Advertisement

ಮಕ್ಕಳಿಗೆ ದೇಶದ ಪರಂಪರೆ ತಿಳಿಸಿ

08:10 AM Aug 04, 2020 | Suhan S |

ಕುದೂರು: ಯೋಗ, ಆಯುರ್ವೇದ, ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಭಾರತ ಜಗತ್ತಿನ ಇತಿಹಾಸದಲ್ಲಿ ಮುಂದಿದ್ದು ಇಂತಹ ದೇಶದ ಪರಂಪರೆಯನ್ನು ಇಂದಿನ ಮಕ್ಕಳಿಗೆ ತಿಳಿಸಬೇಕಾದ ಜವಾಬ್ದಾರಿ ಸಮಾಜದ ಹಿರಿಯರ ಮೇಲಿದೆ ಎಂದು ಅಖೀಲ ಭಾರತ ಹಿಂದೂ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಶಿವೋಹಂ ಮಿಶ್ರ ತಿಳಿಸಿದರು.

Advertisement

ಕುದೂರು ಹೋಬಳಿ ಆಲದಕಟ್ಟೆ ಗ್ರಾಮದ ಸೋಹಂ ಆಯುರ್‌ ಯೋಗಾ ಶ್ರಮಕ್ಕೆ ಭೇಟಿ ನೀಡಿ ಯೋಗ ಮತ್ತು ಆಯುರ್ವೇದದ ಕುರಿತು ಮಾತನಾಡಿ, ಸ್ವಚ್ಛ ಭಾರತ ಎನ್ನುವ ಪರಿಕಲ್ಪನೆ ಪ್ರತಿ ಮನೆ ಮತ್ತು ಬೀದಿಗಳಿಂದ ಆರಂಭಗೊಳ್ಳಬೇಕು. ಬೀದಿಗಳೆಲ್ಲಾ ಸ್ವಚ್ಛವಾದರೆ ಇಡೀ ಗ್ರಾಮ ಸ್ವಚ್ಛವಾಗುತ್ತದೆ. ಎಂದರು.

ಆಯುರ್‌ ವನ ನಿರ್ಮಾಣ: ಆಯುರ್‌ ಯೋಗದ ಸಂಸ್ಥಾಪಕ ಅಧ್ಯಕ್ಷ ಸೋಹಂ ಗುರೂಜಿ ಮಾತನಾಡಿ, ಗುಜರಾತ್‌ನ ಸ್ವಚ್ಛ ಭಾರತ ಅಭಿಯಾನದ ವಿಶೇಷ ರಾಯಭಾರಿಯಾಗಿರುವ ಶಿವೋಹಂ ಮಿರ್ಶ ಅವರ ಕಾರ್ಯವೈಖರಿ ಖುಷಿ ಕೊಟ್ಟಿತು. ನಮ್ಮ ಆಶ್ರಮದ ಪಕ್ಕದಲ್ಲಿ ಗಿಡಮೂಲಿಕೆಗಳ ವನ ನಿರ್ಮಿಸಲು ನಿರ್ಧರಿಸಿದ್ದು ಸಿದ್ಧತೆ ನಡೆಯುತ್ತಿವೆ ಎಂದು ಹೇಳಿದರು.

ಆಚಾರ್ಯ ತ್ರಿವೇದಿ, ಪ್ರತಿಯೊಂದನ್ನೂ ಪ್ರಶ್ನೆ ಮಾಡುವುದು ಕುತೂಹಲವಾದರೆ ಅದಕ್ಕೊಂದು ಅರ್ಥವಿರುತ್ತದೆ. ಆದರೆ ಅದೊಂದು ಚಟವಾದರೆ ಕೇವಲ ಕಂಠ ಶೋಷಣೆಯಾಗುತ್ತದೆ ಎಂದರು. ಭಾರತೀಯ ಪದ್ಧತಿಯಲ್ಲಿನ ಆಚರಣೆಗಳು ಹೇಗೆಲ್ಲಾ ವೈಜಾnನಿಕತೆ ನೆಲೆಗಟ್ಟಿನಲ್ಲಿದ್ದವು ಎಂಬುದರ ಕುರಿತು ಚರ್ಚಾಗೋಷ್ಠಿ ನಡೆಯಿತು. ಆಶ್ರಮದಲ್ಲಿ ನಿರ್ಮಾಣ ಗೊಂಡಿರುವ ಕಪ್ಪುಶಿಲೆ ಹನುಮಂತ  ಮೂರ್ತಿಗೆ ಪೂಜೆ ಸಲ್ಲಿಸಿದರು. ಮುಂಬೈ ರಾಜಕೀಯ ಮುಖಂಡ ಸೋಲಂಕಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next