Advertisement

ಲಂಕಾದಲ್ಲಿ ತೆಲುಗು ಜನಾಂಗ

12:07 PM Feb 22, 2018 | Team Udayavani |

ಹೊಸದಿಲ್ಲಿ: ನೆರೆಯ ಶ್ರೀಲಂಕಾದಲ್ಲಿ ಆಂಧ್ರ ಪ್ರದೇಶದ ರಾಜ್ಯಭಾಷೆಯಾಗಿರುವ ತೆಲು ಗನ್ನು ಮಾತನಾಡುವ ಬುಡಕಟ್ಟು ಜನಾಂಗವೊಂದು ಪತ್ತೆಯಾಗಿದ್ದು, ಭಾರತದ ಅನೇಕ ಸಂಶೋಧಕರನ್ನು ಆಕರ್ಷಿಸಿದೆ. “ಅಹಿಕುಂಟಕ’ ಎಂದು ಕರೆಯಲ್ಪಡುವ ಈ ಜನಾಂಗವು ತೆಲುಗು ಭಾಷೆಯನ್ನು ಶತಮಾ ನಗಳಿಂದ ಬಳಸುತ್ತಿರುವುದಾಗಿ “ದ ಹಿಂದೂ’ ಪ್ರಕಟಿಸಿದ ವರದಿಯನ್ನಾಧರಿಸಿ, ಇದೀಗ, ಆಂಧ್ರಪ್ರದೇಶ ಸರಕಾರ ಈ ಬಗ್ಗೆ ಶಾಸ್ತ್ರೀಯ ಅಧ್ಯಯನ ಮಾಡಲು ಮುಂದಾಗಿದೆ. 

Advertisement

ಈ ಬಗ್ಗೆ ವಿವರಣೆ ನೀಡಿರುವ ಆಂಧ್ರ ಕ್ರಿಯಾಶೀಲತೆ ಹಾಗೂ ಸಾಂಸ್ಕೃತಿಕ ಆಯೋಗದ (ಎಪಿಸಿಸಿಸಿ) ಮುಖ್ಯಸ್ಥ ವೈಜೈ ಭಾಸ್ಕರ್‌, ಶತಮಾನಗಳಿಂದ ಲಂಕಾದಲ್ಲಿ ಜೀವಿಸುತ್ತಿರುವ ಅಹಿಕುಂಟಕ ಎಂಬ ತೆಲುಗು ಭಾಷಿಕರ ಬುಡಕಟ್ಟು ಜನಾಂಗದಲ್ಲಿ ಈಗ ಕೆಲವೇ ನೂರು ಮಂದಿ ಮಾತ್ರ ಉಳಿದಿದ್ದಾರೆ. ಇವರು, ವೃತ್ತಿಯಲ್ಲಿ ಹಾವಾಡಿಗರಾಗಿದ್ದು, ಲಂಕಾದಲ್ಲಿ ಅಸ್ಪೃಶ್ಯರಂತೆ ಬದುಕುತ್ತಿದ್ದಾರೆ. ಇವರು, ಲಂಕಾದ ಮೂಲ ನಿವಾಸಿಗಳಾಗಿದ್ದು, ಭಾರತದಿಂದ ವಲಸೆ ಹೋದವರಲ್ಲ ಎಂಬುದು ತಿಳಿದುಬಂದಿದೆ. ಇದು ತೆಲುಗು ಭಾಷೆಯ ಉಗಮದ ಪರಿಕಲ್ಪನೆಗೆ ಹೊಸ ಆಯಾಮ ಕಲ್ಪಿಸಿದ್ದು, ಇದರ ಅಧ್ಯಯನಕ್ಕಾಗಿ ಆಂಧ್ರ ಸರಕಾರದ ಮಾನವ ಶಾಸ್ತ್ರಜ್ಞರು, ಭಾಷಾ ತಜ್ಞರು ಸದ್ಯದಲ್ಲೇ ಶ್ರೀಲಂ ಕಾಕ್ಕೆ ಪ್ರವಾಸ ಹೋಗಲಿದ್ದಾರೆ. ಅಧ್ಯಯನ ತಂಡದ ಸದಸ್ಯರನ್ನು ಆಂಧ್ರ ಹಾಗೂ ತೆಲಂಗಾಣ ಸರಕಾರಗಳು ಆರಿಸಲಿವೆ” ಎಂದಿದ್ದಾರೆ. 

ಇದಲ್ಲದೆ, “1817ರಲ್ಲಿ ಬ್ರಿಟಿಷರು ಶ್ರೀಲಂಕಾ ವನ್ನು ವಶಪಡಿಸಿಕೊಳ್ಳುವ ಮುನ್ನ ಇದ್ದ ಆ ದೇಶದ ಕೊನೆಯ ರಾಜ, ತೆಲುಗು ಮೂಲದವ ಆಗಿದ್ದರಿಂದ ಈ ಹಿನ್ನೆಲೆಯಲ್ಲಿ, ಅಹಿಕುಂಟಕ ಜನಾಂ ಗದ ಅಧ್ಯಯನ ಮಾಡ ಲಾಗುವುದು” ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next