ಹೈದರಾಬಾದ್: ಕಿರುತೆರೆ ನಟಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗಿನ ಹೆಸರಾಂತ ನಿರ್ಮಾಪಕರೊಬ್ಬರನ್ನು ಬಂಧಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ. ಈಗಾಗಲೇ ಬಾಲಿವುಡ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿರುವ ನಡುವೆ ತೆಲುಗು ಸಿನಿಮಾರಂಗದಲ್ಲಿ ಈ ಘಟನೆ ನಡೆದಿದೆ.
ಹೈದರಾಬಾದ್ ನ ಮಧುರಾ ನಗರದಲ್ಲಿರುವ ಅಪಾರ್ಟ್ ಮೆಂಟ್ ನ ಬಾತ್ ರೂಂನಲ್ಲಿ ಟೆಲಿವಿಷನ್ ನಟಿ ಕೊಂಡಪಲ್ಲಿ ಶ್ರಾವಣಿ ಸೆಪ್ಟೆಂಬರ್ 8ರಂದು ಶವವಾಗಿ ಪತ್ತೆಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ತೆಲುಗಿನ ಬ್ಲಾಕ್ ಬಸ್ಟರ್ “ಆರ್ ಎಕ್ಸ್ 100” ಸಿನಿಮಾದ ನಿರ್ಮಾಪಕ ಅಶೋಕ್ ರೆಡ್ಡಿಯನ್ನು ಬುಧವಾರ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಶ್ರಾವಣಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಸಾಯಿ ಕೃಷ್ಣ ರೆಡ್ಡಿ ಮತ್ತು ದೇವರಾಜ್ ರೆಡ್ಡಿ ಕೂಡಾ ಆರೋಪಿಗಳಾಗಿದ್ದಾರೆ. ಇಬ್ಬರನ್ನೂ ಬಂಧಿಸಿದ್ದು, ಸೋಮವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪರಸ್ತ್ರೀ ಜೊತೆ ಸಂಗ ಮಾಡಿದ ತಂದೆ! ಚಿನ್ನಾಭರಣ ಮಾರಿ ತನ್ನ ಮಗನ ಹತ್ಯೆಗೆ ಸುಪಾರಿ ನೀಡಿದ
2018ರಲ್ಲಿ ತನಗೂ, ಸಾಯಿ ಕೃಷ್ಣ ರೆಡ್ಡಿಗೂ ಸಂಬಂಧ ಇದ್ದಿರುವುದಾಗಿ ಹೇಳಿದ್ದಳು. ನಂತರ ಅಶೋಕ್ ರೆಡ್ಡಿ ಹಾಗೂ ದೇವರಾಜ್ ರೆಡ್ಡಿ ಜತೆಗೂ ಇದ್ದಿರುವುದಾಗಿ ತಿಳಿಸಿದ್ದಳು. ಇಬ್ಬರನ್ನೂ ಟಿಕ್ ಟಾಕ್ ಮೂಲಕ ಭೇಟಿಯಾಗಿ ಪರಿಚಯವಾಗಿರುವುದಾಗಿ ವಿವರಿಸಿದ್ದಳು.
ನಟಿ ಶ್ರಾವಣಿ ಅಶೋಕ್ ರೆಡ್ಡಿಯನ್ನು ಭೇಟಿಯಾಗಿದ್ದು, ಪ್ರೇಮತೋ ಕಾರ್ತಿಕ್ ಎಂಬ ತೆಲುಗು ಸಿನಿಮಾ ನಿರ್ಮಾಣದ ಸಂದರ್ಭದಲ್ಲಿ. ಈಕೆ ಆತ್ಮಹತ್ಯೆಗೂ ಮುನ್ನ ಕೊನೆಯದಾಗಿ ಕರೆ ಮಾಡಿದ್ದು ದೇವರಾಜ್ ರೆಡ್ಡಿಗೆ. ನನಗೆ ಮೂವರ ಕಿರುಕುಳ ತಾಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ ಎಂದು ವರದಿ ಹೇಳಿದೆ.
ಕೊಂಡಪಲ್ಲಿ ಶ್ರಾವಣಿ ತೆಲುಗಿನ ಜನಪ್ರಿಯ ಸೀರಿಯಲ್ ಗಳಾದ “ ಮನಸು ಮಮತಾ” ಹಾಗೂ ಮೌನರಾಗಂನಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಳು. ಈಕೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನಿವಾಸಿಯಾಗಿದ್ದು, ಕಳೆದ ಎಂಟು ವರ್ಷಗಳಿಂದ ಟಿವಿ ಸೀರಿಯಲ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಳು ಎಂದು ವರದಿ ತಿಳಿಸಿದೆ.