನಾಡಿ, ಆರೋಗ್ಯ ಕ್ಷೇತ್ರದ ಕ್ಷಮತೆಗೆ ಮಣಿಪಾಲ್ ಸಂಸ್ಥೆ ಇಟ್ಟಿರುವ ಹೆಜ್ಜೆಗೆ ಸದಾ ನಮ್ಮ ಬೆಂಬಲವಿದೆ ಎಂದರು.